ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಡಿ.20:
ಎಳ್ಳು ಅಮವಾಸ್ಯೆೆ ಎಂದರೆ ರೈತರಿಗೆ ಎಲ್ಲಿಲ್ಲದ ಸಂಭ್ರಮ. ಹೊಲದಲ್ಲಿ ಹುಲುಸಾಗಿ ಬೆಳೆದ ಬೆಳೆಗೆ ಎಳ್ಳ ಅಮವಾಸ್ಯೆೆಯಂದು ಆಹಾರ ಪದಾರ್ಥ ಚರಗ ಚೆಲ್ಲಿ ಸಹಪರಿವಾರ ಸಮೇತರಾಗಿ ಊಟ ಸವಿದು ಸಂಭ್ರ ಮಿಸುವುದು ಈ ದಿನದ ವಿಶೇಷ ಆಚರಣೆಯಾಗಿದೆ.
ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಕುಸುಬೆ, ಗೋದಿ ಈ ಬಾರಿ ಹುಲುಸಾಗಿ ಬೆಳೆದಿದ್ದು ಹಿಂಗಾರು ಬೆಳೆ ಚೆನ್ನಾಾಗಿ ಬರಲೆಂದು ಭೂಮಿತಾಯಿಗೆ ಪೂಜೆ ಸಲ್ಲಿಸುತ್ತಾಾರೆ. ಹೊಲದಲ್ಲಿ ಬನ್ನಿಿಗಿಡ ಅಥವಾ ಇನ್ನಾಾವುದೊ ಮರದ ಕೆಳಗೆ ಪಾಂಡವರ ಕಲ್ಲುಗಳನ್ನಿಿಟ್ಟು ಅವರಿಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸುವ ಮನೆಯಿಂದ ತಂದ ಸಿಹಿ ಸಮೇತ ಆಹಾರ ಪದಾರ್ಥಗಳನ್ನು ಜಮೀನಿನ ಸುತ್ತಲು ಚರಗ ಚೆಲ್ಲುವ ಪದ್ದತಿ ಹಿಂದಿನಿಂದಲೂ ರೂಢಿಯಲ್ಲಿದ್ದು ನಮಗೆ ಅನ್ನ ನೀಡುವ ಭೂತಾಯಿಗೆ ಊಣಬಡಿಸುವ ಈ ಕಾರ್ಯಕ್ರಮ ರೈತರಿಂದ ಎಲ್ಲೆೆಡೆ ನಡೆಯುತ್ತದೆ.
ಅಂತೆಯೇ ತಾಲೂಕಿನ ಸರ್ಜಾಪೂರ, ಹೊನ್ನಳ್ಳಿಿ, ಯರಡೋಣಿ ಮೇದಿನಾಪುರ, ಕೋಠಾ ಆನೆಹೊಸೂರು ಮಾವಿನಬಾವಿ ಸೇರಿ ಎಲ್ಲೆೆಡೆ ರೈತರು ಬೆಳಗಿನಿಂದಲೆ ಎಳ್ಳುಹೋಳಿಗೆ ಚಿತ್ರಾಾನ್ನ ಬಗೆಬಗೆಯ ಊಟದ ತಿನಿಸು ಮಾಡಿಕೊಂಡು ಬುತ್ತಿಿ ಕಟ್ಟಿಿಕೊಂಡು ಎಲ್ಲರೂ ಹೊಸಬಟ್ಟೆೆ ಧರಿಸಿ ಎತ್ತಿಿನಗಾಡಿ, ಟ್ರ್ಯಾಾಕ್ಟರ್, ಕಾಲುನಡಿಗೆ ಮೂಲಕ ತಮ್ಮ ತಮ್ಮ ಹೊಲಕ್ಕೆೆ ಕುಟುಂಬ ಸಮೇತ ಆಗಮಿಸಿ ಭೂ ದೇವಿಗೆ ಪೂಜೆ ಸಲ್ಲಿಸಿ ಬಂಧು ಬಾಂಧವರ ಸ್ನೇಹಿತರ ಜತೆ ಎಲ್ಲರೂ ಒಂದೆಡೆ ಕುಳಿತು ಸಹಭೋಜನ ಮಾಡುವುದು ಸಾಮಾನ್ಯವಾಗಿ ಕಂಡು ಬಂತು.
ಸುಗ್ಗಿಯ ಹಬ್ಬ ಎಳ್ಳ ಅಮವಾಸ್ಯೆ ಜಮೀನಿನಲ್ಲಿ ಚರಗ ಚೆಲ್ಲಿ ರೈತರ ಸಂಭ್ರಮ

