ಸುದ್ದಿಮೂಲ ವಾರ್ತೆ
ಬೆಂಗಳೂರು.ಮೇ12: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 12 ನೇ ತರಗತಿ ಫಲಿತಾಂಶವು ಇಂದು ಪ್ರಕಟಗೊಂಡಿದೆ.
ಈ ವರ್ಷ ಒಟ್ಟು 16,60511 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು, ಒಟ್ಟು 14,50174 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶವು ಪ್ರಕಟಗೊಂಡಿರುವ ಹಿನ್ನೆಲೆ ಉತ್ತೀರ್ಣರಾದ ವಿದ್ಯಾರ್ಥಿಗಳ ಮೆರಿಟ್ ಪಟ್ಟಿಯನ್ನು ಸಿಬಿಎಸ್ಇ ಮಂಡಳಿ ಪ್ರಕಟಿಸಿದೆ.
ಬಾರಿಯೂ ಕೂಡ ಮಹಿಳೆಯರೆ ಮೇಲುಗೈ ಸಾಧಿಸಿದ್ದಾರೆ ಫಲಿತಾಂಶದಲ್ಲಿ ಶೇ 90.68% ರಷ್ಟು ವಿದ್ಯಾರ್ಥಿನಿಯರು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, 84.67% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಮತ್ತು ಇತರೆ ತೃತೀಯ ಲಿಂಗಿ ವಿದ್ಯಾರ್ಥಿಗಳು ಶೇ.60 % ರಷ್ಟು ಫಲಿತಾಂಶವನ್ನು ಹೊಂದಿದ್ದಾರೆ.
ವಿದ್ಯಾರ್ಥಿಗಳು ಈ ವೆಬ್ ಸೈಟ್ ಮೂಲಕ cbse.gov.in, cbseresults.nic.in ಮತ್ತು results.cbse.nic.in ಸೇರಿದಂತೆ ಅಧಿಕೃತ ವೆಬ್ಸೈಟ್ಗಳಿಂದ ಫಲಿತಾಂಶವನ್ನು ಡೌನ್ಲೋಡ್ ಮಾಡಬಹುದಾಗಿರುತ್ತದೆ
ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ, ಲೋಗಿನ್ ಪುಟ ತೆರೆಯುತ್ತದೆ. ಕ್ಲಿಕ್ ಮಾಡಿ ರೋಲ್ ನಂ ಅಥವಾ ಜನ್ಮ ಸಂಖ್ಯೆಯನ್ನು ನಮೂದಿಸುವುದರ ಮೂಲಕ ನಿಮ್ಮ ಅಂಕ ಪಟ್ಟಿಯನ್ನು ಪಡೆಯ ಬಹುದು ಮತ್ತು ಮಂಡಳಿಯು ಫಲಿತಾಂಶವನ್ನು IVRS ಅಥವಾ SMS ಮೂಲಕವು ಒದಗಿಸುತ್ತದೆ.