ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ರಾಜ್ಯದ ಎಲ್ಲ ಇಲಾಖೆಗಳ ಸಿವಿಲ್ ಹುದ್ದೆಗಳ ನೇಮಕಾತಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡುವ ಮೂಲಕ ಸರ್ಕಾರ ಉತ್ತಮ ನಿರ್ಧಾರ ಮಾಡಿದೆ ಎಂದು ಉದ್ಯೋೋಗಾಕಾಂಕ್ಷಿಗಳ ಹೋರಾಟ ಸಮಿತಿ ಸ್ವಾಾಗತಿಸಿದೆ.
ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಿಯೆ ವಿಳಂಬವಾಗಿರುವ ಹಿನ್ನೆೆಲೆಯಲ್ಲಿ, ರಾಜ್ಯದಲ್ಲಿ 2027ರ ಡಿಸೆಂಬರ್ 31 ರ ವರೆಗೆ ನಡೆಯುವ ಎಲ್ಲ ಸಿವಿಲ್ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಿಲಿಕೆಯ ಬಳಸಿಕೊಂಡು ಖಾಲಿಯಿರುವ ಎಲ್ಲ ಹುದ್ದೆ ಭರ್ತಿ ಮಾಡಬೇಕು, ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ವಯೋಮಿತಿ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತತ ಹೋರಾಟಕ್ಕೆೆ ಸಂದ ಜಯವಾಗಿದೆ.ಉದ್ಯೋೋಗಾಕಾಂಕ್ಷಿ ಯುವಜನರು ಸಂಘಟಿತರಾಗಿ ಹೋರಾಟವನ್ನು ಮುಂದುವರಿಸಬೇಕು ಎಂದು ಉದ್ಯೋೋಗಾಕಾಂಕ್ಷಿಗಳ ಹೋರಾಟ ಸಮಿತಿ ಮನವಿ ಮಾಡುತ್ತದೆ ಎಂದು ರಾಜ್ಯ ಸಹ ಸಂಚಾಲಕ ಚನ್ನಬಸವ ಜಾನೇಕಲ್ ತಿಳಿಸಿದ್ದಾಾರೆ.

