ಸುದ್ದಿಮೂಲ ವಾರ್ತೆ
ಚೇಳೂರು,ನ.30: ಚಿಕ್ಕಬಳ್ಳಾಪುರದ ನೂತನ ಚೇಳೂರು ತಾಲೂಕಿನ ಕೃಷಿ ಇಲಾಖೆಯಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡದೆ ನಿರ್ಲಕ್ಯ ವಹಿಸಿದ್ದಾರೆ.
ದುರಂತ ಎಂದರೆ ಈ ಬಾರಿ ಕೇವಲ ಕನಕದಾಸರ ಜಯಂತಿ ಅಷ್ಟೇ ಅಲ್ಲ ಯಾವುದೇ ರಾಷ್ಟೀಯ ಹಬ್ಬಗಳು ಈ ಚೇಳೂರು ಕೃಷಿ ಇಲಾಖೆ ಕಚೇರಿನಲ್ಲಿ ಆಚರಣೆ ಮಾಡುತ್ತಿಲ್ಲ. ಬದಲಿಗೆ ರಾಷ್ಟ್ರೀಯ ಹಬ್ಬಗಳ ದಿನದಂದು ಕಚೇರಿ ಮುಚ್ಚಿ ಅಧಿಕಾರಿಗಳು ರಜೆ ತೆರಳುತಾರೆ ಎಂದು ಇಲಾಖೆ ಹಾಗು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಚೇರಿನಲ್ಲಿ ಸುಮಾರು ವರ್ಷಗಳಿಂದ ರಾಷ್ಟ್ರೀಯ ಹಬ್ಬಗಳಾಗಲಿ, ವ್ಯಕ್ತಿಗಳ ಜಯಂತಿ ಆಚರಣೆ ಆಗಲಿ ಮಾಡಲ್ಲ. ಏಕೆ ಎಂದು ಸಾರ್ವಜನಿಕರ ಪ್ರಶ್ನೆ, ಬಾಗೇಪಲ್ಲಿ ತಾಲೂಕು ಕೃಷಿ ಇಲಾಖೆ ಉಪ ನಿರ್ದೇಶಕರೇ ಚೇಳೂರು ತಾಲೂಕಿನ ಕೃಷಿ ಇಲಾಖೆಯ ಉಪ ನಿರ್ದೇಶಕ ಸ್ಥಾನದ ಹೆಚ್ಚುವರಿ ಜವಾಬ್ದಾರಿಯಲ್ಲಿದ್ದಾರೆ. ಇವರು ಒಂದೂ ರಾಷ್ಟ್ರೀಯ ಹಬ್ಬವನ್ನು ಸಹ ಚೇಳೂರು ಕೃಷಿ ಇಲಾಖೆಯಲ್ಲಿ ನೆರವೇರಿಸುವುದಿಲ್ಲ. ಇದು ಚೇಳೂರು ತಾಲೂಕಿನ ಜನರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳದೆ ಇದೆ ನಿರ್ಲಕ್ಷ್ಯ ವಹಿಸಿದರೆ, ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.