ಸುದ್ದಿಮೂಲ ವಾರ್ತೆ
ಮೈಸೂರು, ಆ.16:ಕಿಂಗ್ ಫಿಶರ್ ಬಿಯರ್ ನಲ್ಲಿ ಅಪಾಯಕಾರಿ ಸೆಡಿಮೆಂಟ್ ಎಂಬ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆ ಮೈಸೂರಿನಲ್ಲಿ 25 ಕೋಟಿ ಮೌಲ್ಯದ ಕಿಂಗ್ ಫಿಶರ್ ಬಿಯರ್ ಜಪ್ತಿ ಮಾಡಲಾಗಿದೆ.
ಈ ಬಗ್ಗೆ ಮೈಸೂರು ಗ್ರಾ. ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಮಾಹಿತಿ ನೀಡಿದ್ದು, ನಂಜನಗೂಡಿನ ಘಟಕದಲ್ಲಿ ತಯಾರಿಸಲಾಗಿದ್ದ ಬಿಯರ್ ಸ್ಟ್ರಾಂಗ್ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದ.
ನಂಜನಗೂಡು ಯುನೈಟೆಡ್ ಬ್ರಿವರಿಸ್ ಘಟಕದಲ್ಲಿ 2023 ಜುಲೈ 15 ರಂದು ತಯಾರಾಗಿದ್ದ ಕಿಂಗ್ ಫೀಷರ್ ಬಿಯರ್ ನಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದೆ. ಒಟ್ಟು 78,678 ಬಿಯರ್ ಬಾಕ್ಸ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಉತ್ತಮ ಗುಣಮಟ್ಟದ ಬಿಯರ್ ತಯಾರಿಸದ ಕಾರಣ ಎಫ್ಐಆರ್ ದಾಖಲಾಗಿದ್ದು, ಬಿಯರ್ನಲ್ಲಿ ರಾಸಾಯನಿಕ ಅಂಶ ಶೇಖರಣೆ ಬಗ್ಗೆ ಪ್ರಯೋಗಾಲಯದಲ್ಲಿ ದೃಢಗೊಂಡ ಬೆನ್ನಲ್ಲೇ ಅಂಗಡಿಗಳಿಗೆ ವಿತರಣೆ ಮಾಡದಂತೆ ಅಬಕಾರಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.