ಸುದ್ದಿಮೂಲ ವಾರ್ತೆ ಮಸ್ಕಿಿ, ಡಿ.11:
ಕಲ್ಯಾಾಣ ಕರ್ನಾಟಕದಲ್ಲಿ ಅನೇಕ ಜನ ಶರಣರು ಸಂತರಲ್ಲಿ ಕನಕಗಿರಿ ಮತ್ತು ಮೆದಕಿನಾಳ ಸಂಸ್ಥಾಾನ ಮಠದ ಲಿಂ.ಚೆನ್ನಮಲ್ಲ ಶಿವಯೋಗಿಗಳು ಮಹಾ ತಪಸ್ವಿಿಗಳಾಗಿದ್ದರು.ತ್ರಿಿಕಾಲ ಪೂಜಾ ನಿಷ್ಠರಾಗಿದ್ದರು.ಹಲವು ಭಾಷಾ ಪಂಡಿತರಾಗಿದ್ದರು ಎಂದು ಸಂತೆಕೆಲ್ಲೂರು ಘನಮಠೇಶ್ವರ ಮಠದ ಪೀಠಾಧಿಪತಿ ಶ್ರೀ ಗುರುಬಸವ ಮಹಾಸ್ವಾಾಮೀಜಿ ಹೇಳಿದರು.
ತಾಲ್ಲೂಕಿನ ಮೆದಕಿನಾಳ ಗ್ರಾಾಮದಲ್ಲಿ ಗುರುವಾರ ನಡೆದ ಲಿಂ.ಚೆನ್ನಮಲ್ಲ ಶಿವಯೋಗಿಗಳ 70ನೇ ವರ್ಷದ ಜಾತ್ರಾಾ ಮಹೋತ್ಸವ, ಸಾಮೂಹಿಕ ವಿವಾಹ ಹಾಗೂ 1008, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಹೈದ್ರಾಾಬಾದ್ ನಿಜಾಮ್ ಲಿಂ.ಚೆನ್ನಮಲ್ಲ ಶಿವಯೋಗಿಗಳನ್ನು ತನ್ನ ಗುರುಗಳೆಂದು ಸ್ವೀಕರಿಸಿದ್ದಲ್ಲದೆ ಈ ಭಾಗದಲ್ಲಿ ಜಮೀನು ಉಂಬಳಿಯಾಗಿ ದಾನ ನೀಡಿ ಧಾರ್ಮಿಕ ಕಾರ್ಯ ನಡೆಸಲು ಸಹಕರಿಸಿದ್ದ ಎಂದರು.
ನಂತರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ಗ್ರಾಾಮೀಣ ಪ್ರದೇಶದ ಜನರಲ್ಲಿ ಶ್ರೀಮಠದ ಪೀಠಾಧಿಪತಿ ಡಾ.ಚೆನ್ನಮಲ್ಲ ಸ್ವಾಾಮೀಜಿ ಧಾರ್ಮಿಕ ಅರಿವು ಮೂಡಿಸುವುದರ ಜೊತೆಗೆ ಅನಗತ್ಯವಾಗಿ ದುಂದು ಹಣ ವೆಚ್ಚ ಮಾಡದೆ ಸಾಮೂಹಿಕ ಉಚಿತ ವಿವಾಹ ಏರ್ಪಡಿಸಿ ದಂಪತಿಗಳಿಗೆ ಹೊಸ ಬದುಕಿನ ದಾರಿ ತೋರಿಸುತ್ತಿಿರುವ ಕಾರ್ಯ ಶ್ಲಾಾಘನೀಯವಾಗಿದೆ ಎಂದರು.
ಈ ವೇಳೆ ಶ್ರೀಮಠದ ಪೀಠಾಧಿಪತಿ ಡಾ.ಚೆನ್ನಮಲ್ಲ ಸ್ವಾಾಮೀಜಿ, ಅಂಕುಶದೊಡ್ಡಿಿಯ ವಾಮದೇವ ಶಿವಾಚಾರ್ಯರು ಆಶೀವರ್ಚನ ನೀಡಿದರು.
ವೇದಿಕೆಯ ಮೇಲೆ ಡಾ.ಮಲ್ಲಿಕಾರ್ಜುನ ಕೆ, ಪಿಎಸ್ಐ ಕೆ.ರಂಗಯ್ಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿಿತರಿದ್ದರು. ಸಂಜೆ ಚೆನ್ನಮಲ್ಲ ಶಿವಯೋಗಿ ನೂತನ ರಥೋತ್ಸವ ಜರುಗಿತು ಈ ಸಂದರ್ಭದಲ್ಲಿ ಬಂದಂತ ಭಕ್ತಾಾದಿಗಳು ಬಾಳೆಹಣ್ಣು, ಉತ್ತತ್ತಿಿ ರಥೋತ್ಸವಕ್ಕೆೆ ಎಸೆಯೋ ಮೂಲಕ ತಮ್ಮ ಬೇಡಿಕೆಗಳನ್ನು ಬೇಡಿಕೊಂಡರು.
ವಿಜೃಂಭಣೆಯಿಂದ ಜರುಗಿದ ಮೆದಿಕಿನಾಳ ಚೆನ್ನಮಲ್ಲ ಶಿವಯೋಗಿ ನೂತನ ರಥೋತ್ಸವ

