ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.7: ಕಾಂಗ್ರೆಸ್ ಸಚಿವ ಚಲುವರಾಯಸ್ವಾಮಿ ಆವರು ಕಾಂಗ್ರೆಸ್ ಭರವಸೆಗಳು ಚುನಾವಣಾ ಗಿಮಿಕ್ ಎಂದು ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನೀವು ಐದು ಗ್ಯಾರಂಟಿ ಕೊಟ್ಟಿದ್ದೀರಿ. ಅವನ್ನು ಈಡೇರಿಸಿ. ಎಲ್ಲರಿಗೂ ಉಚಿತ ಕೊಡಿ. ಶರ್ತ ಬೇಡ ಎಂದು ಆಗ್ರಹಿಸಿದರು. ಶರ್ತದ ಮೂಲಕ ಮೋಸ ಮಾಡುತ್ತಿದ್ದೀರಲ್ಲವೇ ಎಂದು ಆಕ್ಷೇಪ ಸೂಚಿಸಿದರು.
ಹಿಂದೆ ಪಡೆದ ಡೆಪಾಸಿಟ್ ಕುರಿತು ಸರ್ಕಾರ ಉತ್ತರಿಸಬೇಕು. ಅದರ ವಿವರ ಕೊಡಿ ಎಂದು ಒತ್ತಾಯಿಸಿದರು. ಫಿಕ್ಸೆಡ್ ಚಾರ್ಜ್ ಹೆಚ್ಚಳ ಆಕ್ಷೇಪಾರ್ಹ. ಇದು ವಂಚನೆಯ ಕೆಲಸ ಎಂದು ಟೀಕಿಸಿದರು.
ಗ್ಯಾರಂಟಿ ಜಾರಿ ಬಗ್ಗೆ ಶ್ವೇತಪತ್ರ ಹೊರಡಿಸಿ. ದಲಿತರ ಅನುದಾನದ ಬಳಕೆ ವಿವರ ಕೊಡಿ ಎಂದರು.