ಸುದ್ದಿಮೂಲ ವಾರ್ತೆ ಸಿಂಧನೂರು, ಜ.29:
ಲಿಂಗಸ್ಗೂರು ತಾಲೂಕಿನ ತಿಂಥಿಣಿಯಲ್ಲಿ ಕಲ್ಬುರ್ಗಿ ವಿಭಾಗದ ಕನಕಗುರುಪೀಠದ ಪೀಠಾಧಿಪತಿಯಾಗಿದ್ದ ಸಿದ್ದರಾಮಾನಂದ ಪುರಿ ಮಹಾಸ್ವಾಾಮಿಗಳ ಅಕಾಲಿಕ ನಿಧನದ ಹಿನ್ನಲೆಯಲ್ಲಿ ೆ-1 ರಂದು ನುಡಿನಮನ ಕಾರ್ಯಕ್ರಮ ನಡೆಯಲಿದ್ದು, ಸಿಂಧನೂರು ತಾಲೂಕಿನಿಂದ ಹೆಚ್ಚಿಿನ ಸಂಖ್ಯೆೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಬೇಕು ಎಂದು ತಾಲೂಕಾ ಹಾಲುಮತ ಸಮಾಜದ ಅಧ್ಯಕ್ಷ ಕೆ.ಭೀಮಣ್ಣ ವಕೀಲ ಮನವಿ ಮಾಡಿದರು.
ನಗರದ ಪತ್ರಿಿಕಾ ಭವನದಲ್ಲಿ ಗುರುವಾರ ಪತ್ರಿಿಕಾಗೋಷ್ಟಿಿಯುದ್ದೇಶಿಸಿ ಅವರು ಮಾತನಾಡಿದರು. ಶ್ರೀಗಳ ಆತ್ಮಕ್ಕೆೆ ಚಿರಶಾಂತಿ ಕೋರಿ ಜ-31 ರಂದು ಸುಮಾರು 60 ಕ್ಕೂ ಹೆಚ್ಚು ಮಠಾಧೀಶರಿಂದ ವಿವಿಧ ಧಾರ್ಮಿಕ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ೆ-1 ರಂದು ನುಡಿನಮನ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿಿ ಸಿದ್ದರಾಮಯ್ಯ, ಪಿಡಬ್ಲ್ಯೂಡಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸೇರಿದಂತೆ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಮಾಜದ ರಾಜ್ಯಮಟ್ಟದ ಮುಖಂಡರು ಭಾಗವಹಿಸಲಿದ್ದಾಾರೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ಪೂರ್ವ ಸಿದ್ದತೆಗಳು ನಡೆದಿವೆ ಎಂದರು.
ಕನಕಗುರುಪೀಠದ ತಾಲೂಕಾಧ್ಯಕ್ಷ ಅಮರೇಶಪ್ಪ ಮೈಲಾರ ಮಾತನಾಡಿ, ಸಿದ್ದರಾಮಾನಂದ ಪುರಿ ಮಹಾಸ್ವಾಾಮಿಗಳ ಅಕಾಲಿಕ ನಿಧನ ಸಮಾಜಕ್ಕೆೆ ಅಪಾರ ದುಃಖ ಉಂಟುಮಾಡಿದೆ. ಧಾರ್ಮಿಕ, ಶೈಕ್ಷಣಿಕ ಜಾಗೃತಿಯಲ್ಲಿ ಅವರ ಕೊಡುಗೆ ಸಮಾಜಕ್ಕೆೆ ಅಪಾರವಾಗಿದೆ. ನುಡಿನಮನ ಕಾರ್ಯಕ್ರಮದಲ್ಲಿ ಸುಮಾರು 50-60 ಸಾವಿರ ಜನ ಸೇರುವ ನಿರೀಕ್ಷೆಯಿದೆ. ತಾಲೂಕಿನಿಂದಲೂ ಹೆಚ್ಚಿಿನ ಸಂಖ್ಯೆೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಹಾಲುಮತ ಸಮಾಜದ ಪ್ರಧಾನ ಕಾರ್ಯದರ್ಶಿ ಸುರೇಶ ಹಚ್ಚೊೊಳ್ಳಿಿ, ಮಾಜಿ ಅಧ್ಯಕ್ಷ ಎಂ.ಲಿಂಗಪ್ಪ, ಕನಕ ನೌಕರರ ಸಂಘದ ಜಿಲ್ಲಾಾಧ್ಯಕ್ಷ ನಾಗರಾಜ ಅರಳಿಮರದ್, ಪಿಡಿಓ ಹುಚ್ಚಪ್ಪ ನೇಗಲಿ, ಮುಖಂಡರಾದ ಮಲ್ಲಪ್ಪ ಮೈಲಾರ, ನಾಗರಾಜ ಬಾದರ್ಲಿ, ಬಸವರಾಜ ಗೊರೇಬಾಳ, ಟಿ.ಶಿವು ಸೇರಿದಂತೆ ಅನೇಕರು ಇದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಪಿಡಬ್ಲ್ಯೂಡಿ ಸಚಿವ ಸತೀಶ ಜಾರಕಿಹೊಳಿ ಭಾಗಿ ೆ-1 ರಂದು ಲಿಂ.ಸಿದ್ದರಾಮಾನಂದ ಪುರಿ ಸ್ವಾಮಿಗಳಿಗೆ ನುಡಿನಮನ

