ಸುದ್ದಿಮೂಲ ವಾರ್ತೆ ಸಿಂಧನೂರು, ಜ.03:
ಕಲ್ಯಾಾಣ ಕರ್ನಾಟಕ ಭಾಗದ ಸುಪ್ರಸಿದ್ದ ಯಾತ್ರಾಾಸ್ಥಳ, ದೇಶದ ಎರಡನೇ ಶಕ್ತಿಿ ಪೀಠ, ಸಿಂಧನೂರು ತಾಲೂಕಿನ ಸಿದ್ದಪರ್ವತ ಅಂಬಾಮಠದ ಅಂಬಾದೇವಿ ಜಾತ್ರಾಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಅದ್ದೂರಿ ರಥೋತ್ಸವ ನಡೆಯಿತು.
ಇದೇ ಮೊದಲ ಬಾರಿಗೆ ಹಮ್ಮಿಿಕೊಳ್ಳಲಾಗಿದ್ದ ಜಂಬೂ ಸವಾರಿಗೆ ಪುಷ್ಪವೃಷ್ಠಿಿ ಮಾಡುವ ಮೂಲಕ ಮುಖ್ಯಮಂತ್ರಿಿ ಸಿದ್ದರಾಮಯ್ಯ ಜಾತ್ರಾಾ ಮಹೋತ್ಸವಕ್ಕೆೆ ಅದ್ದೂರಿ ಚಾಲನೆ ನೀಡಿದರು. ನಂದಿಕೋಲು ಕುಣಿತ, ಡೊಳ್ಳು ಕುಣಿತ, ಭಜನಾ, ಪುರೋಹಿತರ ಮಂತ್ರ ಘೋಷಗಳೊಂದಿಗೆ ಲಕ್ಷಾಂತರ ಭಕ್ತಾಾದಿಗಳ ನಡುವೆ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಆರಂಭಗೊಳ್ಳುತ್ತಿಿದ್ದಂತೆ ಭಕ್ತರು ಹೂ, ಬಾಳೆ ಹಣ್ಣು, ಉತ್ತುತ್ತಿಿ ಎಸೆದು ಭಕ್ತಿಿ ಸಮರ್ಪಿಸಿದರು. ಇನ್ನೂ ಕೆಲವರಂತೂ ಬಾಳೆ ಹಣ್ಣಿಿಗೆ ತಮ್ಮ ಹೆಸರು, ಸಿರಿ ಸಂಪತ್ತು, ಆರೋಗ್ಯ ಕರುಣಿಸಲಿ ಎಂದು ಬರೆದು ರಥಕ್ಕೆೆ ಎಸೆದರು. ಜಾತ್ರಾಾ ನಿಮಿತ್ಯ ಬೆಳಗಿನಿಂದಲೇ ಅಂಬಾದೇವಿಗೆ ಮೂರ್ತಿಗೆ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾಾರ್ಚನೆ, ವಿಶೇಷ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಸತೀಷ ಜಾರಕಿಹೊಳಿ, ಮುಜರಾಯಿ, ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿಿ, ರಾಯಚೂರು ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕೊಪ್ಪಳ ಜಿಲ್ಲಾಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಾಳ, ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಬಿ.ಎಂ.ನಾಗರಾಜ, ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ, ವಸಂತಕುಮಾರ, ಕ-ಕ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್, ಪ್ರದೇಶಿಕ ಆಯುಕ್ತೆೆ ಗೈರಾನ ಹುಸೇನ, ಜಿಲ್ಲಾಾಧಿಕಾರಿ ನಿತೀಶ ಕೆ, ತಹಶೀಲ್ದಾಾರ ಅರುಣ ಹೆಚ್.ದೇಸಾಯಿ, ಟಿಎಪಿಸಿಎಂಎಸ್ನ ಅಧ್ಯಕ್ಷ ಶರಣಪ್ಪ ರಡ್ಡೇರ್, ಪಿಕಾರ್ಡ್ ಬ್ಯಾಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿ ತಾಲೂಕಾಧ್ಯಕ್ಷ ವೈ.ಅನಿಲಕುಮಾರ, ಅಂಬಾದೇವಿ ದೇವಸ್ಥಾಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಸೋಮಲಾಪುರ ಗ್ರಾಾ.ಪಂ.ಅಧ್ಯಕ್ಷೆ ರೇಣುಕಮ್ಮ, ರಾಜುಗೌಡ ಬಾದರ್ಲಿ, ಸೇರಿದಂತೆ, ಸಿಂಧನೂರು, ಮಸ್ಕಿಿ, ಮಾನ್ವಿಿ, ಲಿಂಗಸೂಗೂರು, ಸಿರಗುಪ್ಪ, ತಾವರಗೇರಾ, ರಾಯಚೂರು, ಗಂಗಾವತಿ, ಬಾಗಲಕೋಟ, ಬೆಳಗಾವಿ, ವಿಜಯಪುರ ಸೇರಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಂದ ಸುಮಾರು ಮೂರ್ನಾಲ್ಕು ಲಕ್ಷ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಮೊದಲ ಬಾರಿಗೆ ಅಂಬಾರಿ:
ಅಂಬಾದೇವಿ ಜಾತ್ರಾಾ ಮಹೋತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಿಿದ್ದರು. ರಥೋತ್ಸವ ಮಾತ್ರ ಇಲ್ಲಿಯವರೆಗೆ ನಡೆದುಕೊಂಡು ಬಂದಿತ್ತು. ಸಿಂಧನೂರಿನಲ್ಲಿ ಕಳೆದೆರಡು ವರ್ಷಗಳಿಂದ ಅದ್ದೂರಿ ದಸರಾ ಮಹೋತ್ಸವ ಹಾಗೂ ಜಂಬೂ ಸವಾರಿ ಮಾಡಿ ಯಶಸ್ವಿಿಯಾದ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ಅಂಬಾಮಠದ ಜಾತ್ರಾಾ ಮಹೋತ್ಸವದಲ್ಲಿ ಜಂಬೂ ಸವಾರಿ ನಡೆಯಿತು. ಮುಖ್ಯಮಂತ್ರಿಿ ಸಿದ್ದರಾಮಯ್ಯ ಜಂಬೂ ಸವಾರಿಗೆ ಚಾಲನೆ ನೀಡಿದರು.
ವಿಶಾಲವಾದ ರಥ ಬೀದಿ:
ಇಲ್ಲಿಯವರೆಗೆ ರಥ ಬೀದಿ ಚಿಕ್ಕಿಿದ್ದರಿಂದ ರಥೋತ್ಸವದ ಸಂದರ್ಭದಲ್ಲಿ ನೂಕು ನುಗ್ಗಲು, ತಳ್ಳಾಾಟ ನಡೆಯುವದು ಸಾಮಾನ್ಯವಾಗಿತ್ತು. ಆದರೆ ಪ್ರಸಕ್ತ ವರ್ಷ ಸುಮಾರು 130 ಅಡಿಗಳಷ್ಟು ವಿಶಾಲವಾರ ರಥ ಬೀದಿ ನಿರ್ಮಾಣ ಮಾಡಿದ್ದರಿಂದ ಹಾಗೂ ಪೊಲೀಸರ ಕಟ್ಟುನಿಟ್ಟಿಿನ ಕ್ರಮಗಳಿಂದ ಸರಾಗವಾಗಿ ರಥೋತ್ಸವ ನಡೆಯಿತು.
ಹೆಚ್ಚುವರಿ ಬಸ್ಗಳ ವ್ಯವಸ್ಥೆೆ:
ಅಂಬಾದೇವಿ ಮಹಾರಥೋತ್ಸವ ಹಾಗೂ ಜಂಬೂ ಸವಾರಿ ನಿಮಿತ್ತ ಸಿಂಧನೂರು ಬಸ್ ಡಿಪೋದಿಂದ ಸುಮಾರು 15ಕ್ಕೂ ಹೆಚ್ಚು ಬಸ್ಗಳನ್ನು ಭಕ್ತರ ಪ್ರಯಾಣದ ಅನುಕೂಲಕ್ಕಾಾಗಿ ಸಂಚಾರಕ್ಕೆೆ ಬಿಡಲಾಗಿತ್ತು. ಸಿಂಧನೂರಿನ ಬಸ್ ನಿಲ್ದಾಾಣ ಮತ್ತು ಅಂಬಾಮಠದ ಸರ್ಕಾರಿ ಪ್ರೌೌಢ ಶಾಲೆಯ ಮುಂಭಾಗದಲ್ಲಿ ಬಸ್ಗಳ ನಿಲುಗಡೆಗೆ ವ್ಯವಸ್ಥೆೆ ಕಲ್ಪಿಿಸಲಾಗಿತ್ತು. ಜೊತೆಗೆ ಸಿರಗುಪ್ಪ, ಬಳ್ಳಾಾರಿ, ರಾಯಚೂರು, ಮಾನ್ವಿಿ, ಮಸ್ಕಿಿ ಡಿಪೋದಿಂದಲೂ ಜಾತ್ರಾಾ ಮಹೋತ್ಸವ ಅಂಗವಾಗಿ ವಿಶೇಷ ಬಸ್ಗಳನ್ನು ವ್ಯವಸ್ಥೆೆ ಕಲ್ಪಿಿಸಲಾಗಿತ್ತು. ಜಾತ್ರಾಾ ಮಹೋತ್ಸವ ಹಾಗೂ ಮುಖ್ಯಮಂತ್ರಿಿಗಳ ಕಾರ್ಯಕ್ರಮದ ಹಿನ್ನಲೆಯಲ್ಲಿ ಅಂಬಾಮಠದಲ್ಲಿ ಪೊಲೀಸ್ ಇಲಾಖೆಯಿಂದ ಕಟ್ಟೆೆಚ್ಚರ ವಹಿಸಲಾಗಿತ್ತು.

