ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.29:
ಖರೀದಿ ಕೇಂದ್ರ ಪ್ರಾಾರಂಭ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.3ಕ್ಕೆೆ ತಾಲ್ಲೂಕಿಗೆ ಆಗಮಿಸುವ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ರೈತರಿಂದ ಕಪ್ಪುುಪಟ್ಟಿಿ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಗಿ ಹೇಳಿದರು.
ಸೋಮವಾರ ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿನಡೆಸಿ ಮಾತನಾಡಿದರು. ಸರ್ಕಾರಕ್ಕೆೆ ರೈತರು ಸಲ್ಲಿಸಿದ ಮನವಿಗಳು ಹೆಸರಿಗೆ ಮಾತ್ರ ಆಗಿವೆ. ಯಾವುದೂ ಕಾರ್ಯರೂಪಕ್ಕೆೆ ಬರುತ್ತಿಿಲ್ಲ. ಸರ್ಕಾರ ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಾಾ, ರೈತರನ್ನು ಸಂಕಷ್ಟಕ್ಕೆೆ ದೂಡಿದೆ. ಚುನಾವಣಾ ಪೂರ್ವ ಕೊಟ್ಟ ಭರವಸೆಗಳು ಹುಸಿಯಾಗಿವೆ. ಸಂಪೂರ್ಣ ಸಾಲ ಮನ್ನಾಾ ಆಗಿಲ್ಲ. ಉಚಿತ ವಿದ್ಯುತ್ ಪೂರೈಕೆ ಮರೀಚಿಕೆಯಾಗಿದೆ. ಸಿಂಧನೂರಿಗೆ ಆಗಮಿಸುವ ಮುಖ್ಯಮಂತ್ರಿಿಗಳು ರೈತರ ಬೇಡಿಕೆಗಳ ಬಗ್ಗೆೆ ಉತ್ತರಿಸಬೇಕು ಎಂದು ಒತ್ತಾಾಯಿಸಿದರು.
ಜೋಳ ಖರೀದಿ ಎಕರೆಗೆ 15ಕ್ವಿಿಂಟಲ್ ಇದ್ದು, ಅದನ್ನು 20 ಕ್ವಿಿಂಟಲ್ಗೆ ಹೆಚ್ಚಿಿಸಬೇಕು. ಭತ್ತದ ಕಳಪೆ ರಸಗೊಬ್ಬರ, ಬೀಜ ಮಾರಾಟ ಮಾಡಿದ ನಂದಿಹಾಳ ಸೋನಾ ಬಿಪಿ-2 ನೀಲಕಂಠೇಶ್ವರ ಸೀಡ್ಸ್ ವಿರುದ್ಧ ಕ್ರಮಜರುಗಿಸಬೇಕು. ಕಳಪೆ ರಸಗೊಬ್ಬರದಿಂದ ಹಾನಿಗೊಳಗಾದ ಭತ್ತ ಬೆಳೆದ ರೈತರಿಗೆ ಪರಿಹಾರ ನೀಡಬೇಕು. ಜೋಳ ಖರೀದಿ ಹಾಗೂ ನೊಂದಣಿ ನಡೆಸಬೇಕು. ತೊಗರಿ ಖರೀದಿ ಕೇಂದ್ರ ಸ್ಥಾಾಪಿಸಿ, ನೊಂದಣಿ ಪ್ರಾಾರಂಭಿಸಬೇಕು. ರಾಜ್ಯ ಸರಕಾರ ಪ್ರೋೋತ್ಸಾಾಹಧನ ಘೋಷಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾಧ್ಯಕ್ಷ ಬಸವರಾಜ ಹಂಚಿನಾಳ, ಮುಖಂಡರಾದ ಖಾದರ್ ಸಾಬ ಜಾಲಿಹಾಳ, ಹುಚ್ಚಪ್ಪ ಬನ್ನದ್, ಇಸ್ಮಾಾಯಿಲ್ ಸಾಬ್, ಯುಸ್ೂ ಸಾಬ್ ಕುನ್ನಟಗಿ, ಅಣ್ಣಪ್ಪ ಜಾಲಿಹಾಳ ಇತರರು ಇದ್ದರು.
ರೈತರ ಸಮಸ್ಯೆಗಳನ್ನು ಆಲಿಸದ ಮುಖ್ಯಮಂತ್ರಿಗಳು ಸಿದ್ದರಾಮಯ್ಯರಿಗೆ ಕಪ್ಪುಪಟ್ಟಿ ಪ್ರದರ್ಶನಕ್ಕೆ ತೀರ್ಮಾನ – ದಿದ್ದಗಿ

