ಸುದ್ದಿಮೂಲ ವಾರ್ತೆ
ತಿಪಟೂರು,ಜೂ.23 : ಇಲ್ಲಿನ ತೆಂಗಿನಕಾಯಿ ಕಾರ್ಖಾನೆಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೂಲಿ ಕಾರ್ಮಿಕರಾಗಿರುವುದು ಕಂಡುಬಂದಿದೆ.
ತಿಪಟೂರು ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಸುಮಾರು 40ಕ್ಕೂ ಹೆಚ್ಚು ತೆಂಗಿನ ಕಾಯಿ ಫ್ಯಾಕ್ಟರಿಗಳು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ತಾಲೂಕಿನ ಕಾರ್ಮಿಕರನ್ನು ಹೊರತುಪಡಿಸಿ ಹೊರರಾಜ್ಯಗಳಿಂದ ಉದ್ಯೋಗ ಅರಸಿ ಬಂದಿರುವ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ತೆಂಗಿನ ಕಾಯಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಶೌಚಾಲಯ, ಸ್ನಾನಗೃಹ, ನೀರಿನ ವ್ಯವಸ್ಥೆ, ಕೆಲಸಗಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ತೆಂಗಿನ ಕಾಯಿ ಫ್ಯಾಕ್ಟರಿ ಮಾಲೀಕರು, ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇರುವುದರಿಂದ ಮಹಿಳೆಯರು ಮತ್ತು ಕಾರ್ಮಿಕರು ಬಯಲು ಶೌಚ ಉಪಯೋಗಿಸುತ್ತಿದ್ದಾರೆ. ಕುಡಿಯಲು, ಸ್ವಚ್ಚಗೊಳಿಸಲು ಶುದ್ಧ ನೀರಿಲ್ಲದೆ ಕೊಳಚೆ ನೀರನ್ನೇ ಅವಲಂಬಿಸಿಕೊಂಡಿದ್ದಾರೆ.
ಈ ಬಗ್ಗೆ ಫ್ಯಾಕ್ಟರಿ ಮಾಲೀಕರು ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ. ಕಾರ್ಮಿಕರು ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎನ್ನುತ್ತಾರೆ.