ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ಬಾಲ್ಯ ವಿವಾಹವು ಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೆ ಪಾಲಕರು ತಮ್ಮ ಮಗಳು ಅಥವಾ ಮಗನಿಗೆ ಬಾಲ್ಯ ವಿವಾಹ ಮಾಡುವುದರಿಂದ ಅವರ ಉನ್ನತ ಸಾಧನೆಗೆ ಪಾಲಕರೆ ಅಡ್ಡಿಿಪಡಿಸಿದಂತೆ, ಮಕ್ಕಳ ಜೀವನದ ಉನ್ನತ ಗುರಿ ಸಾಧನೆಗಾಗಿ ಹೆಣ್ಣಿಿಗೆ 18 ವರ್ಷ ಗಂಡಿಗೆ 21 ವರ್ಷ ತುಂಬುವವರೆಗೂ ಮದುವೆ ಮಾಡದಂತೆ ಮುಂದಾಗಬೇಕು ಎಂದು ಕಲ್ಮಲ ಪ್ರಾಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಾಧಿಕಾರಿ ಡಾ.ರಮೇಶ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯೋಗದಲ್ಲಿ ಇತ್ತಿಿಚೀಗೆ ತಾಲೂಕಿನ ಕಲ್ಮಲ ಗ್ರಾಾಮದ ಮೆಟ್ರಿಿಕ್ ಪೂರ್ವ ವಸತಿ ನಿಲಯದಲ್ಲಿ ಪ್ರೌೌಢ ಶಾಲಾ ಮಕ್ಕಳಿಗೆ ಹಮ್ಮಿಿಕೊಂಡ ಬಾಲ್ಯವಿವಾಹ ತಡೆ ಹಾಗೂ ಪೋಕ್ಸೊೊ ಕಾಯ್ದೆೆಯ ಜಾಗೃತಿ ಕುರಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಋತುಚಕ್ರ ಆರಂಭವಾದ ತಕ್ಷಣ ಮದುವೆ ಮಾಡುವ ದುಡುಕಿನ ನಿರ್ಧಾರಗಳಿಂದ ದೈಹಿಕವಾಗಿ ಗರ್ಭಕೋಶವು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯಾಗದೆ ಗರ್ಭಪಾತ, ಮಗು ಸತ್ತು ಹುಟ್ಟುವುದು, ದಿನತುಂಬದ ಹೆರಿಗೆ, ಬಾಲ್ಯದಲ್ಲಿ ಅಪೌಷ್ಟಿಿಕತೆ, ಅಕಾಲಿಕ ಗರ್ಭಧಾರಣೆ, ಹೆರಿಗೆಯಲ್ಲಿನ ತೊಡಕುಗಳು, ಮಗುವಿನ ಲಾಲನೆ ಪಾಲನೆಯ ಮಾಹಿತಿ ಕೊರತೆ ಕಾರಣದಿಂದ ಮಗು ಅಪೌಷ್ಟಿಿಕತೆಗೆ ತುತ್ತಾಾಗುತ್ತದೆ. ಈ ಹಿನ್ನಲೆ ಬಾಲ್ಯ ವಿವಾಹ ತಡೆ ಎಲ್ಲರೂ ಶ್ರಮಿಸೊಣವೆಂದು ತಿಳಿಸಿದರು.
ಶಾಲಾ ಮುಖ್ಯಗುರು ಚಿತ್ರಾಾಬಾಯಿ ಮಾತನಾಡಿದರು.ಈ ವೇಳೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಅವರು ಮಾತನಾಡಿದರು.
ಸ್ನೇಹಾ ಕ್ಲಿಿನಿಕ್ ಸದ್ಭಳಕೆ ಮಾಡಿಕೊಳ್ಳಿಿ: ರಾಷ್ಟ್ರೀಯ ಕಿಶೋರಿ ಸ್ವಾಾಸ್ತ್ಯ ಕಾರ್ಯಕ್ರಮದಡಿಯಲ್ಲಿ ಸ್ನೇಹಾ ಕ್ಲಿಿನಿಕ್ಗಳ ಮೂಲಕ ಹದಿಹರೆಯದ ಆರೋಗ್ಯ ಸಮಸ್ಯೆೆಗಳಿಗೆ ಆಪ್ತ ಸಮಾಲೋಚನೆಗಾಗಿ ಆರೋಗ್ಯ ಕೇಂದ್ರಗಳಲ್ಲಿ ಅವಕಾಶ ಕಲ್ಪಿಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆೆ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ನಿಲಯ ಪಾಲಕರಾದ ರಂಗನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಭಾನುಕಾಂತ ರೆಡ್ಡಿಿ, ಹಿರಿಯ ಪಿಹೆಚ್ಸಿಿಓ ರೇಣುಕಾ, ಶಿಕ್ಷಕರಾದ ರಮೇಶ, ಪಿಹೆಚ್ಸಿಿಓ ರಸೂಲ್ಬಿಿ, ಹೆಚ್ಐಓ ಮಹಾಲಕ್ಷ್ಮಿಿ, ಆಶಾ ಕಾರ್ಯಕರ್ತೆ ಶಂಕ್ರಮ್ಮ, ನಾಗಮ್ಮ ಸೇರಿದಂತೆ ಶಾಲಾ ಮಕ್ಕಳು ಇದ್ದರು.
ಮಕ್ಕಳ ಜೀವನದ ಗುರಿಸಾಧನೆಗೆ ಬಾಲ್ಯವಿವಾಹದಿಂದ ಅಡ್ಡಿ: ಡಾ ರಮೇಶ

