ಸುದ್ದಿಮೂಲ ವಾರ್ತೆ ಮುದಗಲ್, ಡಿ.04:
ಸಮೀಪದ ತಲೇಖಾನ್ ಸಿಆರ್ಸಿ ವ್ಯಾಾಪ್ತಿಿಯ ಉನ್ನತೀಕರಿಸಿದ ಹಡಗಲಿ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಗೆ ಬೆಂಗಳೂರು ಕೃತಗ್ಯತಾ ಟ್ರಸ್ಟನವರು ಸುಣ್ಣ-ಬಣ್ಣ ಮಾಡಿಸಿ ಶಾಲೆಗೆ ಮೆರಗು ತಂದಿದ್ದಕ್ಕೆೆ ಶಾಲಾ ಮಕ್ಕಳ ಮೊಗದಲ್ಲಿ ಸಂತಸ ಮನೆ ಮಾಡಿತ್ತು.
ಪ್ರಸ್ತುತ ಶಾಲೆಯಲ್ಲಿ 1ರಿಂದ8ನೇ ತರಗತಿಯವರೆಗೆ 193 ವಿದ್ಯಾಾರ್ಥಿಗಳು ವಿದ್ಯಾಾಭ್ಯಾಾಸ ಮಾಡುತ್ತಿಿದ್ದು. ಶಾಲೆಯ 10 ಕೋಣೆಗಳು ಹಾಗೂ ಕಂಪೌಂಡ್ ಸಹಿತ ಶಾಲೆಗೆ ಸುಣ್ಣ-ಬಣ್ಣ ಕಾಣದೆ ಬಹಳ ವರ್ಷಗಳಾಗಿದ್ದವು. ಆದರೆ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ನವರು ಶಾಲೆಗೆ ಸುಣ್ಣ-ಬಣ್ಣ ಮಾಡಿಸಿ ಸಹಾಯ ಮಾಡಿದ್ದಾಾರೆ. ಇದರಿಂದ ಮಕ್ಕಳ ಬಣ್ಣ ಬಣ್ಣದ ಕನಸುಗಳಿಗೆ ಶಾಲೆಯ ಕೊಠಡಿಗಳಿಗೆ ಮತ್ತು ಕಂಪೌಂಡಿಗೆ ಹೊಸ ರೂಪ ನೀಡಲಾಗಿದೆ. ನಮ್ಮ ಶಾಲೆಗೆ ಹೊಸದಾಗಿ ಸುಣ್ಣ ಬಣ್ಣ ಹಚ್ಚಿಿದಾಗಿನಿಂದ ಮಕ್ಕಳು ಪ್ರತಿ ದಿನ ಖುಷಿಯಿಂದ ಶಾಲೆಗೆ ಬರುತ್ತಿಿದ್ದಾಾರೆ, ಅಲ್ಲದೇ ಇದರಿಂದ ಮಕ್ಕಳ ಹಾಜರಾತಿಯೂ ಹೆಚ್ಚಾಾಗಿದೆ ಎಂದು ಪ್ರಭಾರಿ ಮುಖ್ಯಶಿಕ್ಷಕಿ ಅನಿತಾ ತಿಳಿಸಿದರು.
ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ನವರು ಲಿಂಗಸುಗೂರು ತಾಲೂಕಿನ ಶಾಲೆಗಳಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಇದೀಗ ಹಡಗಲಿ ಶಾಲೆಗೆ ಹೊಸದಾಗಿ ಸುಣ್ಣ ಬಣ್ಣ ಮಾಡಿಸಿ ಶಾಲೆಗೆ ಹೊಸ ರೂಪ ನೀಡಿದ್ದಕ್ಕಾಾಗಿ ಕೃತಗ್ಯತಾ ಟ್ರಸ್ಟ್ ಹಾಗೂ ಅದರ ಸ್ಥಾಾಪಕರಾದ ಶ್ರೀಮತಿ ಅರುಣಾ ದಿವಾಕರ್ ರವರಿಗೆ ಇಲಾಖೆ ವತಿಯಿಂದ ಅಭಿನಂದನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರು ತಿಳಿಸಿದರು.
ಶಿಕ್ಷಕಿಯರಾದ ಸುಜಾತ, ರೇಖಾ, ಅತಿಥಿ ಶಿಕ್ಷಕರು, ಅತಿಥಿ ಶಿಕ್ಷಕಿಯರು, ಜನತಾಪುರ ಶಾಲೆಯ ಶಿಕ್ಷಕ ಮೌನೇಶ್ವರಚಾರಿ ಎಂ ಉಪಸ್ಥಿಿತರಿದ್ದರು.
ಸರ್ಕಾರಿ ಶಾಲೆಗೆ ಬಣ್ಣದ ಮೆರಗು ; ಮಕ್ಕಳಲ್ಲಿ ಹರ್ಷ

