ಸುದ್ದಿಮೂಲ ವಾರ್ತೆ ಮಸ್ಕಿ, ಡಿ.08:
ತಾಲೂಕಿನ ಗುಡದೂರು ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಗುಡದೂರು ಗ್ರಾಾಮ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಗುರುವಾರದಂದು ಮಕ್ಕಳ ಗ್ರಾಾಮ ಸಭೆ ನಡೆಸಲಾಯಿತು.
ಈ ವೇಳೆ ಪಿಡಿಓ ಕೃಷ್ಣ ಹುನಗುಂದ ಮಾತನಾಡಿ, ಸಂವಿಧಾನ ಮೂಲ ಆಶಯದಂತೆ ಸ್ಥಳೀಯ ಸರ್ಕಾರಗಳು ಸ್ಥಾಾಪಿತವಾಗಿದ್ದು, ಗ್ರಾಾಮ ಪಂಚಾಯಿತಿಗಳು ಗ್ರಾಾಮೀಣ ಭಾಗದ ಅಭಿವೃದ್ಧಿಿಗಾಗಿ ಸ್ಥಾಾಪಿತವಾದ ಸ್ವತಂತ್ರ ಕಚೇರಿಗಳಾಗಿದ್ದು, ಇಲ್ಲಿಗೆ ಮಕ್ಕಳು ಸಹ ಬಂದು ಸೌಲಭ್ಯ ಪಡೆಯಬಹುದು ಹಾಗೂ ಮಕ್ಕಳು ಇಂದಿನ ಪ್ರಜೆಗಳು ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಈ ವಯಸ್ಸಿಿನಲ್ಲೇ ಹೆಚ್ಚು ಅವಕಾಶ ಕೊಡಬೇಕು. ವಿದ್ಯಾಾರ್ಥಿಗಳು ನೀವು ಓದುವ ಶಾಲೆ ಅಥವಾ ವಾಸಿಸುವ ಸ್ಥಳದಲ್ಲಿ ಅಗತ್ಯ ಮೂಲಭೂತ ಸೌಲಭ್ಯಕ್ಕಾಾಗಿ ಗ್ರಾಾಪಂ ಸಂಪರ್ಕಿಸಬಹುದು ಎಂದು ತಿಳಿಸಿದರು.
ನಂತರ ಅಂಗನವಾಡಿ ಮೇಲ್ವಿಿಚಾರಕಿ ರಾಧಾ.ಡಿ ಮಕ್ಕಳ ಸಹಾಯವಾಣಿ 1098 ಕುರಿತು ಮಾತನಾಡಿದರು, 18 ವರ್ಷದ ಒಳಗಿನ ಹೆಣ್ಣು ಮಗುವಿಗೆ ಅಥವಾ 21 ವರ್ಷದ ಒಳಗಿನ ಗಂಡು ಮಗುವಿನ ಮದುವೆ ಮಾಡಿದರೆ ಅದು ಬಾಲ್ಯ ವಿವಾಹ ಆ ಸಂದರ್ಭದಲ್ಲಿ ಸ್ಥಳೀಯರು 1098 ಗೆ ಕರೆ ಮಾಡಿ ಸಹಾಯ ಪಡೆಯಿರಿ ಹಾಗೂ ಆ ಊರಿನ ಶಾಲಾ ಮುಖ್ಯ ಶಿಕ್ಷಕರು ಅಥವಾ ಗ್ರಾಾ.ಪಂ ಪಿಡಿಓ ರವರ ಗಮನಕ್ಕೆೆ, ಅಥವಾ ಅಂಗನವಾಡಿ ಶಿಕ್ಷಕಿಯರ, ಮೇಲ್ವಿಿಚಾರಕರ ಗಮನಕ್ಕೆೆ ತರಲು ತಿಳಿಸಿದರು. ಹಾಗೂ ಎಲ್ಲರೂ ಕಡ್ಡಾಾಯವಾಗಿ ಶಾಲೆಗೆ ಹೋಗಿ ಶಿಕ್ಷಣ ಕಲಿಯಬೇಕು. ಶಾಲೆ ಬಿಟ್ಟ ಮಕ್ಕಳ ಕುರಿತು ಮಾಹಿತಿ ನೀಡಲು, ಹಾಗೂ ಕಡ್ಡಾಾಯ ಶಿಕ್ಷಣ, ಮಕ್ಕಳ ಸಹಾಯವಾಣಿ, ಬಾಲ್ಯ ವಿವಾಹ ನಿಷೇಧ, ಮಕ್ಕಳ ರಕ್ಷಣೆ, ಕಾವಲು ಕುರಿತು ಸವಿಸ್ತಾಾರವಾಗಿ ವಿವರಣೆ ತಿಳಿಸಿದರು.
ಈ ವೇಳೆ ಮೇರನಾಳ ಅಂಗನವಾಡಿ ಕೇಂದ್ರಕ್ಕೆೆ ಹಾಗೂ ಪರಾಪುರ ಸರಕಾರಿ ಕಿರಿಯ ಉರ್ದು ಪ್ರಾಾಥಮಿಕ ಶಾಲೆಗೆ ಗ್ರಾಾಮ ಪಂಚಾಯಿತಿ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ನೀಡಲಾಯಿತು.
ಈ ಸಂದರ್ಭದಲ್ಲಿ ಪಿಡಿಓ ಕೃಷ್ಣ ಹುನಗುಂದ, ರಮೇಶ ಹೆಡಗಿಬಾಳ್ ಕ್ಯಾಾಂಪ್, ಗುಡದೂರು ಶಾಲೆಯ ವಿದ್ಯಾಾರ್ಥಿಗಳು, ಶಿಕ್ಷಕರು, ಅಂಗನವಾಡಿ ಮೇಲ್ವಿಿಚಾರಕರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಾಮ ಪಂಚಾಯಿತಿ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿಿತರಿದ್ದರು.
ಮಸ್ಕಿ : ಗುಡದೂರು ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ

