ಸುದ್ದಿಮೂಲವಾರ್ತೆ
ಕೊಪ್ಪಳ, ಮೇ 26:ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮಕ್ಕಳ ಭವಿಷ್ಯ ಉತ್ತಮವಾಗಿರಬೇಕೆನ್ನುವುದು ಎಲ್ಲಾ ತಂದೆ ತಾಯಿಗಳ ಆಶಯ. ಮಗುವನ್ನು ಶಾಲೆಗೆ ಕಳುಹಿಸುವ ಮುನ್ನ ದೇವರಲ್ಲಿ ಪ್ರಾರ್ಥಿಸುವುದು ಇಲ್ಲಿವೇ ಗುರುಗಳಿಂದ ಓಂ ನಾಮ ಬರೆಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಇಂದು ಕೊಪ್ಪಳ ಗವಿಮಠದಲ್ಲಿ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಸಾವಿರಾರು ವಿದ್ಯಾರ್ಥಿಗಳು ಅಕ್ಷರಾಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಸುತ್ತಲಿನ ಜಿಲ್ಲೆಗಳಿಂದಲೂ ಪಾಲಕರು ಆಗಮಿಸಿದ್ದರು.
ಜೂನ್ ಮೊದಲು ವಾರದಲ್ಲಿ ಶಾಲಾ ಕಾಲೇಜುಗಳು ಆರಂಭವಾಗುತ್ತಿವೆ. ಜೂನ ತಿಂಗಳಿನಿಂದ ಶಾಲೆಗೆ ಹೋಗುವ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂಬ ಉದ್ದೇಶದಿಂದ ಪಾಲಕರು ಮಕ್ಕಳಿಗೆ ಗುರುಗಳ ಬಳಿ ಅಕ್ಷರ ಅಭ್ಯಾಸ ಮಾಡಿಸುತ್ತಾರೆ. ಇದೇ ಕಾರಣಕ್ಕೆ ಇಂದು ಕೊಪ್ಪಳದ ಗವಿಮಠದಲ್ಲಿ ಈಗಿನ ಸ್ವಾಮೀಜಿ ಶ್ರೀಗವಿಸಿದ್ದೇಶ್ವರ ಸ್ವಾಮಿಗಳಿಂದ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದರು. ಇಂದು ಬೆಳಗ್ಗೆನಿಂದ ಸಾವಿರಾರು ಜನ ಪಾಲಕರು ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಬಂದಿರುವವರೆಲ್ಲರೂ ಬಳಪ. ಪಾಟಿ. ಪೆನ್. ನೋಟ್ ಬುಕ್. ಅಕ್ಕಿಯನ್ನು ತಂದಿದ್ದರು. ಸಾಲು ಗಟ್ಟಿ ನಿಂತು ಒಬ್ಬೊಬ್ಬರಾಗಿಯೇ ಸ್ವಾಮೀಜಿಗಳಿಂದ ತಮ್ಮ ಮಕ್ಕಳಿಗೆ ಅಕ್ಷರ ಬರೆಯುವದನ್ನು ಮೊದಲು ಮಾಡಿಸಿದರು.
ಕೊಪ್ಪಳದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಗಳು ನಡೆದಾಡುವ ದೇವರು ಎಂಬ ನಂಬಿಕೆ ಇದೆ. ಅವರಿಂದ ಅಕ್ಷರಾಭ್ಯಾಸ ಮಾಡಿಸಿದರು. ಸ್ವಾಮೀಜಿಗಳು ಮಕ್ಕಳನ್ನು ಮುದ್ದಾಗಿ ಕರೆದು ಅವರ ಕೈ ಹಿಡಿದು ಅಕ್ಷರ ಕಲಿಕೆ ಆರಂಭಿಸಿದರು. ಸ್ವಾಮೀಜಿಗಳಿಂದ ಅಕ್ಷರಾಭ್ಯಾಸ ಮಾಡಿಸಿದರೆ ಮಕ್ಕಳ ಭವಿಷ್ಯ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ ಎಂದರು ಮಹಾದೇವಿ.
ಬಳ್ಳಾರಿ. ಗದಗ. ರಾಯಚೂರು ಜಿಲ್ಲೆ ಸೇರಿ ವಿವಿಧೆಡೆ ಮಕ್ಕಳನ್ನು ಕರೆದುಕೊಂಡು ಬಂದ ಪಾಲಕರು ಸ್ವಾಮೀಜಿಗಳಿಂದ ಅಕ್ಷರ ಕಲಿಕೆ ಮುನ್ನುಡಿ ಬರೆಸಿದರು. ಮುಂದಿನ ದಿನಗಳಲ್ಲಿ ನಮ್ಮ ಮಗನಿಗೆ ಅಕ್ಷರಗಳ ಓದಿನಿಂದ ಸಾಕಷ್ಟು ಸಾಧನೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿದ ಸ್ವಾಮೀಜಿಗಳು ಅಕ್ಷರ ಅಭ್ಯಾಸಕ್ಕೆ ಬಂದವರಿಗೆ ಚಾಕಲೇಟ್ ನೀಡಿ ಬಾಯಿ ಸಿಹಿ ಮಾಡಿಸಿದರು. ಇದೇ ವೇಳೆ ಸರಸ್ವತಿ ಪೂಜೆಯನ್ನು ಸಹ ಮಾಡಲಾಗಿತ್ತು. ಪ್ರತಿ ತಾಯಂದಿರು ಸ್ವಾಮೀಜಿಗಳಿಂದ ತಮ್ಮ ಮಕ್ಕಳು ಅಕ್ಷರಾಭ್ಯಾಸ ಮಾಡುವದನ್ನು ಸೆಲ್ಫಿ ಫೋಟೊ ತೆಗೆದುಕೊಂಡು ಈ ಕ್ಷಣವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿಕೊಂಡಿದ್ದು ಕಂಡು ಬಂತು.