ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.7: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ , ಸಾಕ್ಷರತಾ ಇಲಾಖೆ ಸಹಯೋಗದೊಂದಿಗೆ 31 ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ಅಂಗವಾಗಿ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ
ಕಾರ್ಯಾಗಾರ ಹಮ್ಮಿಕೊಂಡಿತ್ತು.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ವಿ.ಎನ್. ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಮತ್ತು ತಾಂತ್ರಿಕ ವಿಭಾಗದಲ್ಲಿ ತರಬೇತಿ ನೀಡಿದ ನಂತರ
ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವುದು ಮುಖ್ಯ ಕೆಲಸವಾಗಿರುತ್ತದೆ. 10 ರಿಂದ 17 ವರ್ಷದ ಮಕ್ಕಳನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಬೇಕಾಗಿದೆ. ಇವರಲ್ಲಿ ವಯಸ್ಸಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಇಂತಹ ಮಕ್ಕಳಿಗೆ ಜಿಲ್ಲಾ ಸಂಯೋಜಕರು ಹೆಚ್ಚು ಅವಕಾಶಗಳನ್ನು ನೀಡಬೇಕಾಗಿದೆ ಎಂದು ಸಲಹೆ ನೀಡಿದರು.
ರಾಜ್ಯಾಧ್ಯಕ್ಷರಾದ ಗಿರೀಶ್ ಬಿ. ಕಡ್ಳೆವಾಡ ಮಾತನಾಡಿ, ಕ.ರಾ.ವಿ.ಪರಿಷತ್ ನಲ್ಲಿ ಹಣಕಾಸಿನ ಕೊರತೆ ಇದ್ದರೂ ಸಹ ಯಾವುದೇ ಕಾರ್ಯಕ್ರಮಗಳನ್ನು ನಿಲ್ಲಿಸದೆ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯದಲ್ಲಿ
ಹೆಚ್ಚಿನ ವಿಜ್ಞಾನ ಶಿಕ್ಷಕರು ಭಾಗವಹಿಸಿ ತರಬೇತಿ ಪಡೆದು ಹೆಚ್ಚಿನ ಯೋಜನೆಗಳನ್ನು ನಿರ್ವಹಿಸುವಂತೆ ಜಿಲ್ಲಾ ಸಂಯೋಜಕರಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಸಂಯೋಜಕರಾದ ಹೆಚ್.ಜಿ.ಹುದ್ದರ್, ರಾಜ್ಯ ಕೋಶಾಧ್ಯಕ್ಷ ಹೆಚ್.ಎಸ್.ಸ್ವಾಮಿ, ಕ.ರಾ.ವಿ.ಪ ಕಛೇರಿ ವ್ಯವಸ್ಥಾಪಕರಾದ ಪ್ರಭು ಎಸ್.ಮಠ್, ಜಿಲ್ಲಾಸಂಯೋಜಕರುಗಳಾದ ಕೆ.ವಿ.ಶ್ರೀಕಾಂತ್, ರಾಜಶೇಖರ್, ಮಂಜುಳಾ ಬಾಯಿಭಾಗವಹಿಸಿದ್ದರು.