ಸುದ್ದಿಮೂಲ ವಾರ್ತೆ ಬೀದರ್, ಸೆ.28:
ನಿರಂತರ ಮಳೆಯಿಂದಾಗಿ ಬೀದರ್ ಉತ್ತರ ವಿಧಾನಸಭೆ ತತ್ತರಿಸಿದೆ. ಚಿಮ್ಮಕೋಡ್ – ಚಿಲ್ಲರ್ಗಿ ಸಮೀಪ ಹರಿಯುವ ಮಾಂಜ್ರಾಾ ನದಿ ನೀರು ನುಗ್ಗಿಿ ಸಾವಿರಾರು ಎಕರೆ ಬೆಳೆ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ಮಾಂಜ್ರಾಾ ನದಿ ನೀರು ನುಗ್ಗಿಿ ಚಿಲ್ಲರ್ಗಿ ಸೇತುವೆ ಜಲಾವೃತಗೊಂಡು ನಾಲ್ಕೈದು ದಿನಗಳಿಂದ ರಸ್ತೆೆ ಸಂಚಾರ ಸ್ಥಗಿತಗೊಂಡಿದೆ. ಆಸ್ಪತ್ರೆೆ, ಬ್ಯಾಾಂಕ್ ಗೆ ಹೋಗುವ ಜನರು ಪರದಾಡುತ್ತಿಿದ್ದಾರೆ.
ಬೀರ್ದ ದಿಂದ ಚಿಮ್ಮಕೋಡ್ ಹಾಗೂ ಹಲವು ಗ್ರಾಾಮಗಳಿಗೆ ಸಂಪರ್ಕ ಕಲ್ಪಿಿಸುವ ಗಾದಗಿ ಸೇತುವೆ ಗಂಟೆ ಮಳೆಗೆ ಉಕ್ಕಿಿ ಹರಿಯುತ್ತಿಿದೆ. ಈ ಮಾರ್ಗದಲ್ಲಿ ಓಡಾಡುವ ಜನರು ಪರದಾಡುವಂತಾಗಿದೆ. ಸದರಿ ಸಮಸ್ಯೆೆ ಇಂದು ನಿನ್ನೆೆಯದಲ್ಲ. ಹಲವು ವರ್ಷಗಳಿಂದ ಸಮಸ್ಯೆೆ ಮುಂದುವರೆದರೂ ಸ್ಥಳೀಯ ಶಾಸಕ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್, ಕ್ರಮ ಕೈಗೊಳ್ಳದಿರುವುದು ವಿಚಿತ್ರವಾಗಿದೆ.
ಇತ್ತೀಚೆಗೆ ಮಳೆ ಹಾನಿ ವೀಕ್ಷಿಸಿ ಹೋಗಿದ್ದು ಬಿಟ್ಟರೆ ಈಕಡೆಗೆ ಇಣುಕಿಯೂ ನೋಡುತ್ತಿಿಲ್ಲ. ಸರ್ವೇ ಕಾರ್ಯ ಮುಗೀತಾ? ಎಷ್ಟು ಹಾನಿಯಾಗಿದೆ? ಪರಿಹಾರ ಯಾವಾಗ ಬಿಡುಗಡೆಯಾಗುತ್ತದೆ? ಯಾವುದೇ ಮಾಹಿತಿ ಇಲ್ಲ.
ಬೀದರ್ ತಾಲೂಕಿನ ಹಲವು ಹಳ್ಳಿಿಗಳು ಮಳೆಯಿಂದಾಗಿ ಸಾಕಷ್ಟು ನಲುಗಿ ಹೋಗಿವೆ. ಕ್ಯಾಾಬಿನೆಟ್ ದರ್ಜೆ ಸಚಿವರಾಗಿರುವ ರಹೀಮ್ ಖಾನ್ ಗೆ ಕೇವಲ ವೀಕ್ಷಣೆ ಮಾಡಿದರೆ ರೈತರ ಸಮಸ್ಯೆೆ ನಿವಾರಣೆಯಾಗುವುದಿಲ್ಲ ಎಂದು ಯಾರು ಹೇಳಬೇಕು? ಜನಸಾಮಾನ್ಯರ ಜೊತೆ ಸಂಪರ್ಕ ಇಟ್ಟುಕೊಂಡಿಲ್ಲ, ಪತ್ರಿಿಕೆಗಳು ಓದಲ್ಲ. ಆಪ್ತ ಸಹಾಯಕರಿಗೂ ಆಡಳಿತ ಭಾಷೆ ಅರ್ಥವಾಗುವುದಿಲ್ಲ. ಹಾಗಾದರೆ, ಯಾರಿಗೆ ಹೇಳಬೇಕು ಸಮಸ್ಯೆೆ?
ಚಿಲ್ಲರ್ಗಿ ಸೇತುವೆ ಮುಳುಗಡೆ : ಎಲ್ಲಿದ್ಯಪ್ಪ ರಹೀಂ ಖಾನ್ ?
