ಸುದ್ದಿಮೂಲ ವಾರ್ತೆ ಬೀದರ್, ಜ.04:
ಸರ್ಕಾರಿ ಕೆಲಸಕ್ಕೆೆ ಸೇರಿದರೆ ಮುಗೀತು, ಸೇವೆ ಸಲ್ಲಿಸಲೇಬೇಕೆಂಬ ನಿಯಮ ಬಹುತೇಕ ಅಧಿಕಾರಿಗಳು ಪಾಲಿಸುವುದೇ ಇಲ್ಲ. ಸಾರ್ವಜನಿಕ ಗೋಳು ಕೇಳುವ ಪುರುಸೊತ್ತೂ ಇಲ್ಲ. ಆ ಮಟ್ಟಿಿಗೆ ಅಧಿಕಾರಿಗಳ ನೌಟಂಕಿಗಳು ನಡೆಯುತ್ತಿಿವೆ.
ಹೌದು, ಬೀದರ್ ತಾಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಚಿಲ್ಲರ್ಗಿ ಗ್ರಾಾಮದಲ್ಲಿ ಗ್ರಾಾಮ ಪಂಚಾಯತ್ ವತಿಯಿಂದ ಗ್ರಾಾಮಕ್ಕೆೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಒಡೆದು ವರ್ಷಗಳೇ ಕಳೆದಿವೆ. ಬೋರವೆಲ್ ಮೂಲಕ ನೀರು ಸರಬರಾಜು ಮಾಡುವ ಪೈಪ್ ನಿರಂತರ ಸೋರಿಕೆಯಾಗುತ್ತಿಿದೆ. ನೀರು ಅರ್ಧ ಕಿಮೀ ವರೆಗೆ ರೈತರ ಜಮೀನುಗಳಲ್ಲೇ ಹರಿದು ದೊಡ್ಡ ಕಂದಕ ಸೃಷ್ಟಿಿಯಾಗಿದೆ. ದಾರಿ ಮಧ್ಯೆೆ ಇರುವ ಜಮೀನುಗಳಲ್ಲಿನ ಬೆಳೆಗಳೂ ಹಾಳಾಗುತ್ತಿಿವೆ. ಜೊತೆಗೆ ರೈತರಾದ ಹಾಲಪ್ಪಾಾ ಬೀಡಾ ಎಂಬುವವರ
ಜಮೀನಿನಲ್ಲಿ ನೀರು ಸಂಗ್ರಹಣೆಯಾಗಿ ಜಮೀನು ಕೆಸರು ಗದ್ದೆಯಾಗಿದೆ. ಮುಂಗಾರು ಅವಧಿಯಲ್ಲಿ ಹೊಲ ಬಿತ್ತನೆಗೂ ಅವಕಾಶ ಸಿಕ್ಕಿಿಲ್ಲ. ಈಗ ಹಿಂಗಾರು ಬೆಳೆ ಕಡಲೆ ಬಿತ್ತನೆ ಮಾಡಿದ್ದು, ಸತತ ನೀರು ಜಮಾವಣೆಗೊಂಡು ಬೆಳೆ ನಾಶವಾಗಿದೆ ಎಂದು ಜಮೀನು ಕಡ್ದು ( ಲಾವಣಿ) ಮಾಡಿದ ನಾಗೇಶ್ ಬಿರಾದಾರ್ ಚಿಮ್ಮಕೋಡ್ ಅಳಲು ತೋಡಿಕೊಂಡಿದ್ದಾರೆ. ಬಾಡಿಗೆಗೆ ಭೂಮಿ ಪಡೆದು ಕೃಷಿ ಮಾಡುತ್ತಿಿದ್ದೇವೆ, ಆದರೆ, ಚಿಲ್ಲರ್ಗಿ ಪಂಚಾಯತ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬೆಳೆ ನಾಶವಾಗಿದೆ. ಈ ಬಗ್ಗೆೆ ಸುತ್ತಲಿನ ರೈತರು ಪಂಚಾಯತ್ ಅಧಿಕಾರಿಗಳ ಗಮನಕ್ಕೆೆ ತಂದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯತ್ ವ್ಯಾಾಪ್ತಿಿಯಲ್ಲಿ ನೀರು ಸರಬರಾಜು ಮಾಡುವ ಬೋರವೆಲ್ ಹಾಗೂ ಟ್ಯಾಾಂಕ್ ಸುತ್ತ ಮುಳ್ಳು ಕಂಟಿ ಬೆಳೆದಿದೆ. ಕನಿಷ್ಠ ಸುರಕ್ಷತೆ ದೃಷ್ಟಿಿಯಿಂದ ಬೀಗ ಕೂಡ ಅಳವಡಿಸಿಲ್ಲ. ಗ್ರಾಾಮಸ್ಥರು ಹೇಳುವ ಪ್ರಕಾರ ವಾಟರ್ ಮ್ಯಾಾನ್ ಈ ಕಡೆಗೆ ತಲೆಯೂ ಹಾಕಲ್ಲ ಎನ್ನಲಾಗಿದೆ.
ಚಿಲ್ಲರ್ಗಿ ಪಂಚಾಯತ್ ಬೇಜವಾಬ್ದಾರಿ : ಕಡಲೆ ಬೆಳೆ ಜಲಾವೃತ : ರೈತನ ಕಣ್ಣೀರು

