ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ಭಾರತೀಯ ರಾಷ್ಟ್ರ ಧ್ವಜ ಭಾವೈಕ್ಯತೆಯ ಸಂಕೇತವಾಗಿದ್ದು ಪ್ರತಿಯೊಬ್ಬ ಪ್ರಜೆ ರಾಷ್ಟ್ರ ಧ್ವಜದ ಇತಿಹಾಸ ನೀತಿ ನಿಯಮಗಳನ್ನು ತಿಳಿದುಕೊಳ್ಳಬೇಕೆಂದು ಭಾರತ ಸೇವಾದಳ ವಿಭಾಗ ಸಂಘಟಿಕರಾದ ವಿದ್ಯಾಾಸಾಗರ ಚಿಣಮಗೇರಿ ಹೇಳಿದರು.
ಇಂದು ಕೃಷಿ ತಾಂತ್ರಿಿಕ ಮಹಾವಿದ್ಯಾಾಲಯದ ಎನ್ಎಸ್ಎಸ್ ವಿದ್ಯಾಾರ್ಥಿಗಳಿಗೆ ರಾಷ್ಟ್ರೀಯ ಮತದಾರ ದಿನಾಚರಣೆ, ರಾಷ್ಟ್ರೀಯ ಭಾವೈಕ್ಯತೆ ಕುರಿತು ಮಾತನಾಡಿದರು. ರಾಷ್ಟ್ರಧ್ವಜ ಜುಲೈ 22, 1947 ರಂದು ಅಧಿಕೃತವಾಗಿ ಅಂಗೀಕಾರಗೊಂಡಿತು. ಅಂದಿನ ರಾಜ್ಯಾಾಂಗ ಸಭೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಧ್ವಜದ ವಿವರಣೆ ನೀಡಿ ರಾಷ್ಟ್ರ ಧ್ವಜದ ಬಣ್ಣವನ್ನು ಕೇಸರಿ ತ್ಯಾಾಗದ ಸಂಕೇತ ಬಿಳಿ ಶಾಂತಿಯ ಸಂಕೇತ ಹಸಿರು ಸಮೃದ್ಧಿಿಯ ಸಂಕೇತ ಬಿಳಿ ಬಣ್ಣದ ನಡುವೆ ಇರುವ ಅಶೋಕ ಚಕ್ರ ದೇಶ ನಿರಂತರ ಪ್ರಗತಿ ಶೀಲವಾಗಲಿ ಎಂದು ವಿವರಣೆ ನೀಡಿ ಅಂದಿನ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿತ್ತು ಅಂದಿನಿಂದ ಇಂದಿನವರೆಗೂ ನಮ್ಮ ಭಾರತ ರಾಷ್ಟ್ರ ಧ್ವಜವು ಭಾವೈಕ್ಯತೆ ಮತ್ತು ಏಕತೆಯ ಸಂಕೇತವಾಗಿ ಪ್ರತಿಯೊಬ್ಬರಿಗೂ ಅದರಿಂದ ದೇಶ ಭಕ್ತಿಿ ಬೆಳೆಸಲು ಪ್ರೇೇರಣೆ ನೀಡುತ್ತಿಿದೆ ಎಂದು ಹೇಳಿದರು.
ಡೀನ್ ಡಾ. ಎಂ.ಎಸ್ ಅಯ್ಯನಗೌಡ್ ಮಾತನಾಡಿ, ಎನ್ಎಸ್ಎಸ್ ವಿದ್ಯಾಾರ್ಥಿಗಳು ಶಿಸ್ತು, ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಹೇಳಿದರು .
ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ. ಪಿ.ಎ.ಎ್ ಮಠದ ಅವರು ನನ್ನ ಭಾರತ ನನ್ನ ಮತ ಎಂದು ಪರಿಕಲ್ಪನೆಯೊಂದಿಗೆ ಮತದಾರ ಪ್ರತಿಜ್ಞೆ ಬೋಧಿಸಿದರು.
ಇನ್ನೋೋರ್ವ ಅಧಿಕಾರಿ ಡಾ. ಏಸಪ್ಪ, ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ರಾಷ್ಟ್ರ ಧ್ವಜ ಭಾವೈಕ್ಯತೆಯ ಸಂಕೇತ – ಚಿಣಮಗೇರಿ

