ಸುದ್ದಿಮೂಲ ವಾರ್ತೆ
ಚಿಂತಾಮಣಿ, ಅ.24: ದಲಿತ ಮುಖಂಡ ಹಾಗೂ ಚಿಂತಾಮಣಿ ನಗರಸಭಾ ಸದಸ್ಯ ಆಗ್ರಹಾರ ಮುರಳಿ ಅವರ ಮೇಲಿನ ಹಲ್ಲೆ, ಕೊಲೆ ಯತ್ನ ಖಂಡಿಸಿ ಚಿಂತಾಮಣಿ ಬಂದ್ಗೆ ಕರೆ ನೀಡಿರುವ ದಲಿತ ಮುಖಂಡರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ದಲಿತರ ಮೇಲೆ ನಡೆಯುವ ಘಟನೆಗಳಿಗೆ ಪೊಲೀಸರೇ ನೇರ ಕಾರಣರೆಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ದಲಿತರಪರ ಸಂಘಟನೆಗಳಿಂದ ಪತ್ರಿಕಾಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ದಲಿತ ಮುಖಂಡರಾದ ಕವಾಲಿ ವೆಂಕಟರವಣಪ್ಪ, ಜಿ ನಾರಾಯಣಸ್ವಾಮಿ, ವಿಜಯನರಸಿಂಹ, ಮಹೇಶ್ ಬೈ, ಕೋಡಿಗಲ್ ರಮೇಶ್, ಜನನಾಗಪ್ಪ ಮತಿತ್ತರರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಹೋರಾಟಗಳ ತವರೂರಾಗಿದ್ದು, ಇತ್ತೀಚಿನ ದಿನಗಳಲ್ಲಿ ದಲಿತ ಮುಖಂಡರ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಾಗಿ ಬಿಹಾರ ರಾಜ್ಯದ ಮಾದರಿಯಾಗುತ್ತಿರುವುದು ಖಂಡನೀಯವಾಗಿದೆ. ಅದರಲ್ಲೂ ಚಿಂತಾಮಣಿ ನಗರವನ್ನು ಕೊಲೆಗಡುಕರು ರಾಜಕೀಯ ಪ್ರಾಬಲ್ಯದಿಂದ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಅಕ್ರಮ ದಂಧೆಗಳಲ್ಲಿ ತೊಡಿಗಿಕೊಳ್ಳುವುದರ ಮೂಲಕ ಶಾಂತಿವಾಗಿದ್ದ ಕ್ಷೇತ್ರದಲ್ಲಿ ಆಶಾಂತಿಯನ್ನು ಮಾಡಲು ಮುದಾಗಿದ್ದಾರೆ ಎಂದು ದಲಿತ ಮುಂಖಂಡರು ಆರೋಪಿಸಿದರು.
ಆಕ್ಟೋಬರ್ 13 ರಂದು ಚಿಂತಾಮಣಿ ನಗರದಲ್ಲಿ ಹಾಡುಹಗಲೇ ಜನನಿಬಿಡ ಪ್ರದೇಶದಲ್ಲಿ ದುಷ್ಕರ್ಮಿಗಳು ಮಾರಾಕಾಸ್ತರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲು ಯತ್ನಿಸಿ, ದುರಾದೃಷ್ಟವಶಾತ್ ಆಗ್ರಹಾರ ಮುರಳಿರವರು ಪ್ರಾಣಾಪಯದಿಂದ ಪಾರಾಗಿದ್ದು, ಹಲ್ಲೆ ಕೊಲೆ ಯತ್ನಕ್ಕೆ ಸಂಬಂದಿಸಿದ್ದಂತೆ ಆಗ್ರಹಾರ ಮುರಳಿರವರು ತನ್ನ ಮೇಲಿನ ಹಲ್ಲೆಗೆ ಕಾರಣರಾದವರ ಬಗ್ಗೆ ಆಸ್ಪತ್ರೆಯಲ್ಲಿ ಹೆಸರಿನ ಸಮೇತರ ಪೊಲೀಸರಿಗೆ ಹೇಳಿಕೆ ನೀಡಿದರೂ ಕೂಡ ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಹೇಳಿದರು.
ಅಲ್ಲದೆ, ಕಳೆದ ಸೋಮವಾರ ಶ್ರೀನಿವಾಸಪುರದಲ್ಲಿ ದಲಿತ ಮುಖಂಡ ಶ್ರೀನಿವಾಸ್ ರವರ ಕೊಲೆ ನಡೆದಿರುವುದು ಖಂಡನೀಯ. ಈ ಕೊಲೆ ನಡೆದ ಒಂದೇ ದಿನದಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಹಾಗಾದರೆ ಮುರಳಿ ಅವರ ಕೊಲೆಗೆ ಯತ್ನಿಸಿದ ಆರೋಪಿಗಳ ಬಂಧನಕ್ಕೆಇದಯವರೆಗೂ ಯಾಕೆ ಪೊಲೀಸರು ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಆಗ್ರಹಾರ ಮುರಳಿ ಅವರ ಹಲ್ಲೆ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ, ಚಿಂತಾಮಣಿ ಬಂದ್ಗೆ ಕರೆ ನೀಡಿ, ಘಟನೆಯನ್ನು ಖಂಡಿಸುತ್ತಿರುವ ದಲಿತ ಮುಖಂಡರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತು ದಲಿತ ಮುಖಂಡರಿಗೆ ರಕ್ಷಣೆ ನೀಡಬೇಕು. ಇಲ್ಲವಾದಲ್ಲಿ ದಲಿತ ಮುಖಂಡರಿಗಾಗಿವ ಅನಾಹುತಗಳಿಗೆ ನೇರವಾಗಿ ಪೊಲೀಸ್ ಅಧಿಕಾರಿಗಳೇ ಕಾರಣವಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಟಾಟ ಸುಮೋ ನರಸಿಂಹಪ್ಪ, ದೇವಮ್ಮ, ಪೊಟೋ ನಾರಾಯಣಪ್ಪ, ಕಾವಲಗಾನಹಳ್ಳಿ ವೆಂಕಟೇಶ್, ಆನಂದ, ಎಂ.ವಿ ರಾಮಪ್ಪ, ಆಕುಲ ಸುಧಾಕರ್, ಬಿರ್ಜೇನಹಳ್ಳಿ ಮಂಜು, ಜನಾರ್ದನ್, ಚಲಪತಿ, ಅನಿಲ್ ಸೇರಿದಂತೆ ಎಲ್ಲಾ ದಲಿತ ಮುಖಂಡರು ಮತಿತ್ತರರು ಉಪಸ್ಥಿತಿರಿದ್ದರು.