ಸುದ್ದಿಮೂಲ ವಾರ್ತೆ
ಜು,5:ಯಾವುದೇ ಒಂದು ಸಂಸ್ಥೆ ನಿರ್ಮಾಣಕ್ಕೆ ದೂರ ದೃಷ್ಟಿ ಮತ್ತು ನಿರ್ದಿಷ್ಟ ಗುರಿ ಜೊತೆಗೆ ನಿಸ್ವಾರ್ಥವಾಗಿ ಕೈಗೊಳ್ಳುವ ಕೆಲಸ ಯಶಸ್ವಿಯಾಗುತ್ತದೆ ಎಂಬುದಕ್ಕೆ ಚಿತ್ರಕಲಾ ಪರಿಷತ್ ಸಾಕ್ಷಿ ಎಂದು ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿಗಳಾದ ಪ್ರೊಫೆಸರ್ ಎನ್ಎಸ್ ನಂಜುಂಡರಾವ್ ಅವರ 91ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಚಿವರು ಮಾತನಾಡುತ್ತಿದ್ದರು. ಪ್ರೊಫೆಸರ್ ಎಂಎಸ್ ನಂಜುಂಡರಾವ್ ಅವರನ್ನು ನಾವಿಂದು ನೆನಪಿಸಿಕೊಳ್ಳಲು ಅವರ ಕನಸು, ಅವರು ಹಾಕಿದ ಭದ್ರ ಬುನಾದಿಯೆ ಚಿತ್ರಕಲಾ ಪರಿಷತ್ ಇಂದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉಜ್ವಲವಾಗಿ ಬೆಳೆಯಲು ಕಾರಣವಾಗಿದೆ. ನಂಜುಂಡ ರಾವ್ ಅವರ ಪರಿಶ್ರಮದ ಫಲವೇ ಇಂದು ಚಿತ್ರಕಲಾ ಪರಿಷತ್ ಚಿತ್ರಕಲೆಗಳ ಮಹಾವಿದ್ಯಾಲಯವನ್ನು ಒಳಗೊಂಡು ಪ್ರತಿ ವರ್ಷ ನೂರಾರು ಸ್ನಾತಕ ಮತ್ತು ಸ್ನಾತಕ್ಕೂತ್ತರ
ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುವಂತಾಗಿದೆ ಎಂದರು.
ಕಲೆಗೆ ಇತಿಮಿತಿ ಇಲ್ಲ ಸ್ಕೈ ಇಸ್ ದ ಲಿಮಿಟ್ ಅಂತೀವಿ ಆದರೆ ಅದು ಕಲಾ ಮಾಧ್ಯಮದಲ್ಲಿ ಅದನ್ನು ಮೀರಿ ಕಲಾವಿದ ಸೃಷ್ಟಿಸಬಲ್ಲ.
ನಾನೊಬ್ಬ ದಂತ ವೈದ್ಯನಾಗಿ ಕಲೆ ವಿಜ್ಞಾನ ಕಲಿತಿದ್ದೇನೆ ಇಲ್ಲೂ ಕೂಡ ಕಲೆಗೆ ಪ್ರಾಮುಖ್ಯತೆ ಇದೆ ಅಂಗಾಂಗಗಳನ್ನು ಅರಿತು ಅವುಗಳನ್ನು ಯಾವ ರೀತಿ ಮರುಬಳಕೆಗೆ ಜೀವ ಕೊಡ್ತೀವಿ ಅನ್ನೋದು ಕೂಡ ಒಂದು ಕಲಾವಂತಿಕೆ.
ಕಲೆ ಮತ್ತು ಕಲಾಕೃತಿಯನ್ನು ನೋಡುವ ವಿಧಾನ ಪ್ರತಿಯೊಬ್ಬರ ದೃಷ್ಟಿಯಲ್ಲಿ ವಿಭಿನ್ನವಾಗಿರುತ್ತದೆ. ಹಾಗಾಗಿ ಕಲೆಗೆ ನೂರಾರು ಆಯಾಮಗಳು ಸೃಷ್ಟಿಯಾಗುತ್ತವೆ ಎಂದು ಸಚಿವ ಸುಧಾಕರ್ ಅಭಿಪ್ರಾಯ ಪಟ್ಟರು.
ಪುರಾತನ ಕಾಲದಿಂದಲೂ ಕಲೆಯನ್ನು ನಮ್ಮ ಸಂಸ್ಕೃತಿಯನ್ನಾಗಿ ಬಳಸುತ್ತಿದ್ದೇವೆ, ಅದನ್ನೇ ವೃತ್ತಿಯಾಗಿಸಿಕೊಂಡು ಯಶಸ್ವಿಯಾದವರ ಸಂಖ್ಯೆಯು ಅಪಾರ. ಕಲೆಗೆ ನಿರ್ದಿಷ್ಟವಾದ ಮಾನದಂಡ ಇರುವುದಿಲ್ಲ ಯಾವ ಮಾರ್ಗಸೂಚಿಗೂ ಇದು ಒಳಪಡುವುದಿಲ್ಲ ನಮ್ಮ ಊಹೆಗೆ ನಮ್ಮ ಆಲೋಚನೆಗಳಿಗೆ ರೂಪ ಕೊಡುವ ಶಕ್ತಿ ಕಲೆಗೆ ಇದೆ ಎಂದು ಅಭಿಪ್ರಾಯಪಟ್ಟರು.
ಚಿತ್ರಕಲಾ ಪರಿಷತ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಟಿಯು ಮಾಜಿ ಉಪಕುಲಪತಿ, ಬಲವೀರ ರೆಡ್ಡಿ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಬಿ ಎಲ್ ಶಂಕರ್, ಕಾರ್ಯದರ್ಶಿ ಶಶಿಧರ್ ಇದ್ದರು. ಚೆನ್ನೈನ ಖ್ಯಾತ ಕಲಾವಿದ ಆರ್. ಎಂ ಪಳನಿಯಪ್ಪನ್ ಅವರಿಗೆ ಈ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ತಿನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.