ಸುದ್ದಿಮೂಲ ವಾರ್ತೆ ಚಿತ್ತಾಾಪುರ, ಡಿ.01:
ಸಂವಿಧಾನ ಒಪ್ಪಲಾರದವರು, ರಾಷ್ಟ್ರ ಧ್ವಜ ಹಿಡಿಯಲಾರದವರು ಭಾರತ ದೇಶ ಭಕ್ತರು, ದೇಶದ ಪ್ರಜೆ ಹೇಗೆ ಆಗುತ್ತಾಾರೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾಾನ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಾಮೀಜಿ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಾಣ ಮಂಟಪದ ಆವರಣದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಸೋಮವಾರ ಹಮ್ಮಿಿಕೊಂಡ ಭೀಮ ನಡೆ ಪಥಸಂಚಲನ ಹಾಗೂ ಸಂವಿಧಾನ ಸಮಾವೇಶ ಉದ್ಘಾಾಟಿಸಿ ಮಾತನಾಡಿದ ಅವರು, ಸಂವಿಧಾನಕ್ಕೆೆ ಗೌರವ ನೀಡದವರು ದೇಶಕ್ಕೆೆ ಅವಮಾನ ಮಾಡಿ ದ್ರೋಹ ಬಗೆದಂತೆ ಎಂದರು.
ಈ ಸಮಾವೇಶ ಯಾವ ಸಂಘಟನೆಯ ವಿರುದ್ಧ ಅಲ್ಲ. ಇದು ಸಾಮರಸ್ಯ ಕಾರ್ಯಕ್ರಮವಾಗಿದೆ. ನಮಗೆ ಧರ್ಮ, ಜಾತಿ ಮುಖ್ಯವಲ್ಲ. ದೇಶ ಮುಖ್ಯ. ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಯಾರು ಮಾಡಬಾರದು. ಸಂವಿಧಾನ ಸಮಾನತೆ ಹಕ್ಕು ನೀಡಿದೆ. ಸಂಸತ್ತು ದೊಡ್ಡದಲ್ಲ. ಸಂವಿಧಾನ ದೊಡ್ಡದು. ಸಂಸತ್ತಿಿನಲ್ಲಿ ತಿದ್ದುಪಡಿ ಮಾಡಬಹುದು. ಆದರೆ ಸುಪ್ರೀಂಕೋರ್ಟ್ನಲ್ಲಿನ ಅಂಬೇಡ್ಕರ್ ನೀಡಿದ ಸಂವಿಧಾನ ತಿದ್ದುಪಡಿ ಮಾಡುವಂತಿಲ್ಲ. ಆರ್ಎಸ್ಎಸ್ ಬಗ್ಗೆೆ ಸಚಿವ ಪ್ರಿಿಯಾಂಕ್ ಖರ್ಗೆ ಅವರು ವೈಯಕ್ತಿಿಕ ಮಾತನಾಡಿಲ್ಲ. ಚಿತ್ತಾಾಪುರದ ಜನತೆ ಹಾಗೂ ಈ ದೇಶದ ಸರ್ವರ ಧ್ವನಿಯಾಗಿ ಮಾತನಾಡಿದ್ದಾರೆ. ದೇಶದ ಸಮಾನತೆ ಹಾಗೂ ಸಂವಿಧಾನ ಒಳಿತಿಗಾಗಿ ಮಾತನಾಡಿದ್ದಾರೆ ಎಂದು ಹೇಳಿದರು.
ಧರ್ಮ, ಜಾತಿ ಎನ್ನುವವರಿಂದ ದೇಶ ಅಪಾಯಕಾರಿಯಾಗಿ ಪರಿಣಮಿಸುತ್ತಿಿದೆ. ಮಕ್ಕಳ ಕೈಯಲ್ಲಿ ಲಾಠಿ ಕೊಡುವ ಬದಲು ಪೆನ್ನು ಕೊಟ್ಟು ಉತ್ತಮ ನಾಗರಿಕರನ್ನಾಾಗಿ ಮಾಡಬೇಕು. ಒಂದು ದೇಶ ಒಂದು ಚುನಾವಣೆ ಎನ್ನುವವರು, ಒಂದು ದೇಶ ಒಂದೇ ಜಾತಿ, ಒಂದೇ ಶಿಕ್ಷಣ ಮಾಡಬೇಕು. ಎಲ್ಲರೂ ಸಮಾನರು, ಸಂವಿಧಾನದಿಂದಲೇ ಭಾರತ ದೇಶ ಸಮೃದ್ದವಾಗಲಿದೆ ಎಂಬ ಸಂದೇಶ ಚಿತ್ತಾಾಪುರದಿಂದ ಈ ದೇಶದವರೆಗೆ ಹೋಗಬೇಕೆಂದು ಹೇಳಿದರು.
ಕೌಟಾ ಬಿ. ಗ್ರಾಾಮದ ಸಿದ್ದರಾಮ ಶರಣರು ಬೆಲ್ದಾಾಳೆ ಮಾತನಾಡಿ, ಒಂದು ನಾಟಕ ಪ್ರದರ್ಶನ ಮಾಡಬೇಕಾದರೆ ದಾಖಲೆಗಳು ಕೇಳಿ ಪರವಾನಗಿ ನೀಡುತ್ತಾಾರೆ. ಸಂವಿಧಾನ ಇದೆ. 100 ವರ್ಷವಾದರೂ ನೋಂದಣಿ ಮಾಡಿಕೊಳ್ಳದ ಆರ್ಎಸ್ಎಸ್ನವರ ಹಣದ ಲೆಕ್ಕ ಪತ್ರ ಎಲ್ಲಿ. ಬಡವರ, ಕೂಲಿಕಾರರ, ನಿರ್ಗತಿಕರ, ಮಹಿಳೆಯರ ಹಕ್ಕು ಕಸಿದು ಕೊಂಡಿದ್ದಾರೆ. ಈ ದೇಶದ ಜನರ ಪರ ಪ್ರಶ್ನೆೆ ಮಾಡಿದ ಸಚಿವ ಪ್ರಿಿಯಾಂಕ್ ಖರ್ಗೆನಂತಹವರು ಶತಮಾನಕ್ಕೆೆ ಒಬ್ಬರು ಜನ್ಮ ತಾಳುತ್ತಾಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಂತೆ ವರಜ್ಯೋೋತಿ, ಮನೋಹರ ಮೊರೆ, ಡಾ.ವಾಸು ಮಾತನಾಡಿದರು.
ಬೇಲೂರ ಮಠದ ಶ್ರೀ ಷಡಕ್ಷರಿ ಸ್ವಾಾಮೀಜಿ, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಿಧ್ಯವಹಿಸಿದ್ದರು.
ತಾಲೂಕಿನ ವಿವಿಧ ಸಮಾಜಗಳ ಅಧ್ಯಕ್ಷರಾದ ಬಸವರಾಜ ಹೊಸಳ್ಳಿಿ, ಶಿವುಕುಮಾರ ಯಾಗಾಪುರ, ನಾಗಯ್ಯ ಗುತ್ತೇದಾರ, ಮಲ್ಲಿಕಾರ್ಜುನ ಬೆಣ್ಣೂರಕರ, ನಿಂಗಣ್ಣ ಹೇಗಲೇರಿ, ಜಗಣ್ಣಗೌಡ ರಾಮತೀರ್ಥ, ಎಂಎ ರಶೀದ, ಶಾಂತಪ್ಪ ಚಾಳಿಕರ, ಭೀಮಸಿಂಗ ಚವ್ಹಾಾಣ, ಸುರೇಶ ಮೆಂಗನ್, ಓಂಕಾರೇಶ್ಶರ ರೇಷ್ಮಿಿ, ಲಚ್ಚಪ್ಪ ಜಮಾದಾರ, ಮಲ್ಲಿಕಾರ್ಜುನ ಬೊಮ್ಮನಹಳ್ಳಿಿಯ, ಪ್ರಭು ಕುಂಬಾರ, ರಮೇಶ ಹಡಪದ, ಶರಣು ಹೂಗಾರ, ಸಾಬಣ್ಣ ಕಡಬೂರ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಪ್ರಮುಖರಾದ ಶಿವರುದ್ರ ಭೀಣಿ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ್, ಶಂಭುಲಿಂಗ ಗುಂಡಗುರ್ತಿ, ಸುನೀಲ ದೊಡ್ಡಮನಿ, ಅಶೋಕ ವೀರನಾಯಕ, ರಾಜೀವ ಜಾನೆ, ಜಯಪ್ರಕಾಶ ಕಮಕನೂರ, ಶ್ರೀಕಾಂತ ಸಿಂಧೆ, ಶ್ರೀನಿವಾಸ ಸಗರ, ವೀರಣ್ಣಗೌಡ ಪರಸರೆಡ್ಡಿಿ, ಶಿವಯ್ಯ ಗುತ್ತೇದಾರ, ಶೀಲಾ ಕಾಶಿ, ಜಗದೀಶ ಚವ್ಹಾಾಣ, ಮುಕ್ತಾಾರ ಪಟೇಲ್, ಮಲ್ಲಿಕಾರ್ಜುನ ಕಾಳಗಿ, ಕರಣಕುಮಾರ ಅಲ್ಲೂರ, ಲೋಹಿತ ಮುದ್ದಡಗಿ, ರವಿಸಾಗರ ಹೊಸಮನಿ, ಮಲ್ಲಿಕಾರ್ಜುನ ಮುಡಬೂಳಕರ್, ಸಂಜಯ ಬುಳಕರ್, ಮಾರುತಿ ಹುಳಗೋಳಕರ್, ಜಗನ್ನಾಾಥ ಮುಡಬೂಳಕರ್, ಸೂರಜ್ ಕಲ್ಲಕ್ ಸೇರಿದಂತೆ ಇತರರಿದ್ದರು.
ದಲಿತ ಮುಖಂಡ ಮರಿಯಪ್ಪ ಹಳ್ಳಿಿ ಪ್ರಾಾಸ್ತಾಾವಿಕ ಮಾತನಾಡಿದರು. ಮಲ್ಲಪ್ಪ ಹೊಸಮನಿ ಇಂಗನಕಲ ಸ್ವಾಾಗತಿಸಿದರು. ಬಸವರಾಜ ಚಿನ್ನಮಳ್ಳಿಿ ನಿರೂಪಣೆ ಮಾಡಿದರು. ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿಿ ವಂದಿಸಿದರು.
ಚಿತ್ತಾಪುರ : ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಬೃಹತ್ ಪಥಸಂಚಲನ, ಸಂವಿಧಾನ ಸಮಾವೇಶ ಸಂವಿಧಾನ ಒಪ್ಪಲಾರದವರು ಭಾರತ ದೇಶದ ಪ್ರಜೆ ಹೇಗೆ ಆಗುತ್ತಾಾರೆ : ಜ್ಞಾನಪ್ರಕಾಶ ಸ್ವಾಾಮೀಜಿ ಪ್ರಶ್ನೆ

