ಸುದ್ದಿಮೂಲ ವಾರ್ತೆ ಔರಾದ್, ಡಿ.26:
ಪಟ್ಟಣದ ಗುಡಿಸಲು ವಾಸಿಗಳ ಜೊತೆ ಕ್ರಿಿಸ್ಮಸ್ ಆಚರಣೆ ವೇಳೆ ಪಾಸ್ಟರ್ ಜೊತೆ ಅನುಚಿತವಾಗಿ ವರ್ತಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಕ್ರ್ತ್ೈ ಮಹಾಸಭಾ ತಾಲುಕಾಡಳಿತಕ್ಕೆೆ ಒತ್ತಾಾಯಿಸಿದೆ.
ಈ ಕುರಿತು ತಹಸೀಲ್ದಾಾರ್ ಗೆ ಮನವಿ ಪತ್ರ ಸಲ್ಲಿಸಲಾಯಿತು.
ಪಟ್ಟಣದ ನಾಲಂದಾ ಶಾಲೆಯ ಸಮೀಪ ಗುಡಿಸಲು ವಾಸಿಗಳ ಜೊತೆ ಪಾಸ್ಟರ್ ಕ್ರಿಿಸ್ಮಸ್ ಹಬ್ಬ ಆಚರಣೆ ಮಾಡುವ ವೇಳೆ ಏಕಾಏಕಿ ನುಗ್ಗಿಿದ ಕೆಲ ಯುವಕರು ಹಬ್ಬಕ್ಕೆೆ ಅಡಚಣೆ ಉಂಟು ಮಾಡಿದ್ದಾರೆ. ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಾಯಿಸಿದ್ದಾರೆ. ಪ್ರಮುಖರಾದ ರತ್ನದೀಪ್ ಕಸ್ತೂರೆ ಮುಂತಾದವರು ಉಪಸ್ಥಿಿತರಿದ್ದರು.
ಕ್ರಿಸ್ಮಸ್ ಆಚರಣೆಗೆ ಅಡ್ಡಿ: ಕ್ರಮಕ್ಕೆ ಕ್ರೈಸ್ತ್ ಮಹಾಸಭಾ ಆಗ್ರಹ

