ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.13:
ತಾಲ್ಲೂಕಿನ ಹೊಸಕೋಟೆ ಗ್ರಾಾಮದಲ್ಲಿನ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರ ಸಂಘದಲ್ಲಿ ಹಣ ದುರ್ಬಳಕೆ ಆರೋಪದ ಹಿನ್ನೆೆಲೆಯಲ್ಲಿ ಸಿಐಡಿ ಪೊಲೀಸ್ ಅಧಿಕಾರಿಗಳ ತಂಡವು ಮಂಗಳವಾರ ತನಿಖೆ ಪ್ರಾಾರಂಭಿಸಿತು.
ಸಹಕಾರ ಸಂಘದಲ್ಲಿ ರೈತರು ಠೇವಣಿ,ಸಾರ್ವಜನಿಕರ ಪಿಗ್ಮಿಿ ಹಣ, ಸಾಲ ಸೇರಿದಂತೆ ಒಟ್ಟು 4 ಕೋಟಿಗೂ ಅಧಿಕ ಮೊತ್ತದ ಹಣ ಈ ಹಿಂದಿನ ಸೆಕ್ರೆೆಟರಿ ಭೀಮಪ್ಪ ದುರ್ಬಳಕೆ ಮಾಡಿಕೊಂಡಿದ್ದ ಬಗ್ಗೆೆ ಆರೋಪಗಳು ಕೇಳಿ ಬಂದಿತ್ತು.
ಈ ಸಂಬಂಧ ತಾಲ್ಲೂಕಿನ ವಿವಿಧ ರೈತ ಪರ ಸಂಘಟನೆಗಳ ಮೂಲಕ ಪ್ರತಿಭಟನೆಗಳು ಹೆಚ್ಚಾಾಳವಾಗಿದ್ದರಿಂದ್ದ ದಾಖಲೆಗಳನ್ನು ಪರಿಶೀಲಿಸಿದ್ದರು. ಬಳಿಕ ಹಣ ದುರುಪಯೋಗವಾಗಿರುವುದನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಸ್ತಾಾಪಿಸಿ ಸರ್ಕಾರದ ಗಮನ ಸೆಳೆದಿದ್ದರು. ಅಲ್ಲದೇ ಸಂಘದ ಈಗಿನ ಅಧ್ಯಕ್ಷ ಸುರೇಶ್ ಮತ್ತು ಆಡಳಿತ ಮಂಡಳಿಯ ಮೂಲಕ ದೂರು ದಾಖಲಿಸಿದ್ದರು.
ಅರಸೀಕೆರೆ ಪೊಲೀಸರು ಪ್ರಾಾಥಮಿಕ ತನಿಖೆ ನಡೆಸಿದ ವೇಳೆ ಸಂಘದಲ್ಲಿ ಹಣ ದುರ್ಬಳಕೆಯಾಗಿರುವುದು ಮೇಲ್ನೋೋಟಕ್ಕೆೆ ಸಾಬೀತಾದ ಹಿನ್ನೆೆಲೆಯಲ್ಲಿ ಪ್ರಾಾಥಮಿಕ ವರದಿ ತಯಾರಿಸಿ ಪ್ರಕರಣ ಸಿಐಡಿಗೆ ವರ್ಗಾಯಿಸಿದ್ದರು.
ಅದರಂತೆ ಸಿಐಡಿ ಅಧಿಕಾರಿ ಇತೇಂದ್ರ ಮತ್ತು ಅವರ ತಂಡವು ಸೋಮವಾರದಿಂದ ಸಂಘದ ಎಲ್ಲಾ ನೌಕರರ ವಿಚಾರಣೆ ನಡೆಸಿ ಪ್ರತಿಯೊಬ್ಬರ ಹೇಳಿಕೆಗಳ ದಾಖಲಿಸಿಕೊಂಡು ತನಿಖೆ ಪ್ರಾಾರಂಭ ಮಾಡಿದ್ದು ಭ್ರಷ್ಟಾಾಚಾರಿಗಳಿಗೆ ನಡುಕ ಉಂಟಾಗಿದೆ ಒಟ್ಟಾಾರೆಯಾಗಿ ಸಂಘದ ಠೇವಣಿದಾರರಿಗೂ ರೈತರಿಗೂ ನ್ಯಾಾಯ ಸಿಗುವಂತಾಗಲಿ ಎಂಬುದು ಕಾರ್ಮಿಕ ಹಾಗೂ ರೈತಪರ ಸಂಘಟನೆಗಳ ಆಗ್ರಹವಾಗಿದೆ.
ಹೊಸಕೋಟೆ ಸಹಕಾರಿ ಸಂಘದ ಹಣ ದುರ್ಬಳಕೆ: ಸಿಐಡಿ ತನಿಖೆ ಆರಂಭ

