ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ, 14; ಸಿಟಿಬ್ಯಾಂಕ್ ತನ್ನ ಮಹಿಳಾ ಉದ್ಯೋಗಿಗಳಿಗಾಗಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಪ್ರಾರಂಭಿಸಿದೆ. ಮಹಿಳಾ ನೌಕರರು ಈಗ ತಮ್ಮ 26 ವಾರಗಳ ಹೆರಿಗೆ ರಜೆಯ ಕೊನೆಯಲ್ಲಿ 12 ತಿಂಗಳವರೆಗೆ ಮನೆಯಿಂದಲೇ ಕೆಲಸ ಮಾಡಲು ಉದ್ಯೋಗದಾತರಿಗೆ ಮನವಿ ಮಾಡಬಹುದು.
ಹೆಚ್ಚುವರಿ ಅಗತ್ಯ ಆಧರಿಸಿ, ಮಹಿಳಾ ಉದ್ಯೋಗಿಯು ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ ಮನೆಯಿಂದಲೇ 3 ತಿಂಗಳ ಕಾಲ ಕಚೇರಿ ಕೆಲಸ ಮಾಡಲು ಸಹ ಅವಕಾಶ ಕಲ್ಪಿಸಿದೆ. ಆದರೆ, ಗರ್ಭಿಣಿಯರ ಈ ಮನವಿಯು ಪರಿಶೀಲನೆ ಮತ್ತು ಅನುಮೋದನೆಗಳಿಗೆ ಒಳಪಟ್ಟಿರುತ್ತದೆ. ಇದು ಸಂಭಾವ್ಯವಾಗಿ ನಿರೀಕ್ಷಿತ ಅಥವಾ ಹೊಸ ತಾಯಂದಿರಿಗೆ 21 ತಿಂಗಳ ಕಾಲ ಮನೆಯಿಂದಲೇ ಕೆಲಸ ಮಾಡುವ ಸಂಚಿತ ಅವಧಿಯನ್ನು ಒದಗಿಸುತ್ತದೆ.
ಹೆರಿಗೆ ರಜೆಗೆ ಸಂಬಂಧಿಸಿದಂತೆ, ಮಹಿಳಾ ನೌಕರ ಪಡೆಗೆ ಮನೆಯಿಂದಲೇ ಕೆಲಸ ಮಾಡುವ ಉಪಕ್ರಮ ಕಾರ್ಯಗತಗೊಳಿಸಿದ ಅಗ್ರ ಸಂಸ್ಥೆಗಳಲ್ಲಿ ಒಂದಾಗಿದೆ. ಆ ಮೂಲಕ ಮಹಿಳೆಯರ ಪ್ರಯೋಜನಕ್ಕಾಗಿ ಮತ್ತು ಹೊಸ ತಾಯಂದಿರಿಗೆ ತಮ್ಮ ಕುಟುಂಬ ಮತ್ತು ವೃತ್ತಿಜೀವನವನ್ನು ಯಶಸ್ವಿಯಾಗಿ ಸಮತೋಲನಗೊಳಿಸಲು ಸಹಾಯ ಮಾಡಲಿದೆ.
ಸಿಟಿ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಪ್ರಧಾನ ಮಾನವ ಸಂಪನ್ಮೂಲ ಕಚೇರಿಯ ಆದಿತ್ಯ ಮಿತ್ತಲ್ ಮಾತನಾಡಿ, “ಸಿಟಿ ಇಂಡಿಯಾದ ಎಲ್ಲಾ ಕಚೇರಿಗಳಲ್ಲಿ(ಫ್ರಾಂಚೈಸಿಯಾದ್ಯಂತ) ನಮ್ಮ ಮಹಿಳಾ ಸಹೋದ್ಯೋಗಿಗಳಿಗೆ ಈ ಸೌಲಭ್ಯ ಒದಗಿಸಲು ನಾವು ಸಂತೋಷಪಡುತ್ತೇವೆ. ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತಾದ ಹೆಚ್ಚಿನ ಅಧ್ಯಯನಗಳು ಹೇಳುವ ಪ್ರಕಾರ, ಹೆರಿಗೆ ಹಂತದಲ್ಲಿ ಮಹಿಳೆಯರು ತಮ್ಮ ಉದ್ಯೋಗ ತ್ಯಜಿಸಲು ಅಥವಾ ದೀರ್ಘಾವಧಿಯ ವಿರಾಮ ತೆಗೆದುಕೊಳ್ಳಲು ಒಲವು ತೋರುತ್ತಾರೆ ಎಂಬುದನ್ನು ಸೂಚಿಸುತ್ತವೆ. ಇದು ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಂತಿಮವಾಗಿ ಸಂಸ್ಥೆಗಳಲ್ಲಿ ಹಿರಿಯ ಹಂತಗಳ ಉದ್ಯೋಗಗಳಲ್ಲಿ ಶೇಕಡಾವಾರು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ.
ಮಹಿಳಾ ಪ್ರತಿಭೆಯನ್ನು ಉಳಿಸಿಕೊಳ್ಳುವ ಮತ್ತು ಅವರಿಗೆ ಹೆಚ್ಚು ಅಗತ್ಯವಿರುವಾಗ ಅವರ ವೃತ್ತಿಜೀವನದ ಆಕಾಂಕ್ಷೆಗಳನ್ನು ಬೆಂಬಲಿಸುವುದು ಈ ಉಪ ಕ್ರಮ ಖಚಿತಪಡಿಸಿಕೊಳ್ಳಲು ದೊಡ್ಡ ಮತ್ತು ಸಮಯೋಚಿತ ಹೆಜ್ಜೆಯಾಗಿದೆ. ಆಶಾದಾಯಕವಾಗಿ, ಇದು ಸರ್ಕಾರದ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಉದ್ಯಮದ ಹೆಚ್ಚಿನ ಉಪಕ್ರಮಗಳನ್ನು ಉತ್ತೇಜಿಸುತ್ತದೆ ಎಂದರು.
ಸಿಟಿ ಇಂಡಿಯಾದ ಪರ್ಸನಲ್ ಬ್ಯಾಂಕಿಂಗ್ ಮತ್ತು ವೆಲ್ತ್ ಮ್ಯಾನೇಜ್ಮೆಂಟ್ ವಿಭಾಗದ ಡಿಜಿಟಲ್ ಸಾಫ್ಟ್ವೇರ್ ಇಂಜಿನಿಯರ್ ಮೇಘಾ ಮಂಗಲ್ ಮಾತನಾಡಿ, ಹೆರಿಗೆ ವಿರಾಮದ ನಂತರ ಇತ್ತೀಚೆಗೆ ತನ್ನ ಕೆಲಸ ಪುನಾರಂಭಿಸಿದ್ದೇನೆ. “ನನ್ನ ಜೀವನದ ಈ ನಿರ್ಣಾಯಕ ಸಮಯದಲ್ಲಿ ಸಿಟಿ ಇಂಡಿಯಾದ ಬೆಂಬಲ ಅಮೂಲ್ಯವಾಗಿದೆ. ಇದು ನನ್ನ ವೃತ್ತಿಜೀವನದ ಬಗ್ಗೆ ಚಿಂತಿಸದೆ ತಾಯ್ತನದ ಸಂತೋಷಗಳು ಮತ್ತು ಸವಾಲುಗಳನ್ನು ಸಂಪೂರ್ಣವಾಗಿ ಅನುಭವಿಸಲು ನನಗೆ ಅವಕಾಶ ಮಾಡಿಕೊಟ್ಟಿತು. ಮನೆಯಿಂದಲೇ ಕೆಲಸ ಮಾಡಿ ನಾನು ನನ್ನ ಕಂಪನಿಗೆ ಕೊಡುಗೆ ನೀಡುವುದನ್ನು ಮುಂದುವರಿಸಬಹುದು ಎಂದು ತಿಳಿದು, ನನ್ನ ಮನಸ್ಸಿಗೆ ಆದ ಶಾಂತಿಯು ನನ್ನ ಮಾತೃತ್ವದ ಪರಿವರ್ತನೆಯನ್ನು ತುಂಬಾ ಸುಗಮಗೊಳಿಸಿತು ಎಂದರು.
ಸಿಟಿ ಇಂಡಿಯಾದಲ್ಲಿ 30,000 ಉದ್ಯೋಗಿಗಳ ಬಲಿವಿದ್ದು, ಅದರಲ್ಲಿ 38% ಮಹಿಳೆಯರಿದ್ದಾರೆ, ಈ ಉಪಕ್ರಮವು ಸಿಟಿಯೊಂದಿಗೆ ಅವರ ವೃತ್ತಿಜೀವನದ ನಿರಂತರತೆ ಖಾತ್ರಿಪಡಿಸುವ ಮೂಲಕ ಮಹಿಳೆಯರಿಗೆ ವ್ಯಾಪಕವಾಗಿ ಪ್ರಯೋಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.