ಸುದ್ದಿಮೂಲ ವಾರ್ತೆ
ಆನೇಕಲ್, ಅ. 13 : ತಾಲೂಕು ರಾಮಸಾಗರ ಗ್ರಾಮದ ಗೋಲ್ಡ್ ಕಾಯಿನ್ ಸಭಾಂಗಣದಲ್ಲಿ ಚಂದಾಪುರ ಪುರಸಭೆ ವತಿಯಿಂದ ಪಾಲ ಕಾರ್ಮಿಕರ ದಿನಾಚರಣೆ ಆಚರಣೆ ಮಾಡಲಾಯಿತು. ಮುಖ್ಯ ಅಧಿಕಾರಿ ಶ್ವೇತಾ ಬಾಯಿ, ಹಿರಿಯ ಆರೋಗ್ಯ ಅಧಿಕಾರಿ ಎಂ.ರಮೇಶ್ ರಾಜು, ಕಂದಾಯಾಧಿಕಾರಿ ಸುಧಾಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಪೌರ ಕಾರ್ಮಿಕ ಸಿಬ್ಬಂದಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಬಳಿಕ ಮಾತನಾಡಿದ ಮುಖ್ಯ ಅಧಿಕಾರಿ ಶ್ವೇತಾಬಾಯಿ, ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಾರದರ್ಶಕವಾಗಿ ನೀಡಲಾಗುವುದು. ವಿಮೆ ಮತ್ತು ವಸತಿ ಆರೋಗ್ಯ ತಪಾಸಣೆ ಮತ್ತು ಸುರಕ್ಷಿತ ಸಲಕರಣೆ ಮಾಡಲಾಗುವುದು. ರಾಜ್ಯ ಮತ್ತು ನಗರ ಪಟ್ಟಣ ಆರೋಗ್ಯದಿಂದ ಮಾಲಿನ್ಯರಹಿತ ರೈತ ಪ್ಲಾಸ್ಟಿಕ್ ಮುಕ್ತ, ಕಸ ಮುಕ್ತ ಸುಂದರವಾಗಿರಲು ನಿಮ್ಮಿಂದ ಸಾಧ್ಯ. ನೀವು ಮತ್ತು ಗಡಿ ಕಾಯುವ ಸೈನಿಕರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಎಂದರು.
ಇದೇ ಸಂದರ್ಭದಲ್ಲಿ ತಾಂತ್ರಿಕ ವಿಭಾಗದ ಇಂಜಿನಿಯರ್ ಆದರ್ಶ್, ಕಿರಿಯ ಇಂಜಿನಿಯರ್ ಆದರ್ಶ, ಅಮೃತ ಸೇರಿದಂತೆ ಪುರಸಭೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಪರಕಾರ್ಮಿಕರು ಉಪಸ್ಥಿತರಿದ್ದರು.