ಸುದ್ದಿಮೂಲ ವಾರ್ತೆ
ಜಿಗಣಿ,ಅ.4: ಬೆಂಗಳೂರು ನಗರ ಜಿಲ್ಲೆ ದಕ್ಷಿಣ ತಾಲ್ಲೂಕು ಜಿಗಣಿ ಪುರಸಭೆ ವತಿಯಿಂದ ಇಂಡ್ಲವಾಡಿ ಕ್ರಾಸ್ ಬಗ್ಗನದೊಡ್ಡಿ ಸುಗ್ಗಿ ರೆಸಾರ್ಟ್ ನಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಡೆಯಿತು.
ಯೋಜನಾ ನಿರ್ದೇಶಕರಾದ ರಂಗಸ್ವಾಮಿ, ಮುಖ್ಯ ಅಧಿಕಾರಿ ರಾಜೇಶ್, ಪರಿಸರ ಅಭಿಯಂತರರಾದ ರಾಜಶ್ರೀ ಉದ್ಘಾಟಿಸಿದರು.
ಯೋಜನಾ ನಿರ್ದೇಶಕರಾದ ರಂಗಸ್ವಾಮಿ ಮಾತನಾಡಿ, ಪೌರಕಾರ್ಮಿಕರಿಗೆ ಮೂಲಭೂತ ಸೌಕರ್ಯ ಹಾಗೂ ಆರೋಗ್ಯ ವಿಮೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಪಾರದರ್ಶಕವಾಗಿ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರುಗಳಾದ ಸವಿತಾ ಮುರಳಿ ಜಿಗಣಿ ವಿನೋದ್, ಫ್ಯಾನ್ಸಿ ರಮೇಶ್, ಆನಂದ್ ಗೌಡ, ಮಧು, ಪುರಸಭೆಯ ಇಂಜಿನಿಯರ್ ಚಂದ್ರಶೇಖರ್ ಬಿ.ಎಲ್, ಆರೋಗ್ಯ ನಿರೀಕ್ಷಕ ವಿರೂಪಾಕ್ಷ, ಕಂದಾಯ ಅಧಿಕಾರಿ ಮುನಿರಾಜು ಎಂ., ಸಹ ಕಂದಾಯ ಅಧಿಕಾರಿ ರವಿ ಹೆಚ್.ಆರ್ ಹಾಗೂ ಪುರಸಭೆಯ ಆಡಳಿತ ವರ್ಗ ಅಧಿಕಾರಿಗಳು ಸಿಬ್ಬಂದಿಗಳು, ಪೌರ ಕಾರ್ಮಿಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.