ಸುದ್ದಿಮೂಲ ವಾರ್ತೆ ಬೆಂಗಳೂರು, ಜ.12:
ಕಳೆದ 5 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗ್ರೇೇಟರ್ ಬೆಂಗಳೂರು ಪ್ರಾಾಧಿಕಾರದ (ಜಿಬಿಎ) ಚುನಾವಣೆ ಈ ವರ್ಷದ ಜೂನ್ ಅಂತ್ಯದೊಳಗೆ ಮುಗಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆೆ ಸುಪ್ರೀೀಂಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ನೂತನವಾಗಿ ರಚನೆಯಾಗಿರುವ ಗ್ರೇೇಟರ್ ಬೆಂಗಳೂರು ಪ್ರಾಾಧಿಕಾರದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಿಯೆ ಜೂನ್ 30 ರೊಳಗೆ ಪೂರ್ಣಗೊಳಿಸುವಂತೆ ಮುಖ್ಯ ನ್ಯಾಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಾಯಮೂರ್ತಿ ಜೋಯ್ಮಲ್ಯ ಬಾಗ್ಚಿಿ ಅವರಿದ್ದ ಪೀಠವು ಗಡುವು ವಿಧಿಸಿ ಆದೇಶಿಸಿದೆ.
ಈ ಹಿಂದೆ, ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಈಗಿನ ಜಿಬಿಎ) ಚುನಾವಣೆ 2026ರ ೆಬ್ರವರಿಯಲ್ಲಿ ನಡೆಸುವುದಾಗಿ ತಿಳಿಸಿತ್ತು. ಆದರೆ, ವಾರ್ಡ್ಗಳ ವಿಂಗಡಣೆ, ಮೀಸಲಾತಿ, ಹೊಸ ಪ್ರಾಾಧಿಕಾರ ರಚನೆ ಹಿನ್ನೆೆಲೆಯಲ್ಲಿ ಚುನಾವಣಾ ದಿನಾಂಕ ಪ್ರಕಟಿಸಿರಲಿಲ್ಲ.
ಇದೇ ವಿಚಾರವಾಗಿ ಇಂದು ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿಿ ಮತ್ತು ಅಡ್ವೊೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಿ ಅವರು, ವಾರ್ಡಗಳ ಮೀಸಲಾತಿ ಪ್ರಕ್ರಿಿಯೆಯು ಅಂತಿಮ ಹಂತದಲ್ಲಿದೆ. ೆಬ್ರವರಿ 28ರೊಳಗೆ ವಾರ್ಡ್ವಾರು ಮೀಸಲಾತಿ ಪಟ್ಟಿಿಯು ಅಧಿಕೃತವಾಗಿ ಹೊರಬೀಳಲಿದೆ. ನಂತರ ಚುನಾವಣೆ ನಡೆಸುವ ಜವಾಬ್ದಾಾರಿಯನ್ನು ಚುನಾವಣಾ ಆಯೋಗ ವಹಿಸಿಕೊಳ್ಳಲಿದೆ ಎಂದು ಪೀಠಕ್ಕೆೆ ತಿಳಿಸಿದರು.
ಇದೇ ವೇಳೆ, ಚುನಾವಣಾ ಆಯೋಗವು ತನ್ನ ವಾದ ಮಂಡಿಸಿದೆ. ಮಾರ್ಚ್ 16ರೊಳಗೆ ಮತದಾರರ ಪಟ್ಟಿಿ ಪರಿಶೀಲನೆ ನಡೆಯಲಿದೆ. ಬೇಸಿಗೆ ರಜೆ ಹಿನ್ನೆೆಲೆ ಮೇ ಕೊನೆಯ ವಾರದವರೆಗೂ ಸಮಯಾವಕಾಶ ಬೇಕು. ಮತದಾರರ ಪಟ್ಟಿಿ, ಚುನಾವಣಾ ಸಿದ್ಧತೆ ಪೂರ್ಣಗೊಳ್ಳಲು ಜೂನ್ವರೆಗೆ ಸಮಯ ಬೇಕಾಗಬಹುದು ಎಂದು ಸುಪ್ರೀೀಂಕೋರ್ಟ್ಗೆ ತಿಳಿಸಿತು.
ವಾದ ಆಲಿಸಿದ ಕೋರ್ಟ್, ೆಬ್ರವರಿ 20 ರೊಳಗೆ ವಾರ್ಡ್ವಾರು ಮೀಸಲಾತಿ ಪಟ್ಟಿಿ ರಾಜ್ಯ ಸರ್ಕಾರ ಪ್ರಕಟಿಸಬೇಕು. ಜಿಬಿಎ ಚುನಾವಣೆಯನ್ನು ಜೂನ್ 30 ರೊಳಗೆ ಮುಗಿಸಬೇಕು. ಇದಕ್ಕಾಾಗಿ ಮತ್ತೆೆ ಸಮಯಾವಕಾಶ ಕೋರಿ ಬರಬೇಡಿ ಎಂದು ಸ್ಪಷ್ಟಪಡಿಸಿತು.
198 ವಾರ್ಡ್ಗಳನ್ನು ಹೊಂದಿರುವ ಗ್ರೇೇಟರ್ ಬೆಂಗಳೂರು ಪ್ರಾಾಧಿಕಾರ (ಜಿಬಿಎ) ಅಥವಾ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಕೊನೆಯ ಬಾರಿಗೆ ಆಗಸ್ಟ್ 2015 ರಲ್ಲಿ ನಡೆದಿತ್ತು. ಇದರ ಅವಧಿ ಸೆಪ್ಟಂಬರ್ 2020 ರಲ್ಲಿ ಕೊನೆಗೊಂಡಿತ್ತು. ಅಂದಿನಿಂದ ಚುನಾವಣೆಗಳನ್ನು ಪದೇ ಪದೆ ಮುಂದೂಡುತ್ತಾಾ ಬರಲಾಗಿದೆ.

