ಸುದ್ದಿಮೂಲವಾರ್ತೆ
ಕೊಪ್ಪಳ,ನ.9:ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಾಳಿ,ಕಾಲುಂಗುರ ತೆಗೆಸಿದ ಪ್ರಕರಣ ಮನಸ್ಸಿಗೆ ನೋವು ತಂದಿದೆ. ಹಿಂದು ಧರ್ಮದ ಮಹಿಳೆಯರಿಗೆ ಇದು ಅವಮಾನ ಮಾಡಿದಂತೆ. ಮುಂದೆ ಇಂಥ ಘಟನೆಗಳು ನಡೆಯಬಾರದು ಎಂದು ವಿಧಾನಪರಿಷತ್ ಸದಸ್ಯೆ ಶ್ರೀಮತಿ ಹೇಮಲತಾ ನಾಯಕ ಹೇಳಿದರು.
ಅವರು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಈ ಪ್ರಕರಣದಿಂದ ಇಡೀ ಮಹಿಳೆಯರಿಗೆ ನೋವಾಗಿದೆ ಇದನ್ನು ಸರಕಾರ ಆದೇಶ ಮಾಡಿದಿಯೊ ಅಥವಾ ಅಧಿಕಾರಿಗಳು ಸರಕಾರದ ಆದೇಶವನ್ನು ನೆಪವಾಗಿಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೊ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರಕಳುಹಿಸಬಾರದು ಎಂದು ಒತ್ತಾಯಿಸಿದರು.
ಈಗ ಕೆಲವು ಕಡೆ ಹಿಜಾಬ್ ಪರೀಕ್ಷೆ ಬರೆಯುತ್ತಾರೆ ಅಂದಾದರೆ.ನಾವು ತಾಳಿ,ಕಾಲುಂಗುರ ಹಾಕಿಕೊಂಡು ಪರೀಕ್ಷೆ ಬರೆದರೆ ತಪ್ಪೇನು? ಇದು ಸುಮಂಗಲಿಯರಿಗೆ ಮಾಡಿದ ಅವಮಾನವಾಗಿದೆ. ಮಾಧ್ಯಮಗಳಲ್ಲಿ ತಾಳಿ,ಕಾಲುಂಗರ ತೆಗೆದದ್ದು ಮಾತ್ರ ಬಂದಿದೆ.ಬೇರೆ ಯಾವ ವಿಷಯವೂ ಬಂದಿಲ್ಲ. ಇದರಿಂದಾಗಿ ನಮ್ಮನ್ಮೇ ಟಾರ್ಗೆಟ್ ಮಾಡಿದ್ದಾರೆ ಎಂದಾದಂತಾಗುತ್ತದೆ ಎಂದರು.
ಹೆಣ್ಣುಮಕ್ಕಳು ಎರಡು ಸಂದರ್ಭದಲ್ಲಿ ಮಾತ್ರ ತಾಳಿ,ಕಾಲುಂಗುರ ತೆಗೆಯುತ್ತಾರೆ.
ವಿಧವೆ ಆದಾಗ, ಸ್ಕ್ಯಾನ್ ಸಂದರ್ಭದಲ್ಲಿ ಮಾತ್ರ ಎರಡನ್ನೂ ತೆಗೆಯುತ್ತಾರೆ. ತಾಳಿ ಹಾಗು ಕಾಲುಂಗುರು ಹಾಕಿಕೊಳ್ಳುವದರಿಂದ ಏನು ಸಮಸ್ಯೆ ಎಂಬುವುದು ಯಾರಿಗೂ ಗೊತ್ತಿಲ್ಲ.ಮುಂದಿನ ಪರೀಕ್ಷೆಯಲ್ಲಿ ಇದು ಮರುಕಳಿಸಬಾರದೆಂದ ಎಂ ಎಲ್ ಸಿ ಹೇಮಲತಾ ನಾಯಕ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಬಿಜೆಪಿಯ ಗೀತಾ ಪಾಟೀಲ ಹಾಗು ಶೋಭಾ ನಗರಿ ಇದ್ದರು.