ಸುದ್ದಿಮೂಲ ವಾರ್ತೆ
ಮೈಸೂರು, ಸೆ. 22:ನಗರದ ಜಿಲ್ಲಾ ಪಂಚಾಯ್ತಿಯಲ್ಲಿ ಶುಕ್ರವಾರ ನಡೆಯುತ್ತಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸಭೆಗೆ ನುಗ್ಗಲು ಯತ್ನಿಸಿದ ರೈತರನ್ನು ಪೊಲೀಸರು ಬಂಧಿಸಿದರು.
ಸಂಕಷ್ಟ ಸೂತ್ರ ಜಾರಿಯಾಗುವ ತನಕ ಸರ್ವೋಚ್ಚ ನ್ಯಾಯಾಲಯದ ತೀರ್ಪು ಒಪ್ಪಬಾರದು. ರಾಜ್ಯ ಸರ್ಕಾರ ಕೂಡಲೇ ಮರುಪರಿಶೀಲನೆ ಮೇಲ್ಮನವಿ ಸಲ್ಲಿಸಬೇಕು. ರಾಜ್ಯ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭೆಗೆ ನುಗ್ಗಲು ಗೇಟ್ ಏರಲು ಮುಂದಾದರು. ಆಗ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಸೇರಿದಂತೆ ನೂರಾರು ಕಾವೇರಿ ಹೋರಾಟಗಾರರನ್ನು ಬಂಧಿಸಲಾಯಿತು.
ಜಲದರ್ಶಿನಿ ಅತಿಥಿಗೃಹದಲ್ಲಿ ಕಾವೇರಿ ಹೋರಾಟದ ಮುಂದಿನ ನಡೆ ಬಗ್ಗೆ ಸಂಘ ಸಂಸ್ಥೆಗಳ ಸಭೆ ನಡೆಸಿದ ನಂತರ ದಿಢೀರನೆ ಸಭೆ ನಡೆಸುತ್ತಿದ್ದ, ಸ್ಥಳಕ್ಕೆ ಹೋಗಬೇಕೆಂದು ಎಲ್ಲ ಮುಖಂಡರು ತೀರ್ಮಾನಿಸಿ ಸಭೆ ನಡೆಸುತ್ತಿದ್ದ ಜಾಗಕ್ಕೆ ನುಗಲು ಯತ್ನಿಸಲಾಯಿತು. ಆರಂಭದಲ್ಲಿ ಕೆಲವು ರೈತರು ಜಿಲ್ಲಾ ಪಂಚಾಯಿತಿ ಬಳಿ ಜಮಾಯಿಸಿದರು.
ಈ ವೇಳೆ ಒಳ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಆಗ ರೈತರು, ಪೊಲೀಸರ ನಡುವೆ ದು ಮಾತಿನ ಚಕುಮುಕಿ ನಡೆಸಲಾಯಿತು.
ರೈತ ಮುಖಂಡ ಕುರುಬುರ್ ಶಾಂತಕುಮಾರ್ ಮಾತನಾಡಿ, ರಾಜ್ಯದ ಜನರ ರೈತರ ಹಿತದೃಷ್ಟಿಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿರುವ ಕಾರಣ ನಾರ್ತ್ ಈಸ್ಟ್ ಮಾನ್ಸೂನ್ ಮಳೆ ತಮಿಳುನಾಡಿಗೆ ಹೆಚ್ಚು ಬರುವ ಕಾರಣ ಕರ್ನಾಟಕ ನೀರು ಹರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ನ್ಯಾಯಾಲಯಕ್ಕೆ ತಿಳಿಸಿ, ಈಗ ನೀರು ಹರಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರಾದ, ಕನ್ನಡ ಚಳುವಳಿ ಹೋರಾಟಗಾರ, ರೈತ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಬನ್ನೂರು ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.