ಸುದ್ದಿಮೂಲ ವಾರ್ತೆ ಸಿಂಧನೂರು, ಅ.24:
ಇಸ್ಪೀಟ್ ಜೂಜಾಟಕ್ಕೆೆ ಸಂಬಂಧಿಸಿದಂತೆ ನಗರದ ಎಪಿಎಂಸಿ ಗಂಜ್ನಲ್ಲಿ ಎರಡು ಯುವಕರ ಗುಂಪುಗಳ ನಡುವೆ ನಡೆದ ವಿವಾದ ವಿಕೋಪಕ್ಕೆೆ ಹೋಗಿ ದೊಣ್ಣೆೆಗಳಿಂದ ಮಾರಾಮಾರಿ ನಡೆದಿದ್ದು, ಕೆಲವರಿಗೆ ತೀವ್ರ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆದ ಘಟನೆ ನಡೆದಿದೆ.
ವಿರುಪಾಪುರ ಮತ್ತು ನಟರಾಜ ಕಾಲೋನಿಯ ಕೆಲ ಯುವಕರ ನಡುವೆ ನಡೆದ ಜಗಳ ತಾರಕಕ್ಕೇರಿ ಗುಂಪು ಘರ್ಷಣೆಯಾಗಿ ಮಾರ್ಪಟ್ಟಿಿದ್ದು, ಪಿ.ಮಲ್ಲಿಕಾರ್ಜುನ ಕುರುಕುಂದಿ, ಶಿವರಾಜ ಪಾಟೀಲ್ ಗುಂಜಳ್ಳಿಿ, ಪಂಪನಗೌಡ, ರಾಯಪ್ಪ, ಮಂಜುನಾಥ ಎಂಬುವವರ ತಲೆಗೆ ತೀವ್ರ ಪೆಟ್ಟಾಾಗಿದೆ. ಎರಡು ಗುಂಪುಗಳ ನಡುವೆಯುಂಟಾದ ಕಲಹ ಬಿಡಿಸಲು ಹೋದ ಕೆಲವರು ಗಾಯಗೊಂಡಿದ್ದಾಾರೆ.
ಶಿವರಾಜ ಪಾಟೀಲ್ ಗುಂಜಳ್ಳಿಿ ಎನ್ನುವವರು ತಮ್ಮ ಸಹೋದರನ ಪುತ್ರನಿಗೆ ಹಲ್ಲೆೆ ಮಾಡಿದ್ದಾಾನೆ ಎಂದು ನಗರಸಭೆ ಸದಸ್ಯ ಪಿ.ಸಣ್ಣವೀರಭದ್ರಪ್ಪ ಕುರುಕುಂದಿ ಅವರು ಸ್ಥಳಕ್ಕೆೆ ತೆರಳಿದ್ದರಿಂದ ಶಿವರಾಜ ಪಾಟೀಲ್ ಗುಂಜಳ್ಳಿಿ ಮತ್ತು ಸಣ್ಣವೀರಭದ್ರಪ್ಪ ಕುರುಕುಂದಿ ಅವರ ನಡುವೆಯೂ ವಾಗ್ವಾಾದ ನಡೆದು ಮಾರಾಮಾರಿಗೆ ತಿರುಗಿದೆ ಎಂದು ಹೇಳಲಾಗಿದೆ. ಈ ಘಟನೆಯನ್ನು ತಿಳಿಗೊಳಿಸಲು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮತ್ತು ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಬಸವ ಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಿ ಪ್ರಯತ್ನ ನಡೆಸಿದ್ದಾಾರೆ ಎಂದು ಹೇಳಲಾಗಿದೆ. ದೊಣ್ಣೆೆಗಳಿಂದ ಹೊಡೆಯುತ್ತಿಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

