ಸುದ್ದಿಮೂಲ ವಾರ್ತೆ
ಹೊಸಕೋಟೆ, ನ.25: ನಗರದ ಖಾಜಿ ಅಮ್ರಿಯ ಕಸಬಾ ವ್ಯಾಪ್ತಿಗೆ ಒಳಪಡುವ ಸರ್ವೆ ನಂ 127ರಲ್ಲಿ ಒಟ್ಟು 12 ಎಕರೆ 19 ಗುಂಟೆ ಸರ್ಕಾರಿ ಕೆರೆ ಅಂಗಳವಿದ್ದು ಮೂರೂವರೆ ಎಕರೆ ಕೆರೆ ಅಂಗಳ ಜಾಗವನ್ನು ಒತ್ತುವರಿ ತೆರವುಗೊಳಿಸಲಾಯಿತು.
ತಾಹಸೀಲ್ದಾರ್ ರವರ ಆದೇಶದಂತೆ ರಾಜಸ್ವ ನಿರೀಕ್ಷಕರಾದ ಚಂದ್ರಶೇಖರ್, ಗ್ರಾಮ ಲೆಕ್ಕಿಗಾರದ ಶ್ರೀಕಾಂತ್ ಬಡಿಗೇರಾ ಅವರು ಜೆಸಿಬಿ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅದೇರೀತಿ ದಂಡುಪಾಳ್ಯದ ಸರ್ವೆ ನಂ.83ರಲ್ಲಿ ಸರ್ಕಾರಿ ಜಮೀನು 36 ಗುಂಟೆ ತರೆವು ಸರ್ಕಾರದ ಸುಪರ್ಧಿಗೆ ತೆಗದುಕೊಳ್ಳಲಾಗಿದೆ.