ಸುದ್ದಿಮೂಲ ವಾರ್ತೆ ಬೆಂಗಳೂರು, ನ.18:
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 50 ವರ್ಷಗಳ ತನ್ನ ಸುಧೀರ್ಘ ಸೇವೆಯಲ್ಲಿ ಕೈಗಾರಿಕಾ ಮಾಲಿನ್ಯದ ಆರಂಭಿಕ ಸವಾಲುಗಳಿಂದ ಆರಂಭವಾಗಿ ಪ್ರಸ್ತುತ ಹವಾಮಾನ ಸಹಿಷ್ಣುತೆ ಮತ್ತು ದಕ್ಷತೆವರೆಗೆ ಸವಾಲುಗಳನ್ನು ಎದುರಿಸಿ ಕೆಲಸ ನಿರ್ವಹಿಸಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಾಮಿ ಅವರು ಹೇಳಿದರು.
ನಗರದಲ್ಲಿ ನಡೆದ ಸರ್ಕ್ಯೂಲರ್ ಅರ್ಥವ್ಯವಸ್ಥೆೆ ಮತ್ತು ಸ್ಥಿಿರತೆ ಕುರಿತ ಸಮ್ಮೇಳನದಲ್ಲಿ ಮಾತನಾಡಿದರು.
ಪರಿಸರ ಸಂರಕ್ಷಣೆ ಮತ್ತು ಕರ್ನಾಟಕದ ಸುಸ್ಥಿಿರ ಅಭಿವೃದ್ಧಿಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪಾತ್ರ ಅತ್ಯಂತ ಮಹತ್ವದ್ದು. ಕಳೆದ ಐದು ದಶಕಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಸುಸ್ಥಿಿರ ಪ್ರಗತಿಗೆ ಪಾಲುದಾರವಾಗಿರುವತ್ತ ಹೆಜ್ಜೆೆ ಇಟ್ಟಿಿದೆ. ಕೈಗಾರಿಕೆಗಳು, ನಗರ ಸಂಸ್ಥೆೆಗಳು ಮತ್ತು ನಾಗರಿಕರನ್ನು ಶುದ್ಧ ತಂತ್ರಜ್ಞಾನ, ಉತ್ತಮ ತ್ಯಾಾಜ್ಯ ನಿರ್ವಹಣೆ ಮತ್ತು ಜವಾಬ್ದಾಾರಿಯುತ ಪರಿಸರ ಸಂರಕ್ಷಣೆಯತ್ತ ಕೊಂಡೊಯ್ದಿಿದೆ.
ಸರ್ಕ್ಯೂಲರ್ ಅರ್ಥವ್ಯವಸ್ಥೆೆ ಮತ್ತು ಸ್ಥಿಿರತೆ ಎಂಬ ಇಂದಿನ ಸಂವಾದದ ವಿಷಯ ಈಗಿನ ಕಾಲಘಟ್ಟದ ಅಗತ್ಯವಷ್ಟೇ ಅಲ್ಲ. ನವೀನ ತಂತ್ರಜ್ಞಾನ, ಉತ್ತಮ ತ್ಯಾಾಜ್ಯ ನಿರ್ವಹಣೆ ಮತ್ತು ಜವಾಬ್ದಾಾರಿ ಇರುವ ಪರಿಸರ ಸಂರಕ್ಷಣೆಯ ಕಡೆಗೆ ಮುನ್ನಡೆಸಲು ನೆರವಾಗಲಿದೆ. ಆರಂಭದ ಸಂದರ್ಭದಲ್ಲಿ ಕೈಗಾರಿಕಾ ಮಾಲಿನ್ಯ ನಿಯಂತ್ರಣ ಸಮಸ್ಯೆೆಗಳನ್ನು ಎದುರಿಸಿದ ಮಂಡಳಿ ಇಂದು ಹವಾಮಾನ ಸ್ಥಿಿರತೆ ಮತ್ತು ಸಂಪನ್ಮೂಲ ಕಾರ್ಯಕ್ಷಮತೆ ಎಂಬ ಸವಾಲುಗಳನ್ನು ಎದುರಿಸುತ್ತಿಿದೆ ಎಂದರು.
ಹವಾಮಾನ ಪರಿವರ್ತನೆ, ಜೀವವೈವಿಧ್ಯ ಹಾನಿ, ಮತ್ತು ತ್ಯಾಾಜ್ಯ ನಿರ್ವಹಣೆಗೆ ಸಮರ್ಪಕವಾದ, ಕ್ರಾಾಂತಿಕಾರಿ ಪರಿಹಾರ ಮಾರ್ಗ ಕಂಡುಕೊಳ್ಳಬೇಕಿದೆ. ತ್ಯಾಾಜ್ಯವನ್ನು ಕಡಿಮೆ ಮಾಡಿ, ವಸ್ತುಗಳ ಮರುಬಳಕೆಯನ್ನು ಗರಿಷ್ಠಗೊಳಿಸಿ, ಸಂಪನ್ಮೂಲಗಳನ್ನು ದೀರ್ಘಾವಧಿ ಚಲಾವಣೆಯಲ್ಲಿ ಇರಿಸುವುದರಿಂದ ಸಂಪನ್ಮೂಲ ಸಂರಕ್ಷಣೆ ಮತ್ತು ಪರಿಸರ ಸುಧಾರಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ 1,407 ಪ್ಲಾಾಸ್ಟಿಿಕ್ ತ್ಯಾಾಜ್ಯ ಘಟಕಗಳು ಮತ್ತು 1,063 ಇ-ತ್ಯಾಾಜ್ಯ ಘಟಕಗಳು, 11 ಬ್ಯಾಾಟರಿ ತ್ಯಾಾಜ್ಯ ಘಟಕಗಳು ನೋಂದಣಿಯಾಗಿದ್ದು, ಲಿಥಿಯಂ, ಕೋಬಾಲ್ಟ್, ನಿಕ್ಕೇಲ್ ಮುಂತಾದ ಅಪರೂಪದ ಲೋಹಗಳ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತಿಿದೆ. ಸರ್ಕ್ಯುಲರ್ ಅರ್ಥವ್ಯವಸ್ಥೆೆ ಜಾರಿಯಾದರೆ ಜಾಗತಿಕವಾಗಿ ವರ್ಷಕ್ಕೆೆ 1 ಟ್ರಿಿಲಿಯನ್ ಡಾಲರ್ ಮೌಲ್ಯದ ಸಂಪನ್ಮೂಲ ಉಳಿತಾಯ ಸಾಧ್ಯವೆಂದು ಅವರು ಉಲ್ಲೇಖಿಸಿದರು.
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳು, ಹಸಿರು ಪಟಾಕಿ ಬಳಕೆ ಇದಕ್ಕೆೆ ಉತ್ತಮ ನಿದರ್ಶನ. ಇದರಿಂದ ಪರಿಸರದ ಮೇಲಿನ ಮಾಲಿನ್ಯ ಕಡಿಮೆಯಾಗುವಂತಾಯಿತು ಎಂದರು.
ಸಮ್ಮೇಳನದಲ್ಲಿ ತ್ಯಾಾಜ್ಯ ನೀರು ಮರುಬಳಕೆ, ಘನತ್ಯಾಾಜ್ಯ ನಿರ್ವಹಣೆ, ಪ್ಲಾಾಸ್ಟಿಿಕ್ ಮತ್ತು ಇ-ತ್ಯಾಾಜ್ಯ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಂವಾದ ನಡೆಯಿತು.
ಕಾರ್ಯಕ್ರಮದಲ್ಲಿ ನ್ಯಾಾಯಮೂರ್ತಿ ಸುಭಾಷ್ ಬಿ. ಆದಿ, ರಾಜ್ಯ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಪ್ರಾಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡ, ಮಂಡಳಿ ಸದಸ್ಯ ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಮತ್ತಿಿತರರು ಪಾಲ್ಗೊೊಂಡಿದ್ದರು.
ಬಾಕ್ಸ್
ಸಂಪನ್ಮೂಲ ಸಂರಕ್ಷಣೆಗೆ ಪುನರ್ ಬಳಕೆ
ನೈಸರ್ಗಿಕ ಸಂಪನ್ಮೂಲಗಳ ಸುದೀರ್ಘ ಬಳಕೆ ಮತ್ತು ಸಂರಕ್ಷಣೆಗಾಗಿ ಮರು ಬಳಕೆ ಮತ್ತು ಪುನರ್ ಬಳಕೆಗೆ ಒತ್ತು ನೀಡುವುದು ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆೆ ಹೇಳಿದ್ದಾರೆ.
ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು, ಪ್ರಕೃತಿಯೂ ಉಳಿಯಬೇಕು, ಪ್ರಗತಿಯೂ ಆಗಬೇಕು ಎಂಬುದು ನಮ್ಮ ಸರ್ಕಾರದ ನಿಲುವಾಗಿದ್ದು, ಸುಸ್ಥಿಿರ ಅಭಿವೃದ್ಧಿಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಜಗತ್ತು ಎದುರಿಸುತ್ತಿಿದೆ. ಈ ಕಾಲಘಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಪರಿಸರ ಸ್ನೇಹಿ ರೂಢಿಗಳ ಉತ್ತೇಜನ, ಆಧುನಿಕ ತಂತ್ರಜ್ಞಾನದ ಬಳಕೆ, ನಾವೀನ್ಯತೆಗೆ ಒತ್ತು ನೀಡಿ ಒಟ್ಟಾಾರೆ ಸುಸ್ಥಿಿರತೆ ಮಾದರಿಯ ಪರಿಣಾಮಕಾರಿ ಅನುಷ್ಠಾಾನ ಮಾಡುವ ಮೂಲಕ ಸುಸ್ಥಿಿರ ಅಭಿವೃದ್ಧಿಿಯತ್ತ ಸಾಗಬೇಕು ಎಂದು ಹೇಳಿದರು.
ಮರುಬಳಕೆ, ದುರಸ್ತಿಿ, ಪುನರ್ ಬಳಕೆ ಮಾಡುವ ಮೂಲಕ ಆರ್ಥಿಕವಾಗಿ ಕಾರ್ಯಸಾಧ್ಯವಾದ ರೀತಿಯಲ್ಲಿ ಕಾರ್ಯರೂಪಕ್ಕೆೆ ತರಬೇಕಿದೆ. ನಮ್ಮ ಭೂಗ್ರಹ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಾಂತರಿಸಬೇಕಿದೆ ಎಂದು ಈಶ್ವರ ಖಂಡ್ರೆೆ ಹೇಳಿದರು.

