ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.27:
ಜ.3ರಿಂದ ಆರಂಭವಾಗುವ ಅಂಬಾಮಠದ ಶ್ರೀ ಅಂಬಾದೇವಿ ಜಾತ್ರಾಾಮಹೋತ್ಸವಕ್ಕೆೆ ಚಾಲನೆ ನೀಡಲು ಸಿಎಂ, ಡಿಸಿಎಂ ಸೇರಿ ಸಚಿವರು ಆಗಮಿಸಲಿದ್ದು, 300ರಿಂದ 400ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿಿ ಕಾಮಗಾರಿಗಳಿಗೆ ಶಂಕುಸ್ಥಾಾಪನೆ ಹಾಗೂ ಉದ್ಘಾಾಟನೆ ನೆರವೇರಿಸಲಿದ್ದಾಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರದ ಕೋಟೆ ಈರಣ್ಣ ದೇವಸ್ಥಾಾನದಲ್ಲಿ ಶನಿವಾರ ಸುದ್ದಿಗೋಷ್ಠಿಿನಡೆಸಿ ಅವರು ಮಾತನಾಡಿದರು. ತಾಲ್ಲೂಕಿನ ಅಂಬಾಮಠದಲ್ಲಿ ಜ.3ರಿಂದ 6ವರೆಗೆ ನಡೆಯುವ ಸಿದ್ದಪರ್ವತ ಅಂಬಾದೇವಿ ಜಾತ್ರಾಾಮಹೋತ್ಸವ ಹಿನ್ನಲೆ ಭಕ್ತಿಿ, ಶಕ್ತಿಿ ಮತ್ತು ದಿವ್ಯಪರಂಪರೆಯ ಅಂಬಾದೇವಿ ಉತ್ಸವಕ್ಕೆೆ ಚಾಲನೆ ನೀಡಲು ಮುಖ್ಯಮಂತ್ರಿಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ ಹಾಗೂ 6 ಜನರ ಸಚಿವರು ಆಗಮಿಸಲಿದ್ದು, ತಾಲ್ಲೂಕಿನ 24 ಗ್ರಾಾಮಗಳನ್ನು ಕಂದಾಯ ಗ್ರಾಾಮಗಳನ್ನಾಾಗಿ ಪರಿವರ್ತಿಸಿ, ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಕಂದಾಯ ಗ್ರಾಾಮಗಳನ್ನು ಸಿಂಧನೂರಿಗೆ ನೀಡಲಾಗಿದೆ. ಪ್ರಾಾಯೋಗಿಕವಾಗಿ ಕಂದಾಯ ಗ್ರಾಾಮಗಳ 5 ಜನರಿಗೆ ಹಕ್ಕುಪತ್ರಗಳನ್ನು ಮುಖ್ಯಮಂತ್ರಿಿಗಳು ಹಾಗೂ ಸಚಿವರು ವಿತರಣೆ ಮಾಡಲಿದ್ದಾಾರೆ ಎಂದರು.
ಸಿಂಧನೂರು ಮತಕ್ಷೇತ್ರದ ಶಾಲಾ-ಕಾಲೇಜಿನ 25 ಸಾವಿರ ವಿದ್ಯಾಾರ್ಥಿಗಳಿಗೆ ಅನುಕೂಲ ಕಲ್ಪಿಿಸುವ ನಿಟ್ಟಿಿನಲ್ಲಿ ಕಲ್ಯಾಾಣ ಕರ್ನಾಟಕ ಅಭಿವೃದ್ಧಿಿ ಮಂಡಳಿಯಿಂದ 15 ನೂತನ ಬಸ್ಗಳನ್ನು ಮಂಜೂರು ಮಾಡಲಾಗಿದೆ. ಜ.3ರಂದು ಅಂಬಾದೇವಿ ಉತ್ಸವದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಿ ಬಸ್ ಸಂಚಾರಕ್ಕೆೆ ಚಾಲನೆ ನೀಡಲಿದ್ದಾಾರೆ. 15 ವಿಶೇಷ ಶಾಲಾ ಬಸ್ಗಳಿಂದ ಈ ಭಾಗದ ವಿದ್ಯಾಾರ್ಥಿಗಳಿಗೆ ಶೈಕ್ಷಣಿಕವಾಗಿ ಪೂರಕ ವಾತವರಣ ನಿರ್ಮಾಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಬ್ಲಾಾಕ್ ಕಾಂಗ್ರೆೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಮುಖಂಡರಾದ ಲಿಂಗರಾಜ್ ಪಾಟೀಲ್, ಬಸವರಾಜ ಹಿರೇಗೌಡರ್ ಇತರರು ಇದ್ದರು.
ಜ.3ರಂದು ಅಂಬಾಮಠಕ್ಕೆ ಸಿಎಂ, ಡಿಸಿಎಂ ಆಗಮನ 400 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಾಪನೆ: ಬಾದರ್ಲಿ

