ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.19
ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ಸೇವೆ ಒದಗಿಸುವ ನಿಟ್ಟಿಿನಲ್ಲಿ ರಾಜ್ಯ ಸರ್ಕಾರ ಸುವರ್ಣಸೌಧದ ಭವ್ಯ ಮೆಟ್ಟಿಿಲುಗಳ ಮೇಲೆ ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕಗಳಿಗೆ ಶುಕ್ರವಾರ ಚಾಲನೆ ನೀಡಿತು.
ದೂರದ ಹಳ್ಳಿಿಗೂ ಹತ್ತಿಿರದ ಆರೈಕೆ ಎಂಬ ಘೋಷವಾಕ್ಯದ ಅಡಿ ಜಾರಿಯಾಗಿರುವ ಆರೋಗ್ಯ ಸೇವೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಉದ್ಘಾಾಟಿಸಿದರು.
ಎಲ್ಲ ಪ್ರದೇಶಗಳಿಗೂ ಆರೋಗ್ಯ ಸೇವೆ: ರಾಜ್ಯದಲ್ಲಿರುವ ಜನ ಸಂಪರ್ಕ ರಹಿತ ಪ್ರದೇಶಗಳು, ದುರ್ಗಮ ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮನೆಯ ಬಾಗಿಲಲ್ಲೇ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ 81 ಸಂಚಾರಿ ಆರೋಗ್ಯಘಟಕಗಳನ್ನು ಪ್ರಾಾರಂಭಿಸಲಾಗುವುದು. ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿಯಲ್ಲಿ 49 ಸಂಚಾರಿ ಆರೋಗ್ಯ ಘಟಕಗಳನ್ನು ಮತ್ತು ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅನುದಾನದಡಿಯಲ್ಲಿ 32 ಪರಿಶಿಷ್ಟ ಜಾತಿಹಾ ಗೂ ಪರಿಶಿಷ್ಟಪಂಗಡ ಮೀಸಲು ಕ್ಷೇತ್ರಗಳಲ್ಲಿ ಅನುಷ್ಟಾಾನಗೊಳಿಸಲಾಗುವುದು. ಸಂಚಾರಿ ಆರೋಗ್ಯಘಟಕಗಳ ಮೂಲಕಪ್ರಾಾಥಮಿಕ ಆರೋಗ್ಯ ಸೇವೆಗಳು, ಸಮುದಾಯ ಆರೈಕೆಸೇವೆಗಳು, ರೆರಲ್ ಸೇವೆಗಳು, ರಾಷ್ಟ್ರೀಯ ಹಾಗೂ ರಾಜ್ಯಆರೋಗ್ಯಕಾರ್ಯಕ್ರಮಗಳಅನುಷ್ಟಾಾನ ಹಾಗೂ ಇತರೆ ಸೇವೆಗಳನ್ನು ಒದಗಿಸಲಾಗುವುದು ಎಂದು ಸಿಎಂ ಹೇಳಿದರು.
ಜಿಲ್ಲೆಯ ಹೆಸರು ಸಂಚಾರಿ ಆರೋಗ್ಯ ಘಟಕಗಳ ಸಂಖ್ಯೆೆ :
ಬಾಗಲಕೋಟೆ 2
ಬಳ್ಳಾಾರಿ 1
ಬೀರ್ದ 1
ಬೆಳಗಾವಿ 4
ಬೆಂಗಳೂರುದಕ್ಷಿಣ 1
ಚಾಮರಾಜನಗರ 4
ಚಿತ್ರದುರ್ಗ 3
ಚಿಕ್ಕಬಳ್ಳಾಾಪುರ 1
ಚಿಕ್ಕಮಗಳೂರು 3
ದಕ್ಷಿಣಕನ್ನಡ 5
ಧಾರವಾಡ 2
ದಾವಣಗೆರೆ 2
ಗದಗ 2
ಹಾಸನ 1
ಹಾವೇರಿ 2
ಕಲಬುರಗಿ 5
ಕೊಡಗು 4
ಕೋಲಾರ 1
ಕೊಪ್ಪಳ 1
ಮಂಡ್ಯ 2
ಮೈಸೂರು 4
ರಾಯಚೂರು 8
ಶಿವಮೊಗ್ಗ 2
ತುಮಕೂರು 3
ಉಡುಪಿ 4
ಉತ್ತರಕನ್ನಡ 6
ವಿಜಯನಗರ 4
ವಿಜಯಪುರ 2
ಯಾದಗಿರಿ 1

