ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.16:ಅನ್ನ ಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಕೊಡುವದರಲ್ಲಿಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದರೆ ಅಕ್ಕಿ ತರಲು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದಾರೆ.ಇವರು ಉಡಾಫೆಯಾಗಿ ಮಾತನಾಡುತ್ತಾರೆ. ಎಂದು ಸಂಸದ ಸಂಗಣ್ಣ ಕರಡಿ ಟೀಕಿಸಿದರು.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅಕ್ಕಿ ವಿಷಯದಲ್ಲಿ ಕೇಂದ್ರ ಸರಕಾರದ ಟೆಂಡರ್ ಭಾಗಿ ಅಕ್ಕಿಯನ್ನು ಪಡೆಯಬೇಕು. ಯಾವುದೇ ಮುಂಜಾಗ್ರತೆ ಇಲ್ಲದೆ 10 ಕೆಜಿ ಎಂದು ಘೋಷಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಮೆಜಾರಿಟಿ ಇದೆ ಎಂದು ಏನಾದರೂ ಮಾಡಿದರೆ ನಡೆಯುತ್ತೆ ಎಂಬಂತೆ ವರ್ತಿಸುತ್ತಿದ್ದಾರೆ.ಫ್ರೀ ಬಸ್ ಪ್ರಯಾಣದ ಪುರುಷರಿಗೆ ಸೀಟು ನೀಡುತ್ತಿಲ್ಲ.ಸುಪ್ರೀಂ ಕೋರ್ಟು ಹೇಳಿದರೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುತ್ತೆವೆ ಎನ್ನುತ್ತಾರೆ.ಇಲ್ಲಿ ಅಶಾಂತಿ ವಾತವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ವಿದ್ಯುತ್ ದರ ಏರಿಕೆಯ ಸಂಬಂಧದಲ್ಲಿ ಬೊಮ್ಮಾಯಿ ಸರಕಾರ ಒಪ್ಪಿಕೊಂಡಿರಲಿಲ್ಲ
ಆದರೆ ಇವರು ಒಪ್ಪಿಕೊಂಡಿದ್ದಾರೆ.ಅದು ಬಹಳ ಆಗಿರುವದರಿಂದ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ನನಗೂ 72 ವರ್ಷ, ಮೋದಿಯವರಿಗೂ 72 ವರ್ಷ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ
ಮಾಧ್ಯಮಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎಂಬ ಸುದ್ದಿಗಳನ್ನು ಒಪ್ಪಿಕೊಳ್ಳೊಲ್ಲ
ಬೊಮ್ಮಾಯಿ, ಯಡಿಯೂರಪ್ಪ ಸಹ ಹೇಳಿದ್ಧಾರೆ. ಟಿಕೆಟ್ ಬಗ್ಗೆ ಗೊಂದಲ ಬೇಡ.ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೊ ಅದಕ್ಕೆ ಬದ್ದ. ಕ್ಷೇತ್ರದ ಜನ ಮತ್ತೆ ನನ್ನ ಬಯಸಿದ್ದಾರೆ
ಸಂಸದ ಸಂಗಣ್ಣ ಕರಡಿ ಹೇಳಿದರು.