ಸುದ್ದಿಮೂಲ ವಾರ್ತೆ ಬೆಂಗಳೂರು, ಅ.18:
ಸಂಘ ಪರಿವಾರ ಮತ್ತು ಆರ್ಎಸ್ಎಸ್ನವರು ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ್ದರು. ಈಗಲೂ ವಿರೋಧಿಸುತ್ತಿಿದ್ದಾರೆ. ಹೀಗಾಗಿ ಅವರ ಬಗ್ಗೆೆ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದರು.
ಮಾನಸ ಗಂಗೋತ್ರಿಿಯ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವಿಶ್ವ ಜ್ಞಾನಿ ಸಭಾಂಗಣದಲ್ಲಿ ಶನಿವಾರ ಹಮ್ಮಿಿಕೊಂಡಿದ್ದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡದ ಉದ್ಘಾಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ವಿಶ್ವ ಜ್ಞಾನಿ. ಆದ್ದರಿಂದ ವಿಶ್ವಜ್ಞಾನಿ ಅಂಬೇಡ್ಕರ್ ಸಭಾಂಗಣ ಎಂದು ನಿರ್ದಿಷ್ಟವಾಗಿ ಬರೆಯಲು ಸಲಹೆ ನೀಡಿದ್ದೇನೆ. ಸಮಾಜವನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡಿದ್ದ ವಿಶ್ವ ಜ್ಞಾನಿ ಅಂಬೇಡ್ಕರ್. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇರಲಿಲ್ಲ. ಆದ್ದರಿಂದ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಯಿತು ಎಂದು ಅಭಿಪ್ರಾಾಯಪಟ್ಟರು.
10 ಸಂಪುಟಗಳಲ್ಲಿ ಇರುವ ಭಾರತ ಸಂವಿಧಾನವನ್ನು ಕನ್ನಡಕ್ಕೆೆ ತರ್ಜುಮೆ ಮಾಡಿಸಿದ್ದೇನೆ. ಎಲ್ಲರೂ ಅದನ್ನು ಓದಬೇಕು. ಅಂಬೇಡ್ಕರ್ ಅವರು ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನವನ್ನು ಓದಿ ನಮ್ಮ ದೇಶಕ್ಕೆೆ ಅಗತ್ಯವಾದ ಸಂವಿಧಾನವನ್ನು ರಚನೆ ಮಾಡಿ ನೀಡಿದ್ದಾರೆ. ನಮ್ಮದು ಶ್ರೇೇಷ್ಠ ಸಂವಿಧಾನ. ಇದನ್ನು ಉಳಿಸಿ ಬೆಳೆಸುವುದು ನಮ್ಮೆೆಲ್ಲರ ಜವಾಬ್ದಾಾರಿ ಎಂದು ತಿಳಿಸಿದರು.
ಶೂ ಎಸೆದ ಘಟನೆ ತಲೆತಗ್ಗಿಿಸುವ ಸಂಗತಿ
ಸುಪ್ರೀೀಂಕೋರ್ಟ್ ಮುಖ್ಯ ನ್ಯಾಾಯಮೂರ್ತಿಗಳ ಮೇಲೆ ಶೂ ಎಸೆಯುವ ಜಾತಿ ವ್ಯವಸ್ಥೆೆ ಇನ್ನೂ ಇದೆ ಇದು ತಲೆ ತಗ್ಗಿಿಸುವಂತಹ ಸಂಗತಿ. ನಾನು ಅಂಬೇಡ್ಕರ್ ವಾದದಲ್ಲಿ, ಬಸವಣ್ಣನವರ ತತ್ವದಲ್ಲಿ, ಗೌತಮ ಬುದ್ಧ ಅವರ ವಿಚಾರಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ನಾವು ಸ್ವಾಾಭಿಮಾನಿಗಳು ಆಗಬೇಕು. ಗುಲಾಮಗಿರಿಯನ್ನು ತೊಡೆದು ಹಾಕಬೇಕು ಎಂದು ಕರೆ ನೀಡಿದರು.
ವಿಶ್ವ ವಿದ್ಯಾಾನಿಲಯ ಚಿಂತನೆಗಳ ಚಿಲುಮೆ :
ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆೆ ಗುರುತುಗಳು ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ ಮಹದೇವಪ್ಪ ಅವರು, ವಿಶ್ವ ವಿದ್ಯಾಾನಿಲಯ ಚಿಂತನೆಗಳ ಚಿಲುಮೆ. ಕುವೆಂಪು ಅವರು ಮೈಸೂರು ವಿಶ್ವ ವಿದ್ಯಾಾಲಯದ ಕುಲ ಪತಿಗಳು ಆಗಿದ್ದ ಸಂದರ್ಭದಲ್ಲಿ ವಿಶ್ವ ವಿದ್ಯಾಾಲಯಕ್ಕೆೆ ಅನೇಕ ಅಭಿವೃದ್ಧಿಿ ಕೇಂದ್ರಗಳನ್ನು ಸ್ಥಾಾಪನೆ ಮಾಡಿ ಜ್ಞಾನಾರ್ಜನೆಗೆ ಹೆಚ್ಚಿಿನ ಒತ್ತು ನೀಡಿದರು ಎಂದು ಸ್ಮರಿಸಿದರು.
ವಿಶ್ವ ವಿದ್ಯಾಾನಿಲಯಗಳು ಸಮ ಸಮಾಜದ ನಿರ್ಮಾಣ ಮಾಡುವ ಜ್ಞಾನ ಕಣಜಗಳಾಗಿ ಬೆಳೆಯಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿ ಕೊಟ್ಟಿಿದ್ದಾರೆ. ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದ್ದಾರೆ. ವಿಶ್ವ ವಿದ್ಯಾಾಲಯವು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಸೂಚಿಸಿದರು.
ಮೈಸೂರು ವಿವಿ ಕುಲಪತಿ ಎನ್ ಕೆ ಲೋಕನಾಥ್ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರವು ಸಣ್ಣ ಪ್ರಮಾಣದಲ್ಲಿ ಪ್ರಾಾರಂಭವಾಗಿ ನಂತರ ಈ ಹಂತಕ್ಕೆೆ ಬೆಳೆದು ನಿಂತಿದೆ. ಸಿಎಂ ಹಾಗೂ ಸಮಾಜ ಕಲ್ಯಾಾಣ ಸಚಿವರು ಅಪಾರ ಅನುದಾನವನ್ನು ನೀಡಿ ಪ್ರೋೋತ್ಸಾಾಹಿಸಿದ್ದಾರೆ. ಅಂಬೇಡ್ಕರ್ ಚಿಂತನೆಗಳನ್ನು ವಿಶ್ವ ಮಟ್ಟದಲ್ಲಿ ತಿಳಿಸಲು ಕಟಿಬದ್ಧವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಹಿರಿಯ ಪ್ರಾಾಧ್ಯಾಾಪಕ ಡಾ. ಜೆ ಸೋಮಶೇಖರ್ ಮಾತನಾಡಿ, ಮಾಜಿ ಸಂಸದ ದಿ. ವಿ. ಶ್ರೀನಿವಾಸ್ ಪ್ರಸಾದ್ ಅವರು ಈ ಕೇಂದ್ರವನ್ನು ಸ್ಥಾಾಪನೆ ಮಾಡಿದರು. ಅಂಬೇಡ್ಕರ್ ಮ್ಯೂಸಿಯಂ, ಕಂಪ್ಯೂೂಟರ್ ತರಬೇತಿ ಕೇಂದ್ರ, ದಲಿತ ಡಾಕ್ಯುಮೆಂಟ್ ಸೆಂಟರ್ ಸ್ಥಾಾಪಿಸಲಾಗಿದೆ. ಅಭಿವೃದ್ಧಿಿ ಪಡಿಸಲು 15 ಕೋಟಿ ಅನುದಾನ ನೀಡಬೇಕು ಎಂದು ಕೋರಿದರು.
ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಕಡತೂರು ಶಿವಕುಮಾರ್, ಡಿಸಿ ಜಿ ಲಕ್ಷ್ಮೀಕಾಂತ ರೆಡ್ಡಿಿ, ಜಿಪಂ ಸಿಇಓ ಎಸ್.ಯುಕೇಶ್ ಕುಮಾರ್, ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಅವರು ಸೇರಿದಂತೆ ಸಿಂಡಿಕೇಟ್ ಸದಸ್ಯರು ಹಾಗೂ ವಿದ್ಯಾಾರ್ಥಿಗಳು ಇದ್ದರು.