ಸುದ್ದಿಮೂಲ ವಾರ್ತೆ ಬೆಂಗಳೂರು, ಅ.24:
ಸಹಕಾರ ಚಳವಳಿಯನ್ನು ರಾಜ್ಯದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯ ಇದೆ. ಇದಕ್ಕಾಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ 72ನೇ ಸಹಕಾರ ಸಪ್ತಾಾಹ ಆಚರಣೆಯ ಸಭೆಯಲ್ಲಿ ಪಾಲ್ಗೊೊಂಡ ಬಳಿಕ ಅವರು ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು.
ಸಹಕಾರ ಚಳವಳಿಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಸರ್ಕಾರ ಮುಂದಾಗಿದ್ದು ಜವಾಹರಲಾಲ್ ನೆಹರೂ ಅವರ ಜಯಂತಿ ದಿನ ಅಂದರೆ ನ.14ರಂದೇ 72ನೇ ಸಹಕಾರಿ ಸಪ್ತಾಾಹದ ಉದ್ಘಾಾಟನೆ ಕೂಡ ನಡೆಯಲಿದೆ. ಅರಮನೆ ಮೈದಾನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಸಪ್ತಾಾಹ ನಡೆಯಲಿದ್ದು ಇದರ ಉದ್ಘಾಾಟನೆ ನಾನು ನೆರವೇರಿಸಲಿದ್ದೇನೆ. ಮಂಗಳೂರು, ರಾಯಚೂರು, ಹಾವೇರಿ, ಹೊಸಪೇಟೆ, ಕೊಪ್ಪಳದಲ್ಲಿ ಸಪ್ತಾಾಹ ನಡೆಯಲಿದ್ದು ಸಮಾರೋಪ ಸಮಾರಂಭ ನವೆಂಬರ್ 20 ರಂದು ಚಾಮರಾಜನಗರದಲ್ಲಿ ನಡೆಯಲಿದೆ. ನಾನು ಸಪ್ತಾಾಹದ ಉದ್ಘಾಾಟನೆಯನ್ನೂ ನೆರವೇರಿಸಿ, ಸಮಾರೋಪದಲ್ಲೂ ಭಾಗವಹಿಸುತ್ತೇನೆ ಎಂದರು.
ರಾಜ್ಯದ ಎಲ್ಲಾ ಸಹಕಾರಿ ಧುರೀಣರು ನನಗೇ ಜವಾಬ್ದಾಾರಿ ಕೊಟ್ಟಿಿದ್ದು ನಾನೇ ಸಹಕಾರ ರತ್ನ ಪ್ರಶಸ್ತಿಿಗೆ ಹೆಸರು ಸೂಚಿಸಲು ಕೋರಿದ್ದಾರೆ. ಸಹಕಾರ ಮಹಾ ಮಂಡಳದ ಅಧ್ಯಕ್ಷರ ಜೊತೆ ಚರ್ಚಿಸಿ ಪ್ರಶಸ್ತಿಿಗೆ ಉತ್ತಮ ಸಹಕಾರಿಯನ್ನು ಆಯ್ಕೆೆ ಮಾಡಲಾಗುವುದು ಎಂದರು.
ಹಾಲಿನ ಡೈರಿಗಳನ್ನು ಹಾಲಿನ ಒಕ್ಕೂಟಗಳ ಅಧೀನದಲ್ಲಿ ಮೊದಲ ಬಾರಿಗೆ ತಂದಿದ್ದು ನಾನೇ. ಒಕ್ಕೂಟದ ಅಧೀನಕ್ಕೆೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟೆೆ ಎಂದು ಮುಖ್ಯಮಂತ್ರಿಿಗಳು ಸ್ಮರಿಸಿದರು.
ಸಹಕಾರ ರಾಜ್ಯದ ವ್ಯಾಾಪ್ತಿಿಗೆ ಬರುವ ವಿಚಾರ. ಕೇಂದ್ರದ ವ್ಯಾಾಪ್ತಿಿಗೆ ಬರುವ ವಿಚಾರ ಅಲ್ಲ. ರಾಜ್ಯದ ನೇಕಾರ, ಬಡಗಿ, ಮೀನುಗಾರರ ಸೊಸೈಟಿ ಗಳಂಥ ವೃತ್ತಿಿಮೂಲ ಸಂಘಗಳನ್ನು ಸಬಲಗೊಳಿಸಬೇಕು. ಸಹಕಾರ ಸಪ್ತಾಾಹದ ಘೋಷವಾಕ್ಯಗಳನ್ನು ಕೇಂದ್ರ ಸರ್ಕಾರದ ಬದಲಿಗೆ ಆಯಾ ರಾಜ್ಯಗಳೇ ಘೋಷಿಸಬೇಕು ಎಂದು ಮುಖ್ಯಮಂತ್ರಿಿಗಳು ಅಭಿಪ್ರಾಾಯಪಟ್ಟರು.
ಸಚಿವರಾದ ಎಚ್ ಕೆ ಪಾಟೀಲ್, ಮಾಜಿ ಸಚಿವರಾದ ಕೆ ಎನ್ ರಾಜಣ್ಣ, ಎಸ್.ಟಿ.ಸೋಮಶೇಖರ್, ಶಾಸಕರಾದ ವೆಂಕಟೇಶ್, ರಾಘವೇಂದ್ರ ಹಿಟ್ನಾಾಳ್, ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಜಿ. ಟಿ. ದೇವೇಗೌಡ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಕಾರ ಮಹಾ ಮಂಡಲಗಳ ಪದಾಧಿಕಾರಿಗಳು ಉಪಸ್ಥಿಿತರಿದ್ದರು.
ಬಾಕ್ಸ್
ಜಿಲ್ಲೆಗೆ ಒಂದರಂತೆ ಪ್ರಶಸ್ತಿಿ
ಕರ್ನಾಟಕ ಸಹಕಾರಿ ರತ್ನ ಪ್ರಶಸ್ತಿಿಯನ್ನು ರಾಜ್ಯೋೋತ್ಸವ ಪ್ರಶಸ್ತಿಿ ಮಾದರಿಯಲ್ಲಿ ನೀಡಿದರೆ ಒಳ್ಳೆೆಯದಲ್ಲವೇ. ಮೊದಲೆಲ್ಲಾ ನೂರಾರು ಪ್ರಶಸ್ತಿಿ ಕೊಡಲಾಗುತ್ತಿಿತ್ತು. ಈಗ ಎಷ್ಟನೇ ವರ್ಷದ ಆಚರಣೆಯೋ ಅಷ್ಟೇ ಪ್ರಶಸ್ತಿಿಗಳನ್ನು ನೀಡಲಾಗುತ್ತಿಿದೆ. ಅಥವಾ ಜಿಲ್ಲೆಗೆ ಒಂದರಂತೆ ಪ್ರಶಸ್ತಿಿ ನೀಡಿದರೆ ಸೂಕ್ತ. ಬೆಂಗಳೂರಿಗೆ ಅಗತ್ಯವಿದ್ದರೆ ಎರಡರಿಂದ ಐದು ಪ್ರಶಸ್ತಿಿಗಳು ಇರಲಿ . ಸಮಿತಿಯ ತೀರ್ಮಾನದಂತೆ ನೀಡಿ ಎನ್ನುವ ಸಲಹೆಯನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯ ನೀಡಿದರು .
ಬಾಕ್ಸ್
ಸಹಕಾರಿ ಬ್ಯಾಾಂಕ್ ಮ್ಯಾಾನೇಜರ್ ಸೇವಾವಧಿ ವಿಸ್ತರಣೆ
ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಪ್ರತಿದಿನ ಉತ್ಪಾಾದನೆ ಆಗುತ್ತಿಿರುವುದು ಹೆಮ್ಮೆೆಯ ವಿಷಯ. ಸಹಕಾರ ತತ್ವದಡಿ ಬರುವ ಎಲ್ಲಾ ಸಂಘ ಸಂಸ್ಥೆೆಗಳನ್ನು ಸಬಲೀಕರಣ ಗೊಳಿಸಬೇಕು.
ರೈತರ ಸಾಲಮನ್ನಾಾ ವಿಷಯಕ್ಕೆೆ ಸಂಬಂಧಿಸಿದಂತೆ ರಾಜ್ಯದ ಬಹುತೇಕ ರೈತರ ಸಾಲಮನ್ನಾಾ ಮಾಡಲಾಗಿದೆ. ಕಿಂಗ್ ವ್ಯವಸ್ಥೆೆ ನಿಯಂತ್ರಣ ಕಾಯ್ದೆೆ ಪ್ರಕಾರ ಸಹಕಾರಿ ಬ್ಯಾಾಂಕ್ ಗಳ ಮ್ಯಾಾನೇಜರ್ಗಳ ಸೇವಾವಧಿ ಯನ್ನು ಮರು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆೆ ಪತ್ರ ಬರೆಯುವಂತೆ ಸಭೆಯಲ್ಲಿ ಮುಖ್ಯಮಂತ್ರಿಿಗಳನ್ನು ಕೋರಲಾಯಿತು.

