ಸುದ್ದಿಮೂಲ ವಾರ್ತೆ ಬೆಂಗಳೂರು, ನ.07:
ಕಬ್ಬು ಖರೀದಿ ದರ ಹೆಚ್ಚಳ ಮಾಡುವಂತೆ ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿಿದ್ದ ರೈತರಿಗೆ ಕೊನೆಗೂ ಜಯವಾಗಿದ್ದು, ಪ್ರತಿ ಟನ್ ಕಬ್ಬಿಿಗೆ 3,300 ರೂ. ನಿಗದಿ ಮಾಡಲಾಗಿದೆ. ಈ ಹಿನ್ನೆೆಲೆಯಲ್ಲಿ ಬೆಳಗಾವಿಯಲ್ಲಿ ರೈತರು ಸಂಭ್ರಮಾಚರಣೆ ನಡೆಸಿದ್ದಾರೆ.
ಪ್ರಸಕ್ತ ಸಾಲಿನ ಕಬ್ಬು ಕಟಾವು ಇನ್ನೂ ಆರಂಭಿಸದ ರೈತರು ಪ್ರತಿ ಟನ್ಗೆ ಕಬ್ಬಿಿಗೆ 3500 ರೂ. ದರ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿಯ ಗುರ್ಲಾಪುರ ಸೇರಿ ವಿಜಯಪುರ, ಬಾಗಲಕೋಟೆ, ಕಲಬುರ್ಗಿ ಮುಂತಾದ ಕಡೆಗಳಲ್ಲಿ ನಿರಂತರ ಪ್ರತಿಭಟನೆ ಹಮ್ಮಿಿಕೊಂಡು ಸರ್ಕಾರಕ್ಕೆೆ ಗಡುವು ವಿಧಿಸಿದ್ದರು.
ಈ ಹಿನ್ನೆೆಲೆಯಲ್ಲಿ ನಿನ್ನೆೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿಯವರಿಗೆ ಎ್ಆರ್ಪಿ ದರ ಪರಿಷ್ಕರಣೆ ಮಾಡುವಂತೆ ಪತ್ರ ಬರೆಯಲು ನಿರ್ಧಾರ ತೆಗೆದುಕೊಂಡಿದ್ದ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಇಂದು ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಗಿನಿಂದ ಸಂಜೆವರೆಗೂ ನಿರಂತರ ಸಭೆಗಳನ್ನು ನಡೆಸಿದರು. ಬೆಳಿಗ್ಗೆೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಜೊತೆ ಸಭೆ ನಡೆಸಿದರು. ಬಳಿಕ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತ ಮುಖಂಡರ ಜೊತೆ ಸಿಎಂ ಸಿದ್ದರಾಮಯ್ಯ ನಿರಂತರ 7 ತಾಸು ಸರಣಿ ಸಭೆಗಳನ್ನು ನಡೆಸಿದರು. ಕಾರ್ಖಾನೆಗಳ ಮಾಲೀಕರು ಮತ್ತು ರೈತರ ಮನವೊಲಿಸುವಲ್ಲಿ ಕೊನೆಗೂ ಯಶಸ್ಸು ಕಂಡರು.
100 ರೂ. ಹೆಚ್ಚುವರಿ:
ಸಭೆಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ರೈತರು ಅ.30ರಿಂದ ಕೇಂದ್ರ ಸರ್ಕಾರದ ಎ್ಆರ್ಪಿ ದರ ವಿರೋಧಿಸಿ ಇನ್ನೂ ಹೆಚ್ಚಳ ಮಾಡಬೇಕು ಎಂದು ಒತ್ತಾಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಇಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತ ಮುಖಂಡರ ಜೊತೆ ಸಭೆಗಳನ್ನು ನಡೆಸಿ ಕೆಲವು ಒಮ್ಮತದ ತೀರ್ಮಾನಕ್ಕೆೆ ಬರಲಾಗಿದೆ. 10.25 ಇಳುವರಿ ಇರುವ ಕಬ್ಬಿಿಗೆ 3100 ರೂ. ಮತ್ತು 11.25 ಇಳುವರಿ ಕಬ್ಬಿಿಗೆ 3200 ರೂ. ಕೊಡಲು ದರ ನಿದಗಿಯಾಗಿತ್ತು. ಇದರ ಜೊತೆಗೆ ಹೆಚ್ಚುವರಿಯಾಗಿ ಸರ್ಕಾರದಿಂದ 50 ರೂ. ಮತ್ತು ಕಾರ್ಖಾನೆಗಳಿಂದ 50 ರೂ. ನೀಡಲು ತೀರ್ಮಾನಿಸಲಾಗಿದೆ. ಇದು ಎಲ್ಲಾ ಇಳುವರಿಗೂ 100 ರೂ. ಹೆಚ್ಚುವರಿ ದೊರೆಯುತ್ತದೆ ಎಂದು ಹೇಳಿದರು.
ಇಂದು ನಡೆದ ಸಭೆಯಲ್ಲಿ ಕಟಾವು ಮತ್ತು ಸಾಗಾಟ ವೆಚ್ಚಕ್ಕೆೆ ಹೊರತುಪಡಿಸಿ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಬೆಳಗಾವಿ ಜಿಲ್ಲಾಧಿಕಾರಿ ಅವರು ಅಂತಿಮಗೊಳಿಸಿದ್ದ ದರಕ್ಕಿಿಂತ ರೂ.100 ಹೆಚ್ಚಾಾಗಿದೆ. ಇದಕ್ಕೆೆ ಬಹುತೇಕ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲಿಕರು ಒಪ್ಪಿಿಗೆ ಸೂಚಿಸಿದ್ದಾರೆ. ರಿಕವರಿ ದರಕ್ಕೆೆ ಅನುಗುಣವಾಗಿ ಜಿಲ್ಲೆಯಿಂದ ಜಿಲ್ಲೆಗೆ ಪ್ರತ್ಯೇಕ ದರ ನಿಗದಿಪಡಿಸಲಾಗುವುದು. ಇದಕ್ಕೆೆ ರೈತರು ಒಪ್ಪಿಿಗೆ ಸೂಚಿಸುವ ವಿಶ್ವಾಾಸವಿದೆ ಎಂದು ಹೇಳಿದರು.
ಕಳೆದ ಬಾರಿ 5.6 ಕೋಟಿ ಮೆಟ್ರಿಿಕ್ ಟನ್ ಕಬ್ಬು ಅರೆಯುವಿಕೆ ಆಗಿತ್ತು. ಈ ಬಾರಿ 6 ಕೋಟಿ ಮೆಟ್ರಿಿಕ್ ಟನ್ಗೂ ಹೆಚ್ಚು ಕಬ್ಬು ಅರೆಯುವಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ಬೆಲೆ ಹೆಚ್ಚಳದ ಜೊತೆಗೆ ತೂಕದಲ್ಲಿ ಮೋಸ, ರಿಕವರಿ ಕಡಿಮೆ ತೋರಿಸುವುದು ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಕುರಿತು ಕಬ್ಬು ಬೆಳೆಗಾರರಿಗೆ ಇರುವ ಎಲ್ಲಾ ಅಹವಾಲುಗಳನ್ನು ಮತ್ತೊೊಂದು ಸಭೆ ಕರೆದು ಬಗೆಹರಿಸಲಾಗುವುದು ಎಂದು ರೈತ ಮುಖಂಡರಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ಸತತ 7 ಗಂಟೆ ಕಾಲ ಸಭೆ
ಕ್ಯಾಾಬಿನೆಟ್ ತೀರ್ಮಾನದಂತೆ ಇಂದು ಬೆಳಗ್ಗೆೆಯಿಂದ ಸತತ 7 ಗಂಟೆ ಕಾಲ ಸಭೆ ನಡೆಸಿದ್ದೇವೆ. ಈ ವೇಳೆ ಕಾರ್ಖಾನೆ ಮಾಲೀಕರು ಮತ್ತು ರೈತರು ತಮ್ಮ ತಮ್ಮ ಸಮಸ್ಯೆೆಗಳನ್ನು ಹೇಳಿಕೊಂಡಿದ್ದಾರೆ. ಇಬ್ಬರೂ ಕೇಂದ್ರ ಸರ್ಕಾರದ ನೀತಿಗಳಿಂದ ಆಗಿರುವ ನಷ್ಟ ಮತ್ತು ಸಮಸ್ಯೆೆಗಳನ್ನೂ ಹೇಳಿಕೊಂಡಿದ್ದಾರೆ. ಕೇಂದ್ರದಿಂದ ಆಗುತ್ತಿಿರುವ ತೊಂದರೆ ಬಗ್ಗೆೆ ಚರ್ಚಿಸಲು ಕೇಂದ್ರಕ್ಕೆೆ ನಿಯೋಗ ಹೋಗಲು ತೀರ್ಮಾನಿಸಿದ್ದೇವೆ. ಇದಕ್ಕೆೆ ಮಾಲೀಕರುಗಳೂ ಒಪ್ಪಿಿಕೊಂಡಿದ್ದಾರೆ ಎಂದರು.
ಸಕ್ಕರೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿಿ) ಹೆಚ್ಚಳ, ಎಥೆನಾಲ್ ಹಂಚಿಕೆ ಹೆಚ್ಚಳ, ಸಕ್ಕರೆ ರ್ತು ಮಿತಿ ಹೆಚ್ಚಿಿಸುವುದು ಸೇರಿದಂತೆ ಕೇಂದ್ರ ಸರ್ಕಾರವನ್ನು ಒತ್ತಾಾಯಿಸಲು ಕೇಂದ್ರಕ್ಕೆೆ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಕರೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದ್ದೇವೆ. ಇದಕ್ಕೆೆ ಎಲ್ಲರೂ ಒಪ್ಪಿಿಗೆ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿಿರುವ ಸಮಸ್ಯೆೆಗಳು ಅದೇ ರೀತಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಎದುರಿಸುತ್ತಿಿರುವ ಸಮಸ್ಯೆೆ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಮುಖ್ಯಮಂತ್ರಿಿಗಳ ಸಭೆಯಲ್ಲಿ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಕೆ ಪಾಟೀಲ, ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ, ಸತೀಶ್ ಜಾರಕಿಹೊಳಿ, ಆರ್.ಬಿ. ತಿಮ್ಮಾಾಪುರ, ಪ್ರಿಿಯಾಂಕ್ ಖರ್ಗೆ, ಮುಖ್ಯಮಂತ್ರಿಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ರೈತ ಮುಖಂಡರುಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿಿತರಿದ್ದರು.
ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಸಿಎಂ ಗರಂ
ಸಕ್ಕರೆ ಕಾರ್ಖಾನೆ ಮಾಲೀಕರು 50 ರೂ. ಹೆಚ್ಚಳ ಮಾಡಿ ಎಂದು ಸೂಚನೆ. ಇದಕ್ಕೆೆ ಸಕ್ಕರೆ ಕಾರ್ಖಾನೆ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆೆ ಗರಂ ಆದ ಸಿದ್ದರಾಮಯ್ಯ ಸರ್ಕಾರ ಹೆಚ್ಚುವರಿಯಾಗಿ 50 ರೂ. ಪಾವತಿಸುತ್ತದೆ, ನೀವೂ 50 ರೂಪಾಯಿ ಪಾವತಿಸಿ ಎಂದು ಹೇಳುತ್ತಿಿದ್ದೇನೆ. ಹಾಗಾದರೆ ನಿಮಗೆ ಸರ್ಕಾರದ ಬೆಂಬಲ ಬೇಕಿಲ್ಲವೇ ಎಂದು ಸಿದ್ದರಾಮಯ್ಯ ಖಾರವಾಗಿ ಕಾರ್ಖಾನೆಗಳ ಮಾಲೀಕರನ್ನು ಪ್ರಶ್ನಿಿಸಿದ್ದಾರೆ. ಅಂತಿಮವಾಗಿ ಕಾರ್ಖಾನೆಗಳ ಮಾಲೀಕರು ಹೆಚ್ಚುವರಿಯಾಗಿ 50 ರೂ. ನೀಡಲು ಒಪ್ಪಿಿಗೆ ಸೂಚಿಸಿದ್ದಾರೆ.
ಈ ಮಧ್ಯೆೆ ನಿರಾಣಿ ಶುಗರ್ಸ್ ಮಾಲೀಕರಾದ ಮುರುಗೇಶ್ ನಿರಾಣಿ ಅವರು ಬೇಸರ ವ್ಯಕ್ತಪಡಿಸಿ ಸರ್ಕಾರ ಹೇಳಿದಂತೆ ಹೆಚ್ಚುವರಿ ಕೊಡುವುದಕ್ಕೆೆ ಕಷ್ಟವಾಗುತ್ತದೆ. ಬೇಕಾದರೆ ಸರ್ಕಾರವೇ ಸಕ್ಕರೆ ಕಾರ್ಖಾನೆಗಳನ್ನು ವಹಿಸಿಕೊಳ್ಳುವಂತೆ ಕೋರಿದರು ಎನ್ನಲಾಗಿದೆ.
ಕಬ್ಬು ಪ್ರತಿ ಟನ್ಗೆ 3,300 ರೂ. ನಿಗದಿ ಮಾಡಿದೆ. ಇದರಿಂದ ರೈತರಿಗೆ ತಾತ್ಕಾಾಲಿಕವಾಗಿ ಸಂತೋಷವಾಗಿದೆ. ಆದರೆ ಈ ಬಗ್ಗೆೆ ಸರ್ಕಾರ ಅಧಿಕೃತವಾಗಿ ಆದೇಶ ನೀಡಬೇಕು. ಶನಿವಾರವೂ ಗುರ್ಲಾಪುರದಲ್ಲಿ ಲಕ್ಷಾಂತರ ಜನ ಸೇರುತ್ತಾಾರೆ. ತೂಕದಲ್ಲಿ ಮೋಸ, ಸಕಾಲದಲ್ಲಿ ಪಾವತಿಯಂತಹ ವಿಷಯಗಳನ್ನೂ ಸಹ ಸರ್ಕಾರ ಗಮನವಹಿಸಿ ಪರಿಹರಿಸಬೇಕು.
-ಚೂನಪ್ಪ ಪೂಜಾರಿ, ರೈತ ಮುಖಂಡ

