ಸುದ್ದಿಮೂಲ ವಾರ್ತೆ ಬೆಂಗಳೂರು, ನ.18:
ಕರ್ನಾಟಕ ಕೃತಕ ಬುದ್ಧಿಿಮತ್ತೆೆ, ಕ್ವಾಾಂಟಂ, ಜೈವಿಕ ತಂತ್ರಜ್ಞಾನ, ಬಾಹ್ಯಾಾಕಾಶ, ಪರಿಸರಸ್ನೇಹಿ ತಂತ್ರಜ್ಞಾನ (ಗ್ರೀೀನ್ ಟೆಕ್) ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿಿದೆ. ಎಲ್ಲ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಿಮತ್ತೆೆ ಅಳವಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ನುಡಿದರು.
ಮದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ಆವರಣದಲ್ಲಿ 28ನೇ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆೆ ಚಾಲನೆ ನೀಡಿ ಮಾತನಾಡಿದರು.
ಈ ಸಮಾವೇಶದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 9 ಬಗೆಯ ತಂತ್ರಜ್ಞಾನ ಮತ್ತು ಆಧುನಿಕ ಉದ್ಯಮಗಳನ್ನು ಒಂದೆಡೆ ತರಲಾಗಿದೆ. ಸದ್ಯ ವಿಶ್ವದಲ್ಲಿ ಈತ ಎರಡನೇ ಹಂತದ ಡಿಜಿಟಲ್ ಕ್ರಾಾಂತಿ ಚಾಲ್ತಿಿಯಲ್ಲಿದೆ. ರಾಜ್ಯವು ಇದಕ್ಕಿಿಂತ ಮುಂಚೂಣಿಯಲ್ಲಿದೆ. ಅಂದರೆ ಕೃತಕ ಬುದ್ಧಿಿಮತ್ತೆೆ, ಕ್ವಾಾಂಟಂ, ಜೈವಿಕ ತಂತ್ರಜ್ಞಾನ, ಬಾಹ್ಯಾಾಕಾಶ, ಪರಿಸರಸ್ನೇಹಿ ತಂತ್ರಜ್ಞಾನ (ಗ್ರೀೀನ್ ಟೆಕ್) ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿಿದೆ. ಬೆಂಗಳೂರು ಈಗ ಜಾಗತಿಕ ಮಟ್ಟದ ನಾವೀನ್ಯತೆ, ಪ್ರತಿಭೆ, ಸಂಶೋಧನೆ ಮತ್ತು ತಂತ್ರಜ್ಞಾನ ನಾಯಕತ್ವದ ಕೇಂದ್ರವಾಗಿದೆ ಎಂದರು.
ರಾಜ್ಯದಲ್ಲಿ ಶೇ.4.3ರಷ್ಟು ನಿರುದ್ಯೋೋಗ:
ರಾಜ್ಯದಲ್ಲಿ ನಿರುದ್ಯೋೋಗ ಕೇವಲ ಶೇಕಡ 4.3ರಷ್ಟು ಮಾತ್ರವಿದೆ. ರಚನಾತ್ಮಕ ನೀತಿಗಳ ಪರಿಣಾಮವಾಗಿ ರಾಜ್ಯ ರಾಜಧಾನಿಯು ಬಾಹ್ಯಾಾಕಾಶ, ರಕ್ಷಣೆ, ಆ್ಯನಿಮೇಷನ್ ಮತ್ತು ಗೇಮಿಂಗ್ ಹಾಗೂ ಡೀಪ್-ಟೆಕ್ ಉದ್ಯಮಗಳ ತೊಟ್ಟಿಿಲಾಗಿದೆ. ಹೊಸ ಐಟಿ ನೀತಿಯಿಂದಾಗಿ ರಾಜ್ಯವು ನಾವೀನ್ಯತೆ ಮತ್ತು ಡೀಪ್-ಟೆಕ್ ವಲಯಗಳಲ್ಲಿ ಕೂಡ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ನೀಡಿದರು.
ಸಿಎಂ ಸಿದ್ದರಾಮಯ್ಯ ಇದೇ ವೇಳೆ ಕಡಿಮೆ ಬೆಲೆಯ ಕಂಪ್ಯೂೂಟರ್ ಕಿಯೊ ಬಿಡುಗಡೆ ಮಾಡಿದರು.
ಉಪ ಮುಖ್ಯಮಂತ್ರಿಿ ಡಿ. ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರು ನಗರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಿಗೆ 1.45 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿಿದೆ. ಉದ್ಯಮಿಗಳು, ಹೂಡಿಕೆದಾರರು ತಮಗೆ ಏನಾಗಬೇಕು ಎನ್ನುವುದನ್ನು ಗಮನಕ್ಕೆೆ ತಂದರೆ, ತಕ್ಷಣವೇ ಸ್ಪಂದಿಸಲಾಗುವುದು’ ಎಂದು ಆಶ್ವಾಾಸನೆ ನೀಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಮಾತನಾಡಿ, ಬೆಂಗಳೂರು ತಂತ್ರಜ್ಞಾನ ಶೃಂಗ ಸಮ್ಮೇಳನದಲ್ಲಿ ಕ್ವಾಾಂಟಮ್ ಟೆಕ್ನಾಾಲಜಿ ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ. ದುಂಡು ಮೇಜಿನ ಸಭೆಯಲ್ಲಿ ಕ್ವಾಾಂಟಮ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಕಂಪನಿಗಳ ಪ್ರತಿನಿಧಿಗಳು, ಐಟಿ , ಬಿಟಿ ಸಚಿವ ಪ್ರಿಿಯಾಂಕ ಖರ್ಗೆ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್, ಐಐಎಸ್ಸ್ಸಿಿ, ಎಡಬ್ಲ್ಯುಎಸ್ , ಸ್ವಿಿಸ್ನೆೆಕ್ಸ್, ಐಪಿಐಎಐ ಸೇರಿದತೆ ಪ್ರಮುಖ ತಜ್ಞರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಕ್ವಾಾಂಟಮ್ ಸಿಟಿ ಕರ್ನಾಟಕ ರಾಜ್ಯದಲ್ಲಿ ಕ್ವಾಾಂಟಮ್ ತಂತ್ರಜ್ಞಾನದ ರೋಡ್ಮ್ಯಾಾಪ್ ಕುರಿತು ಚರ್ಚಿಸಲಿದ್ದಾರೆ. ಸಂಶೋಧನಾ ಕ್ಲಸ್ಟರ್ಗಳು, ಸ್ಟಾಾರ್ಟ್ಅಪ್ಗಳ ವೇಗವರ್ಧನೆ, ತಯಾರಿಕಾ ಸಾಮರ್ಥ್ಯ ಹಾಗೂ ನೈಪುಣ್ಯ ಅಭಿವೃದ್ದಿ ಪ್ರಮುಖ ವಿಷಯಗಳಾಗಿರಲಿವೆ ಎಂದರು.
ತಂತ್ರಜ್ಞಾನ ಮೇಳದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಐಟಿ-ಬಿಟಿ ಸಚಿವ ಪ್ರಿಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಸರಕಾರದ ವಿವಿಧ ವಿಷನ್ ಗ್ರೂಪ್ ಮುಖ್ಯಸ್ಥರು ಮತ್ತು ಉದ್ಯಮಿಗಳಾದ ಕ್ರಿಿಸ್ ಗೋಪಾಲಕೃಷ್ಣ, ಕಿರಣ್ ಮಜುಂದಾರ್ ಷಾ, ಪ್ರಶಾಂತ್ ಪ್ರಕಾಶ್, ಆಸ್ಟ್ರೇಲಿಯಾದ ಮೆಲ್ಬೋೋರ್ನ್ ನಗರದ ಮೇಯರ್ ನಿಕೊಲಸ್ ರೀಸ್, ಪೋಲೆಂಡ್ ಸರಕಾರದ ಡಿಜಿಟಲೀಕರಣ ಖಾತೆಯ ಸಹಾಯಕ ಸಚಿವ ರಾಲ್ ರೋಸಿನ್ಸ್ಕಿಿ, ಜರ್ಮನಿಯ ಬವೇರಿಯಾ ಪ್ರಾಾಂತ್ಯದ ಸಂಸತ್ ಮುಖ್ಯಸ್ಥೆೆ ಐಲ್ ಏಗ್ನರ್, ನಾರ್ವೆಯ ಸಚಿವ ಜಾನ್ ಕ್ರಿಿಶ್ಚಿಿಯನ್ ವೆಸ್ಟರ್ ಇದ್ದರು.
——
ಎಲ್ಲರ ಕೈಗೆಟುಕುವ ಕಂಪ್ಯೂೂಟರ್
ಎಲೆಕ್ಟ್ರಾಾನಿಕ್ಸ್, ಐಟಿ ಮತ್ತು ಬಿಟಿ ಸಚಿವ ಪ್ರಿಿಯಾಂಕ್ ಖರ್ಗೆ ಮಾತನಾಡಿ, ಸಮಾವೇಶದಲ್ಲಿ ಬಿಡುಗಡೆ ಮಾಡಿರುವ ಕಿಯೋನಿಕ್ಸ್ ಅಭಿವೃದ್ಧಿಿಪಡಿಸಿರುವ ಕಂಪ್ಯೂೂಟರ್ ಅಗ್ಗವಾಗಿದೆ. ಇದನ್ನು ವಿದ್ಯಾಾರ್ಥಿಗಳು, ನವೋದ್ಯಮಿಗಳು, ಉದ್ಯಮ ಮುಖಂಡರು ಸುಲಭವಾಗಿ ಬಳಸಬಹುದು. ಸಾಮೂಹಿಕ ಬಳಕೆಗೆ ಕೈಗೆಟುಕುವ ಕೃತಕ ಜಾಣ್ಮೆೆಯ ಕಾಂಪ್ಯಾಾಕ್ಟ್ ಕಂಪ್ಯೂೂಟರ್ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ ಎಂದರು.
ಕಂಪ್ಯೂೂಟರ್ನಲ್ಲಿ ಅಳವಡಿಕೆಯಾಗಿರುವ ಕೆಇಒ ತಂತ್ರಾಾಂಶ ಡಿಜಿಟಲ್ ಅಂತರ ಕಡಿಮೆ ಮಾಡುವುದಕ್ಕೆೆ ಕರ್ನಾಟಕದ ಪ್ರಾಾಯೋಗಿಕ ಉತ್ತರವಾಗಿದೆ. ಇದು ಐಷಾರಾಮಿ ಸಾಧನವಲ್ಲ; ಇದು ಎಲ್ಲರಿಗೂ ಲಭ್ಯವಾಗುವ ಅಗ್ಗದ ಸಾಧನವಾಗಿದೆ. ಪ್ರತಿಯೊಬ್ಬ ವಿದ್ಯಾಾರ್ಥಿ, ಸಣ್ಣ ವ್ಯಾಾಪಾರಿ ಮತ್ತು ಪ್ರತಿ ಮನೆಯು ಡಿಜಿಟಲ್ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಎಂದರು.
——
ಬಾಕ್ಸ್
ಮೂರು ದಿನಗಳ ಸಮಾವೇಶ
ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜನೆಗೊಂಡಿರುವ ತಂತ್ರಜ್ಞಾನ ಸಮಾವೇಶ ಮೂರು ದಿನಗಳ ಕಾಲ ನಡೆಯಲಿದೆ. ಈ ಮಹತ್ವದ ಸಮಾವೇಶವು ಗುರುವಾರದವರೆಗೆ ನಡೆಯಲಿದೆ.
100ಕ್ಕೂ ಹೆಚ್ಚು ಸಭೆಗಳು, 500ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, 1000ಕ್ಕೂ ಹೆಚ್ಚು ಪ್ರದರ್ಶಕರು, 15,000ಕ್ಕೂ ಹೆಚ್ಚು ಮಂದಿ, 60ಕ್ಕೂ ಹೆಚ್ಚು ದೇಶಗಳ 50,000ಕ್ಕೂ ಹೆಚ್ಚು ವಾಣಿಜ್ಯ ಸಂದರ್ಶಕರರು ಶೃಂಗ ಸಭೆಯಲ್ಲಿ ಪಾಲ್ಗೊೊಳ್ಳಲಿದ್ದಾರೆ. ಶೃಂಗಮೇಳದಲ್ಲಿ ಮೂರು ಹೊಸ ನೀತಿಗಳಾದ ಐಟಿ ನೀತಿ, ಸ್ಟಾಾರ್ಟ್ಅಪ್ ನೀತಿ ಮತ್ತು ಬಾಹ್ಯಾಾಕಾಶ ತಂತ್ರಜ್ಞಾನ ನೀತಿಗಳ ಘೋಷಣೆಯಾಗಲಿದೆ.

