ಸುದ್ದಿಮೂಲ ವಾರ್ತೆ ಬೆಂಗಳೂರು, ಅ.15:
ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಸಚಿವ ಪ್ರಿಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದ ಹಿನ್ನೆೆಲೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಬೆದರಿಕೆ ಹಾಕುತ್ತಿಿದ್ದಾರೆ ಎಂದು ಪ್ರಿಿಯಾಂಕ್ ಖರ್ಗೆ ಆಕ್ರೋೋಶ ವ್ಯಕ್ತಪಡಿಸಿದರು.
ಉತ್ತರ ಭಾರತದಿಂದ ಹಲವು ವ್ಯಕ್ತಿಿಗಳು ಕರೆ ಮಾಡುತ್ತಿಿದ್ದಾರೆ. ಕರೆ ಮಾಡಿದ ವ್ಯಕ್ತಿಿಗಳ ಮೊಬೈಲ್ ನಂಬರ್ ಕಾಣಿಸುತ್ತಿಿಲ್ಲ. ಬದಲಿಗೆ ಅನ್ನೌನ್ ಎಂದು ಬರುತ್ತಿಿವೆ. ಹಿಂದಿ ಸೇರಿದಂತೆ ಉತ್ತರ ಭಾರತದ ಭಾಷೆಯಲ್ಲಿ ಕೆಟ್ಟದಾಗಿ ನಿಂದಿಸುತ್ತಿಿದ್ದಾರೆ ಎಂದು ವ್ಯಕ್ತಿಿಯೊಬ್ಬ ನಿಂದಿಸಿದ ಆಡಿಯೋವನ್ನು ಅವರು ಬಿಡುಗಡೆ ಮಾಡಿದರು.
ಕರೆ ಮಾಡಿ ಹಿಂದಿಯಲ್ಲಿ ನಿಂದಿಸುತ್ತಿಿದ್ದ ವ್ಯಕ್ತಿಿಗೆ ನಾವು ನಿಮಗೆ ಆರ್ಎಸ್ಎಸ್ ಶಾಖೆಯಲ್ಲಿ ಇನ್ನೊೊಬ್ಬರನ್ನು ನಿಂದಿಸುವುದನ್ನೇ ಹೇಳಿಕೊಡುತ್ತಾಾರೆಯೇ ಎಂದು ಪ್ರಶ್ನಿಿಸಿದರೆ. ಆದರೆ ಆತ ಅದಕ್ಕೆೆ ಉತ್ತರ ನೀಡದೆ ಕೆಟ್ಟದಾಗಿ ನಿಂದಿಸುತ್ತಾಾ ಹೋದ ಎಂದು ಪ್ರಿಿಯಾಂಕ್ ಖರ್ಗೆ ಮಾಡಹಿತಿ ನೀಡಿದರು.
ಬಿಜೆಪಿ ನಾಯಕರಿಗೆ ಟ್ಯಾಾಗ್:
ಸಚಿವ ಪ್ರಿಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ ಕರೆಗಳು ಹಾಗೂ ಸಂದೇಶಗಳನ್ನು ತಂತ್ರಜ್ಞಾನ ಬಳಸಿ ಹೆಕ್ಕಿಿರುವ ಅವರು ಬಿಜೆಪಿ ನಾಯಕರಾದ ಬಿ.ವೈ.ವಿಜಯೇಂದ್ರ, ರ್ಆ.ಅಶೋಕ್, ಸಿ.ಟಿ.ರವಿ, ಪ್ರತಾಪ್ ಸಿಂಹ ಅವರಿಗೆ ಕಳುಹಿಸಿದ್ದಾರೆ.
ಸಚಿವ ಪ್ರಿಿಯಾಂಕ್ ಖರ್ಗೆಗೆ ಬೆದರಿಕೆ ಕರೆಗಳು ಬರುತ್ತಿಿರುವ ಹಿನ್ನೆೆಲೆಯಲ್ಲಿ ಪ್ರತಿಕ್ರಿಿಯಿಸಿರುವ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಖರ್ಗೆ ಅವರು ಯಾವುದೇ ತಪ್ಪುು ಮಾಡಿಲ್ಲ. ಆರ್ಎಸ್ಎಸ್ ಕಾರ್ಯಕರ್ತರ ಬೆದರಿಕೆಗೆ ನಾವು ಹೆದರುವುದಿಲ್ಲ. ಸರ್ಕಾರ ಪ್ರಿಿಯಾಂಕ್ ಖರ್ಗೆಗೆ ನೆರವು ನೀಡುತ್ತದೆ. ಅಲ್ಲದೆ ಅವರಿಗೆ ಹಾಗೂ ಕುಟುಂಬದವರಿಗೆ ಭದ್ರತೆ ಒದಗಿಸಲಾಗುವುದು ಎಂದು ಸಿಎಂ ಮೈಸೂರಿನಲ್ಲಿ ಪ್ರತಿಕ್ರಿಿಯೆ ನೀಡಿದ್ದಾರೆ.
ವರದಿ ಬಂದ ನಂತರ ರಾಜ್ಯದಲ್ಲಿ ಆರ್ಎಸ್ಎಸ್ ಚಟುವಟಿಕೆ ನಿಷೇಧ
ನೆರೆಯ ತಮಿಳುನಾಡು ರಾಜ್ಯದ ಮಾದರಿಯಲ್ಲೇ ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಕಾರ್ಯ ಚಟುವಟಿಕೆಗಳನ್ನು ನಿಷೇಧಿಸುವ ಬಗ್ಗೆೆ ಮುಖ್ಯಕಾರ್ಯದರ್ಶಿಗಳು ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದರು.
ಆರ್ಎಸ್ಎಸ್ ಬೆದರಿಕೆಗಳಿಗೆ ಬಗ್ಗಲ್ಲ, ಹೆದರಲ್ಲ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬುಧವಾರ ನಗರ ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆದರಿಕೆ ಕರೆಗಳು ಬರುತ್ತಿಿರುವುದಾಗಿ ಪ್ರಿಿಯಾಂಕ್ ಖರ್ಗೆಯವರು ಖುದ್ದು ತಿಳಿಸಿದ್ದು, ತಮಿಳುನಾಡು ಮಾದರಿಯಲ್ಲಿ ಇಲ್ಲಿಯೂ ನಿಷೇಧ ಮಾಡಬೇಕು ಎಂದು ಹೇಳಿದ್ದಾರೆ. ಅದರಲ್ಲಿ ದೋಷವೇನು ಇಲ್ಲ ಎಂದು ಸಮರ್ಥಿಸಿಕೊಂಡರು.
ತಮಿಳುನಾಡಿನಲ್ಲಿ ಆರ್.ಎಸ್.ಎಸ್. ನಿಷೇಧದ ಬಗ್ಗೆೆ ಮಾಹಿತಿ ಪಡೆಯಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.. ಹಾಗೆಯೇ ಸಚಿವ ಪ್ರಿಿಯಾಂಕ್ ಖರ್ಗೆ ಅವರಿಗೆ ರಕ್ಷಣೆ ಒದಗಿಸಲಾಗುವುದು ಎಂದರು.
ದುಷ್ಟ ಶಕ್ತಿಿಗಳು ಯಾವಾಗಲೂ ಇಂಥದ್ದೇ ಕೆಲಸ ಮಾಡುವುದು. ಬೆದರಿಕೆಗಳಿಗೆ ಪ್ರಿಿಯಾಂಕ್ ಖರ್ಗೆ ಜೊತೆಗೆ ನಾನೂ ಕೂಡ ಹೆದರುವುದು ಇಲ್ಲ. ಬಗ್ಗುವುದು ಇಲ್ಲ ಎಂದು ತಿರುಗೇಟು ನೀಡಿದ ಸಿಎಂ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬೆಂಗಳೂರು ನಗರ ಬಿಟ್ಟರೆ ಬೇರೆಲ್ಲಿಯೂ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಎಂದರು.