ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.15:
ವಾರ್ತಾ ಮತ್ತ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಎಂಪ್ಯಾಾನಲ್ ಆಗುವ ಡಿಜಿಟಲ್ ಮಾಧ್ಯಮಗಳಿಗೆ ನಿಯಮಾನುಸಾರ ಜಾಹೀರಾತು ನೀಡಲು ಪರಿಗಣಿಸಲಾಗುತ್ತದೆ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಿಷತ್ತಿಿನಲ್ಲಿ ಡಾ.ಕೆ.ಶಿವಕುಮಾರ್ ಅವರ ಚುಕ್ಕೆೆ ಗುರುತು ರಹಿತ ಪ್ರಶ್ನೆೆಗೆ ಉತ್ತರ ನೀಡಿರುವ ಸಿದ್ದರಾಮಯ್ಯ, ಸುದ್ಧಿಿ ಪೋರ್ಟಲ್ ಜಾಹಿರಾತು ನೀಡಲು ಡಿಜಿಟಲ್ ಜಾಹೀರಾತು ಮಾರ್ಗಸೂಚಿ- 2024 ಜಾರಿಗೆ ತರಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಡಿಜಿಟಲ್ ಮಾಧ್ಯಮಗಳು ಹೊಂದಿರುವ ವೀಕ್ಷಕರ ಸಂಖ್ಯೆೆಗನುಗುಣವಾಗಿ ಕೇಂದ್ರ ಸರ್ಕಾರದ ಸಿಬಿಸಿ (ಡಿಎವಿಪಿ) ನಿಗದಿ ಪಡಿಸಿರುವ ಕ್ಯಾಾಟಗರಿ ಅನ್ವಯ ಜಾಹೀರಾತು ದರಗಳನ್ನು ನಿಗದಿಪಡಿಸಲಾಗುತ್ತಿಿದ್ದು ಅದರಂತೆ ಇಲಾಖೆ ಅಗತ್ಯ ಸಂದರ್ಭಗಳಲ್ಲಿ ಡಿಜಿಟಲ್ ಮಾಧ್ಯಮಗಳಿಗೆ ಪಾರದರ್ಶಕವಾಗಿ ಜಾಹೀರಾತು ಬಿಡುಗಡೆ ಮಾಡಲಾಗುವುದು. ಆದರೆ, ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರದಿಂದ ಸ್ಟೇಕ್ ಹೋಲ್ಡರ್ ಕನ್ಸಲ್ಟೇಷನ್ ನಡೆಸುವ ಬಗ್ಗೆೆ, ಸದ್ಯಕ್ಕೆೆ ಯಾವುದೇ ವೇಳಾ ಪಟ್ಟಿಿ ಇರುವುದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ವಾರ್ತಾ ಇಲಾಖೆಯ ಮಾನ್ಯತೆ ಪಟ್ಟಿಿಯಲ್ಲಿ ಇಲ್ಲದ ಒಟ್ಟು ಪತ್ರಿಿಕೆಗಳು ಎಷ್ಟು ಹಾಗೂ ಎಷ್ಟು ಜನ ಪತ್ರಕರ್ತರು ನಿರ್ವಹಿಸುತ್ತಿಿದ್ದಾರೆ ಎಂಬ ಪ್ರಶ್ನೆೆಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಮಾನ್ಯತಾ ಪಟ್ಟಿಿಯಲ್ಲಿ ಇಲ್ಲದ ಪತ್ರಿಿಕೆಗಳ ಲಭ್ಯವಿರುವುದಿಲ್ಲ ಎಂದು ಉತ್ತರಿಸಿದ್ದಾರೆ.
ಎಲ್ಲಾ ಪತ್ರಕರ್ತರ ಸಾಮಾಜಿಕ, ಆರ್ಥಿಕ ಸ್ಥಿಿತಿಗತಿ ಕುರಿತು ಸರ್ಕಾರ ಒಂದು ಸಮೀಕ್ಷೆಯನ್ನು ನಡೆಸಲು ಶ್ರಮ ವಹಿಸುವುದೇ ಎಂಬ ಪ್ರಶ್ನೆೆಗೆ, ಈಗಾಗಲೇ ರಾಜ್ಯದಲ್ಲಿ ಪತ್ರಕರ್ತರನ್ನೂ ಒಳಗೊಂಡಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗಿರುವುದರಿಂದ ಪತ್ರಕರ್ತರ ಸಾಮಾಜಿಕ, ಆರ್ಥಿಕ ಸ್ಥಿಿತಿಗತಿ ಕುರಿತು ಪ್ರತ್ಯೇಕ ಸಮೀಕ್ಷೆ ನಡೆಸುವ ಅಗತ್ಯತೆ ಕಂಡು ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಉತ್ತರದಲ್ಲಿ ಹೇಳಿದ್ದಾರೆ.
ನಿವೃತ್ತಿಿ ಹೊಂದಿರುವ ಹಿರಿಯ ಪತ್ರಕರ್ತರಿಗೆ ಮಾಸಾಶನ ನೀಡುವ ವ್ಯವಸ್ಥೆೆಯಿದ್ದು, ಇದನ್ನು ಪಡೆಯಲು ಕಠಿಣ ರೂಪಿಸಲಾಗಿದೆ ನಿಯಮಗಳನ್ನು ಎಂಬುದು ನಿಜವೇ ಎಂಬ ಪ್ರಶ್ನೆೆಗೆ, ರಾಜ್ಯದಲ್ಲಿನ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಸಾಶನ ನೀಡಲು ಸರ್ಕಾರದ ಆದೇಶ ಸಂಖ್ಯೆೆ : ಐಡಿಇವೆ 159 ಪಿಐಎಸ್ 1983 ದಿನಾಂಕ:10-02-1984ರನ್ವಯ ನಿಯಮಾವಳಿಗಳನ್ನು ರೂಪಿಸಿದ್ದು ಸದರಿ ನಿಯಮಗಳನ್ನು ಯೋಜನೆಯ ಉದ್ದೇಶವು ದುರುಪಯೋಗವಾಗದಂತೆ ಹಾಗೂ ನಿಜವಾಗಿಯೂ ಅವಶ್ಯಕತೆಯಿರುವ ಅರ್ಹರಿಗೆ ಈ ಸೌಲಭ್ಯವು ದೊರಕುವಂತಾಗಲು ಕಾಲಕಾಲಕ್ಕೆೆ ಸರಳೀಕರಿಸಿ ಪರಿಷ್ಕರಿಸಲಾಗುತ್ತಿಿದೆ ಎಂದಿದ್ದಾರೆ.

