ಸುದ್ದಿಮೂಲ ವಾರ್ತೆ
ಹೊಸಕೋಟೆ,26:ಸಹಕಾರ ಸಂಘಗಳು ರೈತರ ಜೀವನಾಡಿಗಳಾಗಿವೆ, ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು
ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಸದಸ್ಯರು ಪ್ರಯೋಜನ ಪಡೆದು ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಕಾರಹಳ್ಳಿ ಹಾಗೂ ಸಿದ್ದನಹಳ್ಳಿಯಲ್ಲಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಲಾಭಾಂಶದಲ್ಲಿ 8 ಲಕ್ಷ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರೈತರಿಗೆ ಸರಕಾರ ನೇರವಾಗಿ ಸವಲತ್ತುಗಳು ನೀಡಲು ಸಾಧ್ಯವಿಲ್ಲ ಎಂಬುದನ್ನು ಅರಿತು ಸಹಕಾರ ಸಂಘಗಳ ಮುಖೇನ ರೈತರ ಬೇಡಿಕೆಗಳಿಗೆ ತಕ್ಕಂತೆ, ಯೋಜನೆ ರೂಪಿಸಿ,ರೈತ ಕುಟುಂಬಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಪ್ರಯತ್ನ ಮಾಡುತ್ತಿವೆ.
ಸತತ ರೈತರ ಸೇವೆಯಲ್ಲಿ ತೊಡಗಿರುವ ನೆಲವಾಗಿಲು ಸಹಕಾರಿ ಸಂಘ ಲಾಭ ಗಳಿಸುವುದರಲ್ಲಿ ಮುಂದಿದೆ.
ನೆಲವಾಗಿಲು ಸಹಕಾರ ಸಂಘದ ವ್ಯಾಪ್ತಿಯಲ್ಲಿ 32 ಹಳ್ಳಿಗಳು ಒಳಗೊಂಡಿದ್ದು,ಅನ್ನಭಾಗ್ಯ ಯೋಜನೆಯ ಪಡಿತರವನ್ನು ಜನರು ಕಿಲೋ ಮೀಟರ್ ದೂರ ಕ್ರಮಿಸಿ
ಬೇರೊಂದು ಗ್ರಾಮದಲ್ಲಿ ಪಡೆಯಬೇಕಾಗಿತ್ತು. ಸಂಸದ ಬಚ್ಚೇಗೌಡರು ಹಾಗೂ ಶಾಸಕರ ಅನುದಾನದಲ್ಲಿ 8 ಗ್ರಾಮಗಳಲ್ಲಿ ಪಡಿತರ ಕೇಂದ್ರವನ್ನು ನಿರ್ಮಿಸಿದ್ದು, ಸಂಘದ ಲಾಭಾಂಶದಲ್ಲಿ ಕಾರಹಳ್ಳಿ ಹಾಗೂ ಸಿದ್ದನಹಳ್ಳಿ ಪಡಿತರ ವಿತರಣಾ ಘಟಕ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೇ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಬಿ. ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವೀಂದ್ರ, ತಾಪಂನ ಮಾಜಿ ಸದಸ್ಯ ಬೀರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಉದ್ಯಮಿ ಎಂ. ಮಂದೀಪ್ಗೌಡ, ಸಂಘದ ಅಧ್ಯಕ್ಷ ಕೆ. ಮಂಜುನಾಥ್, ಉಪಾಧ್ಯಕ್ಷ ಎನ್. ಮಂಜುನಾಥ್, ಸಿಇಒ ಗುರುದೇವ್, ನಿರ್ದೇಶಕರಾದ ಎನ್.ಡಿ. ರಮೇಶ್, ಎಸ್. ಮಂಜುನಾಥ್, ಹೆಚ್.ಕೆ. ನಾರಾಯಣಗೌಡ, ಶ್ರೀನಿವಾಸ್, ರವಿಶಂಕರ್, ಟಿ. ಮುನಿರಾಜು, ಎ.ಆರ್. ಕೃಷ್ಣಪ್ಪ, ಗ್ರಾಪಂನ ಅಧ್ಯಕ್ಷೆ ವಸಂತ ಲೋಕೇಶ್, ಸದಸ್ಯರಾದ ರುಕ್ಮಣಿ ಮಂಜುನಾಥ್, ಸೊಣ್ಣೇಗೌಡ, ಶಿಲ್ಪಶ್ರೀ ಮುನಿರಾಜು, ಸುರೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.