ಸುದ್ದಿಮೂಲ ವಾರ್ತೆ
ತಿಪಟೂರು, ಸೆ. 26 : ಸಹಕಾರ ಸಂಘಗಳು ಪ್ರಾಮಾಣಿಕತೆ, ಸಹಕಾರಿ ತತ್ವ ಹಾಗೂ ಸೇವಾ ಮನೋಭಾವನೆ ಮೂಲಕ ವ್ಯವಹಾರ ನಡೆಸಿದಾಗ ಮಾತ್ರ ಸಮಾಜದಲ್ಲಿ ಮಾದರಿ ಸಂಘಗಳಾಗಿ ಬೆಳೆಯಲು ಸಾಧ್ಯ ಎಂದು ಗುರುಪರ ದೇಶಿಕೇಂದ್ರ ಸ್ವಾಮೀಜಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆರೆಗೋಡಿ ರಂಗಾಪುರ ಸ್ವಾಮೀಜಿ ತಿಳಿಸಿದರು.
ನಗರದ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಸಂಘದ 2ನೇ ವರ್ಷದ ಹಾಗೂ 2022-23ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಆರ್ಶೀವಚನ ನೀಡಿದರು.
ಇಂದು ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಂಘಗಳು, ರೈತ ಸೇವಾ ಸಹಕಾರ ಸಂಘಗಳು ಗಟ್ಟಿಯಾಗಿ ನೆಲೆಯೂರಿ ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟ ಸುಧಾರಿಸಲು ಅನುಕೂಲವಾಗಿವೆ. ಮುಂದಿನ ದಿನಗಳಲ್ಲಿ ಸರ್ಕಾರ ಪ್ರತಿಯೊಂದೂ ಹಳ್ಳಿಗಳಲ್ಲೂ ಒಂದೊಂದು ಸಹಕಾರಿ ಸಂಘಗಳನ್ನು ಸ್ಥಾಪಿಸಿ ಆ ಮೂಲಕ ರೈತರಿಗೆ, ಕೃಷಿಗೆ ಅಗತ್ಯ ಆರ್ಥಿಕ ನೆರವು ನೀಡಬೇಕು. ಅರ್ಹರು ತಮ್ಮ ಅಗತ್ಯಗಳಿಗೆ ಆರ್ಥಿಕ ನೆರವು ಪಡೆದು ಸಕಾಲಕ್ಕೆ ಮರುಪಾವತಿಸಿ, ಇತರೆ ಸದಸ್ಯರುಗಳು ಸಹ ಆರ್ಥಿಕ ನೆರವು ಪಡೆಯಲು ಸಹಕರಿಸಬೇಕಿದೆ ಎಂದರು.
ಇತ್ತೀಚೆಗೆ ಸಾಕಷ್ಟು ಸಂಘಗಳಲ್ಲಿ ಆರ್ಥಿಕ ನೆರವು ಪಡೆದವರು ಸಕಾಲಕ್ಕೆ ಹಿಂತಿರುಗಿಸದೆ ಸಹಕಾರಿ ಸಂಘಗಳ ಮೇಲೆ ನಂಬಿಕೆ ಇಟ್ಟು ಠೇವಣಿ ಇಡುವವರಿಗೆ ತೊಂದರೆ ಮತ್ತು ಸಂಘಗಳ ವ್ಯವಹಾರಕ್ಕೂ ಕುತ್ತು ಬಂದು ಸಹಕಾರಿ ಸಂಘಗಳಿಗೆ ಬರುವುದನ್ನು ಕಾಣುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಶಿವಶಂಕರ್, ತಡಸೂರು ಸುರೇಶ್, ತರಕಾರಿ ನಾಗರಾಜು, ಪ್ರಾಂಶುಪಾಲ ಭರತ್ ಮತ್ತಿತರರಿದ್ದರು.