ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.21:
ಪಟ್ಟಣದ ವಿವಿಧೋದ್ದೇಶ ಪ್ರಾಾಥಮಿಕ ಗ್ರಾಾಮೀಣ ಕೃಷಿ ಪತ್ತಿಿನ ಸಹಕಾರ ಸಂಘದ 63 ನೇ ವರ್ಷದ ವಾರ್ಷಿಕೋತ್ಸವವನ್ನು ರೈತರ ವಂತಿಕೆ ಹಣದಿಂದ ಸಹಕಾರ ಸಂಘದ ಕಛೇರಿಯನ್ನು ಸುಣ್ಣಬಣ್ಣ ಹಚ್ಚಿಿ ವಿದ್ಯುತ್ ದೀಪಗಳಿಂದ ಶೃಂಗರಿಸಿ ಸಹಕಾರ ಸಂಘದಲ್ಲಿ ಗಚ್ಚಿಿನಮಠದ ಮೃತ್ಯುಂಜಯಸ್ವಾಾಮಿ ಪೌರೋಹಿತ್ಯದಲ್ಲಿ
ಶ್ರೀಮಹಾಲಕ್ಷ್ಮೀ ಪೂಜೆ ನೆರವೆರಿಸುವುದರ ಮೂಲಕ ಸಂಭ್ರಮ ಆಚರಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ 1958 ರಲ್ಲಿ ರೈತರ ಸೇವಾಸಹಕಾರ ಸಂಘವಾಗಿ ಆರಂಭವಾಗಿ ಸಂಘವು ಹಲವು ಏಳು ಬೀಳುಗಳನ್ನು ಕಂಡು, ವ್ಯವಸಾಯ ಸೇವಾಸಹಕಾರ ಸಂಘವಾಗಿ, ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರ ಸಂಘವಾಗಿ ಬೆಳೆದು,ನೂರಾರು ರೈತರ ಬಾಳಿಗೆ ಬೆಳಕು ನೀಡಿದೆ. ಸಂಘ ಹೆಚ್ಚಿಿನ ಅಭಿವೃದ್ಧಿಿ ಹೊಂದಲು ಸಂಘದ ಯೋಜನೆಗಳನ್ನು ಪಡೆದ ಷೇರುದಾರರು, ಗ್ರಾಾಹಕರು ಸಕಾಲದಲ್ಲಿ ಸಾಲ ಮರು ಪಾವತಿಸಿ, ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಸಂಘದ ಮುಖ್ಯಕಾರ್ಯ ನಿರ್ವಾಹಕ ವೀರಭದ್ರಯ್ಯ, ನಿರ್ದೇಶಕರಾದ ಅಮರಯ್ಯಸ್ವಾಾಮಿ, ರುದ್ರಪ್ಪಗಾಳಿ, ಹಜರತಲಿನಾಯ್ಕ್ ಶಶಿಧರ ಪೊಲೀಸ್ ಪಾಟೀಲ್, ಸಿದ್ದಯ್ಯಸ್ವಾಾಮಿ, ಈರಪ್ಪನಾಯಕ, ಗ್ಯಾಾನಪ್ಪ, ಮಾಣಿಕ್ಯೆೆಮ್ಮ, ಹುಚ್ಚಮ್ಮ ಸೇರಿದಂತೆ ಸಂಘದ ಮಾಜಿ ಅಧ್ಯಕ್ಷಕು, ಮಾಜಿ ನಿರ್ದೇಶಕರು, ಷೇರುದಾರರು ಗ್ರಾಾಹಕರು ರೈತ ಮುಖಂಡರು, ಸಹಕಾರ ಸಂಘದ ಇತರೆ ಅಧಿಕಾರಿಗಳು ಸಿಬ್ಬಂದಿಗಳು, ಮತ್ತಿಿತರರು ಪಾಲ್ಗೊೊಂಡಿದ್ದರು. ಅನ್ನ ಸಂತರ್ಪಣೆ ಸೇರಿದಂತೆ ಇನ್ನಿಿತರ ಕಾರ್ಯಕ್ರಮಗಳು ಜರುಗಿದವು.
ಸಹಕಾರ ಸಂಘದ ವಾರ್ಷಿಕೋತ್ಸವ : ರೈತರಿಂದ ಸಂಭ್ರಮ ಆಚರಣೆ ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸಲು ರಾಘವೇಂದ್ರ ಕುಲಕರ್ಣಿ ಸಲಹೆ

