ಸುದ್ದಿಮೂಲ ವಾರ್ತೆ ರಾಯಚೂರು, ಡಿ.20
ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ ಡಿಸೆಂಬರ್ 21ರವರೆಗೆ ರಾಯಚೂರು ಜಿಲ್ಲೆಯಾದ್ಯಂತ ಬೆಳಗಿನ ಜಾವ ತೀವ್ರ ಶೀತ ಗಾಳಿ ಬೀಸುವ ಸಾಧ್ಯತೆಯಿರುತ್ತದೆ. ಹಾಗೂ ಸಾಮಾನ್ಯ ತಾಪಮಾನಕ್ಕಿಿಂತ 4-6 ಡಿಗ್ರಿಿ ಸೆಲ್ಸಿಿಯಸ್ ನಷ್ಟು ಕಡಿಮೆ ಆಗುವ ಸಾಧ್ಯತೆರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸಲಹೆ ಮಾಡಿದ್ದಾರೆ.
ಶೀತಕ್ಕೆೆ ದೀರ್ಘಕಾಲದವರೆಗೆ ಒಡ್ಡಿಿಕೊಳ್ಳುವುದನ್ನು ತಪ್ಪಿಿಸಬೇಕು. ಮದ್ಯಪಾನ ಮಾಡಬೇಡಿ. ಇದು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದು ವಾಸ್ತವವಾಗಿ ನಿಮ್ಮ ರಕ್ತನಾಳಗಳನ್ನು ಕಿರಿದಾಗಿಸುತ್ತದೆ. ವಿಶೇಷವಾಗಿ ಕೈಯಲ್ಲಿ ಇದು ಲಘೋಷ್ಣತೆಯ ಅಪಾಯವನ್ನು ಹೆಚ್ಚಿಿಸುತ್ತದೆ.
ನಡುಗುವುದನ್ನು ನಿರ್ಲಕ್ಷಿಸಬೇಡಿ ಏಕೆಂದರೆ ದೇಹವು ಶಾಖವನ್ನು ಕಳೆದುಕೊಳ್ಳುವ ಮೊದಲ ಸಂಕೇತವಾಗಿರುತ್ತದೆ. ಆದ್ದರಿಂದ ಮನೆಯೊಳಗೆ ವಿಶ್ರಾಾಂತಿ ಪಡೆಯಿರಿ. ಸಂಪೂರ್ಣವಾಗಿ ಎಚ್ಚರಗೊಳ್ಳದ ಹೊರತು ಪೀಡಿತ ವ್ಯಕ್ತಿಿಗೆ ಯಾವುದೇ ದ್ರವವನ್ನು ನೀಡಬಾರದು ಎಂದು ಸಲಹೆ ನೀಡಿದ್ದಾಾರೆ.

