ಸುದ್ದಿಮೂಲ ವಾರ್ತೆ ರಾಯಚೂರು , ಡಿ.11:
ರಾಯಚೂರಿನ ಸೋಮವಾರ ಪೇಟೆ ಹಿರೇಮಠದಲ್ಲಿ ಡಿ.13 ಹಾಗೂ 14ರಂದು ಪಂ. ಪುಟ್ಟರಾಜ ಗವಾಯಿಗಳ 15ನೇ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ಸಮ್ಮೇಳನ ಹಮ್ಮಿಿಕೊಳ್ಳಲಾಗಿದೆ ಎಂದು ಡಾ.ಪಂ.ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎ.ಎಸ್.ರಘುಕುಮಾರ , ಖಜಾಂಚಿ ಪಿ.ಚಿನ್ನಯ್ಯಸ್ವಾಾಮಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಗೀತ ಕಲಾವಿದರು ಪಾಲ್ಗೊೊಂಡು ಪುಟ್ಟರಾಜ ಗವಾಯಿಗಳವರ ಪುಣ್ಯಸ್ಮರಣೆಯ ಸಾರ್ಥಕಗೊಳಿಸಲಿದ್ದಾಾರೆ ಎಂದರು.
ಡಿ.13ರಂದು ಸೋಮವಾರಪೇಟೆ ಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ಸಾನ್ನಿಿಧ್ಯ ವಹಿಸಲಿದ್ದುಘಿ, ಕಿಲ್ಲೆೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು, ಮಂಗಳವಾರಪೇಟೆ ಮಠದ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯರು ಉದ್ಘಾಾಟಿಸಲಿದ್ದಾಾರೆ. ಸಚಿವ ಎನ್.ಎಸ್.ಬೋಸರಾಜ್, ಶಿವರಾಜ ತಂಗಡಗಿ ಸೇರಿ ಹಲವರು ಭಾಗಿಯಾಗಲಿದ್ದಾಾರೆ. ಕಲಾವಿದರಾದ ದೇವೇಂದ್ರ ಪತ್ತಾಾರ, ವಿದ್ಯಾಾಶ್ರೀಸಾಲಿಮಠ ಪವನ್ ಅರಳಿಕಟ್ಟಿಿಘಿ, ಎಚ್.ಮೃತ್ಯುಂಜಯ ಮತ್ತಿಿತರರು ಸಂಗೀತ ಸೇವೆ ಸಲ್ಲಿಸಲಿದ್ದಾಾರೆ.
ಡಿ.14ರಂದು ಬಸವರಾಜ ಗಬ್ಬೂರು, ವಿರೂಪಾಕ್ಷಯ್ಯ ಸ್ವಾಾಮಿ ವಂದಲಿ, ಸಮೀರಣ ಜೋಶಿ ಮತ್ತಿಿತರರು ಹಿಂದುಸ್ತಾಾನಿ ಶಾಸೀಯ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಟ್ರಸ್ಟ್ ಅಧ್ಯಕ್ಷ ಈರಣ್ಣ ಹೂಗಾರ ಜಾಲಿಬೆಂಚಿ, ಸದಸ್ಯ ಚೇತನಕುಮಾರ ಇದ್ದರು.
ಪಂ.ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಡಿ.13 ರಿಂದ ಎರಡು ದಿನ ಸಂಗೀತ ಸಮ್ಮೇಳನ

