ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.12:
ರಾಜ್ಯ ಸರ್ಕಾರವು ಬಡವರಿಗೆ ಮನೆ ಮತ್ತು ಜಮೀನಿನ ಮಾಲೀಕತ್ವದ ಕಾನೂನುಬದ್ಧ ಹಕ್ಕು ನೀಡುವ ಪ್ರಮುಖ ಕಾರ್ಯಕ್ರಮವಾದ ಹಕ್ಕುಪತ್ರ ಸೌಲಭ್ಯವನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ಕಲಬುರಗಿ ಪ್ರಾಾದೇಶಿಕ ಆಯುಕ್ತರಾದ ಜಹೀರಾ ನಾಸೀಮ್ ಅವರು ಹೇಳಿದರು.
ಗುರುವಾರ ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಭೂ ಮಾಲೀಕತ್ವವಿಲ್ಲದ ಬಡವರಿಗೆ, ಪ್ರಮುಖವಾಗಿ ಕಂದಾಯ ಗ್ರಾಾಮಗಳಲ್ಲಿ ಭೂಮಿಯ ಹಕ್ಕನ್ನು ನೀಡುವುದು ಸರ್ಕಾರದ ಧ್ಯೇಯೋದ್ದೇಶವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಹಕ್ಕುಪತ್ರ ಸೌಲಭ್ಯ ತಲುಪಿಸುವಲ್ಲಿ ಪ್ರಗತಿ ಸಾಧಿಸಬೇಕು. ಕಂದಾಯ ಗ್ರಾಾಮಗಳನ್ನಾಾಗಿ ಘೋಷಿಸಲು ಬಾಕಿ ಇರುವ ವಿವಿಧ ತಾಲ್ಲೂಕುಗಳ ಗ್ರಾಾಮಗಳನ್ನು ಗುರುತಿಸಿಬೇಕು ಎಂದರು.
ಪ್ರಗತಿ ಸಾಧಿಸಿ:
ಜಿಲ್ಲೆಯಲ್ಲಿ ಮೃತರ ಹೆಸರಿನಲ್ಲಿರುವ ಜಮೀನುಗಳು ಅವರ ವಾರಸುದಾರರಿಗೆ ಜಮೀನುಗಳ ಖಾತೆ ಬದಲಾವಣೆ ಮಾಡಿಕೊಡಬೇಕು. ಈಗಾಗಲೇ ಇ-ಪೌತಿ ಖಾತೆ ಅಭಿಯಾನ ನಡೆಸಲಾಗುತ್ತಿಿದ್ದು, ಜಿಲ್ಲೆಯಲ್ಲಿ ಬಾಕಿ ಪ್ರಕರಣಗಳನ್ನು ಮುಕ್ತಾಾಯಗೊಳಿಸುವ ಮೂಲಕ ಪ್ರಗತಿ ಸಾಧಿಸಿಬೇಕು ಎಂದು ಆಯುಕ್ತರು ಹೇಳಿದರು.
ಜಿಲ್ಲಾಧಿಕಾರಿಗಳ ಕೋರ್ಟ್ ನಲ್ಲಿನ ಮೇಲ್ಮನವಿ ಪ್ರಕರಣಗಳು, ಉಪವಿಭಾಗಾಧಿಕಾರಿ ಕೋರ್ಟ್ ಮತ್ತು ವಿವಿಧ ತಹಶೀಲ್ದಾಾರ್ ಕೋರ್ಟ್ ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸಬೇಕು. ಭೂಮಿ ವಿಭಾಗದಲ್ಲಿನ ಬಾಕಿ ಪ್ರಕರಣಗಳನ್ನು ನಿಯಮಾನುಸಾರ ಮುಕ್ತಾಾಯಗೊಳಿಸಬೇಕು ಎಂದು ತಿಳಿಸಿದರು.
ದರ್ಖಾಸ್ತು ಮತ್ತು ಬಗರ್ ಹುಕುಂ ಅಡಿಯಲ್ಲಿ ಮಂಜೂರಾದ ಜಮೀನುಗಳು ರೈತರ ಹೆಸರಿಗೆ ಪೋಡಿ ಆಗದೇ ಉಳಿದಿವೆ. ಇದರಿಂದ ರೈತರಿಗೆ ಬ್ಯಾಾಂಕ್ ಸಾಲ ಪಡೆಯಲು, ಪಾಲುವಿಭಾಗ ಮಾಡಿಕೊಳ್ಳಲು, ಮಾರಾಟ ಮಾಡಲು ತೊಂದರೆಯಾಗುತ್ತಿಿದೆ. ಇದನ್ನು ಸರಿಪಡಿಸಲು ‘ನನ್ನ ಭೂಮಿ’ ಎಂಬ ವಿಶೇಷ ಅಭಿಯಾನ ಆರಂಭಿಸಲಾಗಿದೆ ಎಂದು ವಿವರಿಸಿದರು.
ಭೂ ಸುರಕ್ಷಾ ಯೋಜನೆಯಡಿ ಭೂ ದಾಖಲೆಗಳ ಆನ್ ಲೈನ್ ಸ್ಕ್ಯಾಾನ್ ನಲ್ಲಿ ಜಿಲ್ಲೆಯ ಉತ್ತಮ ಪ್ರಗತಿ ಸಾಧಿಸಿದ್ದು, ಜನರು ಆನ್ಲೈ ಮೂಲಕವೇ ತಮ್ಮ ದಾಖಲೆಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಸೇರಿದಂತೆ ಐದು ತಾಲ್ಲೂಕುಗಳ ತಹಶೀಲ್ದಾಾರರು, ಕಂದಾಯ ನಿರೀಕ್ಷಕರು, ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ-ಸಿಬ್ಬಂದಿ ಉಪಸ್ಥಿಿತರಿದ್ದರು.
ಹಕ್ಕುಪತ್ರ ಸೌಲಭ್ಯ ತಲುಪಿಸಿ: ಆಯುಕ್ತೆ ಜಹೀರಾ ನಾಸೀಮ್

