ಸುದ್ದಿಮೂಲ ವಾರ್ತೆ ಕವಿತಾಳ, ಡಿ.22:
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿರುವ ಸ್ಪರ್ಧಾತ್ಮಕ ಮನೋಭಾವ ಹೆಚ್ಚುತ್ತದೆ ಎಂದು ಇರಕಲ್ ಮಠದ ಬಸವಪ್ರಸಾದ ಸ್ವಾಾಮೀಜಿ ಹೇಳಿದರು.
ಸಮೂಹ ಸಂಪನ್ಮೂಲ ಕೇಂದ್ರ ತೋರಣದಿನ್ನಿಿ ಹಾಗೂ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆ ಇವರ ಸಂಯುಕ್ತಾಾಶ್ರಯದಲ್ಲಿ ಸೋಮವಾರ ಹಮ್ಮಿಿಕೊಂಡಿದ್ದ 2025 -26 ನೇ ಸಾಲಿನ ತೋರಣದಿನ್ನಿಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳು ಉತ್ತಮವಾಗಿ ಪ್ರತಿಭೆ ಪ್ರದರ್ಶಿಸಿ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆೆ ಹೋಗಬೇಕು ಎಂದು ಹಾರೈಸಿದರು.
ಛದ್ಮವೇಷ, ಚಿತ್ರ ಕಲೆ, ಭಕ್ತಿಿಗೀತೆ, ನೃತ್ಯ, ರಸ ಪ್ರಶ್ನೆೆ, ಜಾನಪದ ಗೀತೆ, ರಂಗೋಲಿ, ಕತೆ ಹೇಳುವುದು, ಭರತ ನಾಟ್ಯ, ಪ್ರಬಂಧ ರಚನೆ, ಮಿಮಿಕ್ರಿಿ ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿದರು. ಸಿ ಆರ್ ಪಿ ಮಹೇಶ ಪ್ರಾಾಸ್ತಾಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಾಮ ಪಂಚಾಯತಿ ಅಧ್ಯಕ್ಷ ಈರಣ್ಣ ಮಲ್ಕಾಾಪುರು, ಗ್ರಾಾಮ ಪಂಚಾಯತಿ ಉಪಾಧ್ಯಕ್ಷ ಹನುಮೇಶ ನಾಯಕ, ಎಸ್ ಡಿ ಎಂ ಸಿ ಅಧ್ಯಕ್ಷೆ ಭಾಗ್ಯವಂತಿ ಅಮ್ಮ ಹಿರೇದಿನ್ನಿಿ, ಎಸ್ ಡಿ ಎಂ ಸಿ ಅಧ್ಯಕ್ಷ ಹುಚ್ಚಪ್ಪ ನಾಯಕ, ಉಮಾಪತಿ ಬಾರಿಕೇರ, ಮಂಜುನಾಥ ಹಾಲಾಪುರ, ಅರವಿಂದ ಪಾಟೀಲ್, ಹನುಮಂತ್ರಾಾಯ ದೇಸಾಯಿ, ಚನ್ನವೀರ ಜೋತನ್, ಮಲ್ಲಿಕಾರ್ಜುನ, ಜಾನಕಿ ರೇಣುಕಾರಾಜಾ ಮತ್ತು ಎಲ್ಲ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು, ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
‘ಪ್ರತಿಭಾ ಕಾರಂಜಿಯಿಂದ ಸ್ಪರ್ಧಾ ಮನೋಭಾವ ಇಮ್ಮಡಿ’

