ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ರಾಯಚೂರು ಜಿಲ್ಲೆೆಯ ಮಾಜಿ ಸೈನಿಕರಿಗೆ ಜಿಲ್ಲಾಾಡಳಿತದಿಂದ ಯಾವುದೆ ಸೌಲಭ್ಯಗಳನ್ನು ನೀಡುತ್ತಿಿಲ್ಲ ಎಂದು ಕರ್ನಾಟಕ ರಾಜ್ಯ ಲೋಕಾಯುಕ್ತ ತಂಡದ ಮುಂದೆ ದೂರು ಸಲ್ಲಿಸಲಾಯಿತು.
ಇಂದು ಜಿಲ್ಲಾಾಡಳಿತದ ಸಭಾ ಭವನದಲ್ಲಿ ಅಧಿಕಾರಿಗಳ ಸಭೆಯ ನಂತರ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರಾಯಚೂರು ಜಿಲ್ಲೆೆಯಲ್ಲಿನ ನಿವೃತ್ತ ಮಾಜಿ ಸೈನಿಕರಿಗೆ ಸಿಗಬೇಕಾದ ಸೌಕರ್ಯಗಳನ್ನು ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾಾರೆ ಎಂದು ದೂರಿದರು.
ತಾಲೂಕಿನ ಸಿದ್ರಾಾಂಪೂರು ಸೀಮಾಂತರದಲ್ಲಿ 2015-16ರಲ್ಲಿ 3 ಎಕರೆ ಮಾಜಿ ಸೈನಿಕರಿಗೆ ಕಲ್ಯಾಾಣ ಭವನ, ಮನೆ ನಿರ್ಮಾಣಕ್ಕಾಾಗಿ ನೀಡಿದ ನಿವೇಶನ ಅಭಿವೃದ್ದಿ ಪಡಿಸಿಕೊಂಡ ಮೇಲೆ ಅಂದಿನ ಜಿಲ್ಲಾಾಧಿಕಾರಿ ರದ್ದು ಪಡಿಸಿ ಇದುವರೆಗೂ ಮಂಜೂರು ಮಾಡುತ್ತಿಿಲ್ಲ ಎಂದು ದೂರಿದರು. 2021ರಲ್ಲಿ ಆರ್ಡಿಎ ಮೂಲಕ ಸಮುದಾಯ ಭವನ, ನೌಕರರ ಸಂಘದ ಕಚೇರಿಗಾಗಿ 2 ಲಕ್ಷ 37 ಸಾವಿರ ಖರ್ಚು ಮಾಡಿ ಭರಿಸಿದರೂ ಈಗಲೂ ಹಸ್ತಾಾಂತರಿಸುತ್ತಿಿಲ್ಲ
ಈ ಬಗ್ಗೆೆ ಹಲವು ಬಾರಿ ಗಮನಕ್ಕೆೆ ತಂದರೂ ಕ್ರಮವಾಗುತ್ತಿಿಲ್ಲಘಿ, ನಮ್ಮ ಹಣವೂ ಖರ್ಚು ಮಾಡಿಕೊಂಡಿದ್ದು ಪ್ರಯೋಜನವಿಲ್ಲದಂತಾಗಿದ್ದು ದೇಶ ಸೇವೆ ಮಾಡಿ ಬಂದ ಸೈನಿಕರಿಗೆ ಅಧಿಕಾರಿಗಳು ನಡೆಸಿಕೊಳ್ಳುವ ರೀತಿ ಬೇಸರ ತಂದಿದೆ ಎಂದು ದೂರಿದರು.ಅಲ್ಲದೆ, ರಾಯಚೂರು ನಗರದಲ್ಲಿ ಸೈನಿಕರ ಯುದ್ಧ ಸ್ಮಾಾರಕ ನಿರ್ಮಿಸಬೇಕು ಆ ಮೂಲಕ ವೀರಮರಣ ಅಪ್ಪಿಿದ ಸೈನಿಕರಿಗೆ ಗೌರವ ಸಮರ್ಪಣೆಗೆ ಅನುಕೂಲ ಮಾಡಿಕೊಡಬೇಕು, ಕೇಂದ್ರದ ಇಸಿಎಚ್ಎಸ್ ಆರೋಗ್ಯ ಯೋಜನೆ ಜಾರಿಗೆ ತಂದಿದ್ದು ಜಿಲ್ಲೆೆಯಲ್ಲಿ ಜಾರಿಗೊಳಿಸಲು ಜಿಲ್ಲಾಾಧಿಕಾರಿಗೆ ಸೂಚನೆ ನೀಡಲು ಮನವಿ ಮಾಡಿದರು.
ಸೈನಿಕ ಶಾಲೆ ಆರಂಭಿಸಬೇಕು, ಸೈನಿಕರ ಮಕ್ಕಳಿಗೆ ವೃತ್ತಿಿ ಕೌಶಲ್ಯ ಕೋರ್ಸ್ಗಳಲ್ಲಿ ಮೀಸಲಾತಿ ಒದಗಿಸಬೇಕು, ಯಾದಗಿರಿ, ರಾಯಚೂರು ಮಧ್ಯೆೆ ಸೈನಿಕರ ಪುನರ್ವಸತಿ ಕಚೇರಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆೆ ಲೋಕಾಯುಕ್ತದ ಕಾರ್ಯದರ್ಶಿ, ಅಪರ ನಿಬಂಧಕರು ಅರ್ಜಿ ಪರಿಶೀಲಿಸಿ ಕ್ರಮ ವಹಿಸಲು ಅಲ್ಲಿಯೇ ಇದ್ದ ಜಿಲ್ಲಾಾಧಿಕಾರಿಗೆ ಸೂಚಿಸಿದರು.
ಲೋಕಾಯುಕ್ತರಿಗೆ ಮಾಜಿ ಸೈನಿಕರಿಂದ ದೂರು ಸೈನಿಕರ ನಿವೇಶನ, ಸೌಲಭ್ಯಗಳಿಗೆ ಮೊರೆ

